– ಫೆಬ್ರವರಿ 23 ರಿಂದಲೇ ಮಹಿಳಾ ಪ್ರೀಮಿಯರ್ ಲೀಗ್ ಆರಂಭ
ಬೆಂಗಳೂರು: ಇದೇ ಫೆಬ್ರವರಿ 23 ರಿಂದ 2ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ (WPL 2024) ಆರಂಭವಾಗುತ್ತಿದ್ದು, ಬಿಸಿಸಿಐ ಸಕಲ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಐದು ತಂಡಗಳು ತಮ್ಮ ತವರು ಕ್ರೀಡಾಂಗಣಗಳಲ್ಲಿ ಅಭ್ಯಾಸ ಆರಂಭಿಸಿದೆ. ಇಂದು (ಸೋಮವಾರ) ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ (RCB Womens) ಫೋಟೋಶೂಟ್ ಮಾಡಿಸಿದ್ದು, ತನ್ನ ಸೋಶಿಯಲ್ ಮೀಡಿಯಾ X ಖಾತೆಯಲ್ಲಿ ಹಂಚಿಕೊಂಡಿದೆ.
Advertisement
ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂದಾನಾ (Smriti Mandhana), ಕನ್ನಡತಿ ಶ್ರೇಯಾಂಕ ಪಾಟೀಲ್, ಸ್ಫೋಟಕ ಆಟಗಾರ್ತಿ ಸೋಫಿ ಡಿವೈನ್ ಸೇರಿದಂತೆ ಅನೇಕರು ಫೋಟೋ ಶೂಟ್‌ನಲ್ಲಿ ಮಿಂಚಿದ್ದಾರೆ. ಇದರಿಂದ ಫುಲ್ ಖುಷ್ ಆಗಿರುವ ಆರ್‌ಸಿಬಿ ಅಭಿಮಾನಿಗಳು ಜಾಲತಾಣದಲ್ಲಿ ʻಈ ಸಲ ಕಪ್ ನಮ್ದೆʼ ಟ್ರೆಂಡ್ ಶುರು ಮಾಡಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ 4ನೇ ಟೆಸ್ಟ್ ಪಂದ್ಯಕ್ಕೆ ಕೆ.ಎಲ್ ರಾಹುಲ್ ಕಂಬ್ಯಾಕ್ – ಸುಳಿವು ಕೊಟ್ಟ ರೋಹಿತ್
Advertisement
Advertisement
ಯಾವಾಗಿನಿಂದ ಪಂದ್ಯ ಆರಂಭ?
2ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಹಾಲಿ ಚಾಂಪಿಯನ್‌ಗಳಾದ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್, ಯುಪಿ ವಾರಿಯರ್ಸ್ ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ಕಣಕ್ಕಿಳಿಯುತ್ತಿವೆ. ಫೆಬ್ರವರಿ 23 ರಿಂದ ಮಾರ್ಚ್ 13ರ ವರೆಗೆ ಒಟ್ಟು 20 ಲೀಗ್ ಸುತ್ತಿನ ಪಂದ್ಯಗಳು ನಡೆಯಲಿವೆ. ಮಾರ್ಚ್ 15 ರಂದು ಎಲಿಮಿನೇಟರ್ ಪಂದ್ಯ ನಡೆಯಲಿದ್ದು, ಮಾರ್ಚ್ 17 ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ.
Advertisement
ಎಲ್ಲೆಲ್ಲಿ ಪಂದ್ಯ ನಡೆಯಲಿದೆ?: ಕಳೆದ ವರ್ಷ ಮುಂಬೈನ ಬ್ರಬೋರ್ನ್ ಮತ್ತು ವಾಂಖೆಡೆ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸಲಾಗುತ್ತಿತ್ತು. ಆದ್ರೆ ಈ ಬಾರಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣಗಳಲ್ಲಿ ಆಯೋಜಿಸಲಾಗಿದೆ. ಲೀಗ್ ಸುತ್ತಿನ ಬಹುತೇಕ ಪಂದ್ಯಗಳು ಬೆಂಗಳೂರಿನ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದನ್ನೂ ಓದಿ: ಜೈಸ್ವಾಲ್, ಜಡೇಜಾ ಶೈನ್; ಆಂಗ್ಲರ ವಿರುದ್ಧ ಭಾರತಕ್ಕೆ 434 ರನ್ ಗೆಲುವು – ಟೆಸ್ಟ್ ಸರಣಿ ಕೈವಶಕ್ಕೆ ಇನ್ನೊಂದೇ ಹೆಜ್ಜೆ
WPL ನಲ್ಲಿ 5 ಮಹಿಳಾ ತಂಡಗಳು ಇರಲಿದ್ದು, ಅಗ್ರಸ್ಥಾನ ಪಡೆದ ತಂಡ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆದುಕೊಳ್ಳಲಿದೆ. ಇನ್ನೂ 2 ಮತ್ತು 3ನೇ ಸ್ಥಾನಗಳಲ್ಲಿರುವ ತಂಡಗಳು ಎಲಿಮಿನೇಟರ್ ಪಂದ್ಯದಲ್ಲಿ ಸೆಣಸಲಿದ್ದು, ಗೆದ್ದ ತಂಡ ಫೈನಲ್‌ನಲ್ಲಿ ಸೆಣಸಲಿದೆ. ಇದನ್ನೂ ಓದಿ: WPLನಲ್ಲಿ ನೋಬಾಲ್ ವಿವಾದ – ಚಾಂಪಿಯನ್ ಪಟ್ಟ ಕೈತಪ್ಪಿಸಿದ ಆ ಒಂದು ಔಟ್
ಚೊಚ್ಚಲ ಆವೃತ್ತಿಯಲ್ಲಿ ಮುಂಬೈ ಚಾಂಪಿಯನ್:
2023ರಲ್ಲಿ ಆರಂಭಗೊಂಡ ಮಹಿಳಾ ಪ್ರೀಮಿಯರ್ ಲೀಗ್ ಚೊಚ್ಚಲ ಆವೃತ್ತಿಯಲ್ಲಿ ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದನ್ನೂ ಓದಿ: ರೋಚಕ ಫೈನಲ್ – ಮುಂಬೈ ಇಂಡಿಯನ್ಸ್ ಚೊಚ್ಚಲ WPL ಚಾಂಪಿಯನ್