ದೆಹಲಿ: ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಸ್ಮೃತಿ ಇರಾನಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಈ ಸಂಬಂಧ ಟ್ವೀಟ್ ಮೂಲಕ ಮಾಹಿತಿ ನೀಡಿರುವ ಅವರು, ದೆಹಲಿಯ ರಾಜೇಂದ್ರ ನಗರದಲ್ಲಿ ನಡೆದ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗದೇ ಇದ್ದುದಕ್ಕೆ ನಾನು ಕ್ಷಮೆಯಾಚಿಸುತ್ತಿದ್ದೇನೆ. ನನ್ನ ಕೋವಿಡ್ 19 ಪರೀಕ್ಷಾ ವರದಿಯು ಪಾಸಿಟಿವ್ ಬಂದಿರುವುದರಿಂದ ನನಗೆ ಈ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ರಾಜೇಂದ್ರ ನಗರದ ಜನತೆಯಲ್ಲಿ ನಾನು ಬಿಜೆಪಿ ಅಭ್ಯರ್ಥಿ ರಾಜೇಶ್ ಭಾಟಿಯಾಗೆ ಮತ ನೀಡಿ ಎಂದು ಮನವಿ ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನೂಪುರ್ ಶರ್ಮಾ ಹೇಳಿಕೆ ಬಗ್ಗೆ ಮೋದಿ ತನ್ನ ಬಾಲ್ಯ ಸ್ನೇಹಿತ ಅಬ್ಬಾಸ್‍ನನ್ನು ಕೇಳಲಿ: ಓವೈಸಿ
Advertisement
राजेंद्र नगर में आयोजित कार्यक्रम में सम्मिलित नहीं हो पाने के लिए मैं वहाँ के नागरिकों से क्षमा चाहती हूँ, क्योंकि मेरी कोरोना रिपोर्ट पॉजिटिव आई है।
मैं राजेंद्र नगर के लोगों से @rajeshbhatiabjp जी को वोट देने और @BJP4Delhi को जिताने की अपील करती हूँ। https://t.co/nawn5XTBbu
— Smriti Z Irani (@smritiirani) June 19, 2022
Advertisement
ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷದ (AAP) ಗೆಲುವಿನ ನಂತರ ಹಾಲಿ ಶಾಸಕ ರಾಘವ್ ಚಡ್ಡಾ ಪಂಜಾಬ್‌ನಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡರು. ಇದರಿಂದ ರಾಜೇಂದ್ರ ನಗರದ ಶಾಸಕ ಸ್ಥಾನ ಖಾಲಿಯಾಗಿದೆ. ಇದನ್ನೂ ಓದಿ: ಬಹುಮತ ಕಳೆದುಕೊಂಡ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್
Advertisement
Advertisement
ಸದ್ಯ ದೆಹಲಿಯ ರಾಜೇಂದ್ರ ನಗರದ ಶಾಸಕ ಸ್ಥಾನದ ಉಪಚುನಾವಣೆಗೆ ಜೂನ್ 23 ರಂದು ಮತದಾನ ನಡೆಯಲಿದೆ. ಬಿಜೆಪಿಯಿಂದ ಮಾಜಿ ಕೌನ್ಸಿಲರ್ ಭಾಟಿಯಾ, ಕಾಂಗ್ರೆಸ್ ಮಾಜಿ ಕೌನ್ಸಿಲರ್ ಪ್ರೇಮ್ ಲತಾ ಅವರನ್ನು ಕಣಕ್ಕಿಳಿಸಲಾಗಿದೆ. ಎಎಪಿಯನ್ನು ಎಂಸಿಡಿ ಉಸ್ತುವಾರಿ ದುರ್ಗೇಶ್ ಪಾಠಕ್ ಪ್ರತಿನಿಧಿಸಲಿದ್ದಾರೆ.