ಮುಂಬೈ: ಭಾರತೀಯ ಮಹಿಳಾ ತಂಡದ ಉಪನಾಯಕಿ ಸ್ಮೃತಿ ಮಂದಾನ (Smriti Mandhana) ಡಬ್ಲ್ಯೂಪಿಎಲ್ 2023ರ (WPL 2023) ಉದ್ಘಾಟನಾ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಹಿಳಾ ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
From one No. 18 to another, from one skipper to another, Virat Kohli and Faf du Plessis announce RCB’s captain for the Women’s Premier League – Smriti Mandhana. #PlayBold #WPL2023 #CaptainSmriti @mandhana_smriti pic.twitter.com/sqmKnJePPu
— Royal Challengers Bangalore (@RCBTweets) February 18, 2023
ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಈ ವಿಚಾರವನ್ನು ದೃಢಪಡಿಸಿದೆ. ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಹಾಗೂ ಹಾಲಿ ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್ (Faf du Plessis) ಸಹ ವಿಶೇಷ ಸಂದೇಶ ನೀಡಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಅತ್ಯಂತ ವಿಶೇಷವಾದ ಆರ್‌ಸಿಬಿ ತಂಡವನ್ನು ಮುನ್ನಡೆಸುವ ಮತ್ತೊಂದು ಸಂಖ್ಯೆ 18ರ ಸಮಯ ಇದಾಗಿದೆ ಎಂದು ಹೇಳಲಾಗಿದೆ. ಏಕೆಂದರೆ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಸ್ಮೃತಿ ಮಂದಾನ ಅವರ ಜೆರ್ಸಿ ಸಂಖ್ಯೆ ನಂ.18 ಆಗಿದೆ.
ಕೊಹ್ಲಿ ಹೇಳಿದ್ದೇನು?
ವೀಡಿಯೋ ಮೂಲಕ ವಿಶೇಷ ಸಂದೇಶ ನೀಡಿರುವ ವಿರಾಟ್ ಕೊಹ್ಲಿ, ಸ್ಮೃತಿ ನಿಮಗೆ ಅತ್ತುತ್ತಮವಾಗಿ ಅಭಿಮಾನಿಗಳ ಬೆಂಬಲವಿದೆ. ಉತ್ತಮವಾಗಿ ಆಡಿ ಎಂದಿದ್ದಾರೆ. ಫಾಫ್ ಡು ಪ್ಲೆಸಿಸ್, ಆರ್‌ಸಿಬಿಯನ್ನು ಮುನ್ನಡೆಸುವ ಎಲ್ಲಾ ಗುಣಲಕ್ಷಣಗಳನ್ನು ನಮ್ಮ ಮಹಿಳಾ ನಾಯಕಿ ಸ್ಮೃತಿ ಹೊಂದಿದ್ದಾರೆ. ಈ ಬಗ್ಗೆ ನನಗೆ ತುಂಬಾ ವಿಶ್ವಾಸವಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಆರ್‌ಸಿಬಿ ನಾಯಕತ್ವ ಪಡೆದ ನಂತರ ಮಂದಾನ ಫ್ರಾಂಚೈಸಿಯನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡೊಯ್ಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನನಗೆ ಈ ಅದ್ಭುತ ಅವಕಾಶ ನೀಡಿದ ಆರ್‌ಸಿಬಿ ತಂಡಕ್ಕೆ ಧನ್ಯವಾದ. ಆರ್‌ಸಿಬಿಯನ್ನು ಯಶಸ್ಸಿನತ್ತ ಮುನ್ನಡೆಸಲು ಶೇ.100 ರಷ್ಟು ಶ್ರಮವಹಿಸುತ್ತೇನೆ ಎಂದು ಹೇಳಿದ್ದಾರೆ.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k