ನವದೆಹಲಿ: ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಯೊಂದಿಗಿನ ಮಾಹಿತಿ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅನಾಲಿಟಿಕಾ ಕಚೇರಿಯಲ್ಲಿರುವ ಕಾಂಗ್ರೆಸ್ ಚಿಹ್ನೆ ಇರುವ ಫೋಟೋವನ್ನು ಟ್ರೋಲ್ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಚಿವೆ ಸ್ಮೃತಿ ಇರಾನಿ ಅವರು, ಕ್ಯಾ ಬಾತ್ ಹೈ ರಾಹುಲ್ ಜೀ.. ಕಾಂಗ್ರೆಸ್‍ನ ಕೈ ಕೇಂಬ್ರಿಡ್ಜ್ ಅನಾಲಿಟಿಕಾ ಜೊತೆಯಲ್ಲಿ ಎಂದು ಬರೆದು ಕೊಂಡಿದ್ದಾರೆ. ಪ್ರಕರಣವು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ವಾಕ್ ಯುದ್ಧಕ್ಕೆ ಕಾರಣವಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಕೇಂಬ್ರಿಡ್ಜ್ ಅನಾಲಿಟಿಕಾ ಕಂಪನಿಯ ಮಾಜಿ ನೌಕರ ಕ್ರಿಸ್ಟೋಫರ್ ವೈಲೀ ಸಂದರ್ಶನವೊಂದರಲ್ಲಿ ಕಾಂಗ್ರೆಸ್ ಪಕ್ಷ ಕೇಂಬ್ರಿಡ್ಜ್ ಅನಾಲಿಟಿಕಾದ ಗ್ರಾಹಕ ಎಂದು ಹೇಳಿದ್ದರು. ಈ ಹೇಳಿಕೆಯ ಬೆನ್ನಲ್ಲೇ ಕೇಂಬ್ರಿಡ್ಜ್ ಅನಾಲಿಟಿಕಾದ ಕಚೇರಿಯಲ್ಲಿರುವ ಕಾಂಗ್ರೆಸ್ ಚಿಹ್ನೆಯ ಫೋಟೋವನ್ನು ಹಾಕಿ ಸ್ಮೃತಿ ಇರಾನಿ ಟ್ರೋಲ್ ಮಾಡಿದ್ದಾರೆ.
ಕೇಂಬ್ರಿಡ್ಜ್ ಅನಾಲಿಟಿಕಾ ಕಂಪನಿ ಸಂಸ್ಥೆ ಕ್ರಿಸ್ಟೋಫರ್ ವೈಲೀ ಅವರ ಹೇಳಿಕೆಯನ್ನು ನಿರಾಕರಿಸಿದೆ. ಕ್ರಿಸ್ಟೋಫರ್ ಗುತ್ತಿಗೆ ನೌಕರನಾಗಿದ್ದು 2014 ರಲ್ಲಿ ಕಂಪನಿಯನ್ನು ತೊರೆದಿದ್ದಾರೆ. ಗುತ್ತಿಗೆ ನೌಕರನಾಗಿ ಕಂಪನಿಯ ಕಾರ್ಯದ ಬಗ್ಗೆ ಅವರಿಗೆ ಮಾಹಿತಿ ಇರುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.
Kya Baat hai @RahulGandhi Ji.. Congress ka Haath, Cambridge Analytica ke Saath!https://t.co/fUaPlMekMB pic.twitter.com/JieXqUgp3K
— Smriti Z Irani (@smritiirani) March 28, 2018