ಲಕ್ನೋ: ಶುಕ್ರವಾರ ಅಮೇಥಿಗೆ ಭೇಟಿ ನೀಡಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಅಮಿತ್ ಶಾ ತಮ್ಮ ಸ್ವಂತ ಸಾಮರ್ಥ್ಯದಿಂದ ಮೇಲೆ ಬಿಜೆಪಿಯ ಅಧ್ಯಕ್ಷರಾಗಿದ್ದಾರೆ. ಆದ್ರೆ ರಾಹುಲ್ ಗಾಂಧಿ ತಮ್ಮ ತಾಯಿಯ ಆಶೀರ್ವಾದದಿಂದ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
Advertisement
ಸ್ವಾತಂತ್ರ್ಯ ಬಳಿಕ ಅಮೇಥಿಯಲ್ಲಿ ಮೊದಲ ಸಿಟಿ ಸ್ಕ್ಯಾನ್ ಕೇಂದ್ರ ಆರಂಭವಾಗಿದೆ. ಕಳೆದ 15 ವರ್ಷಗಳಿಂದ ಅಮೇಥಿಯ ಸಂಸದರಾಗಿರುವ ರಾಹುಲ್ ಗಾಂಧಿ ಅವರ ಅಭಿವೃದ್ಧಿಯನ್ನು ಇದು ತೋರಿಸುತ್ತದೆ. ಮುಂದಿನ ಪಿಎಂ ಅಂತಾ ರಾಹುಲ್ ಗಾಂಧಿ ಅವರೇ ಹೇಳಿಕೊಳ್ಳುತ್ತಿದ್ದಾರೆ. ಮಹಾಘಟಬಂಧನ್ ದಲ್ಲಿ ಸೇರಿಕೊಂಡಿರುವ ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಮಾಜಿ ಸಿಎಂ ಅಖಿಲೇಶ್ ಯಾದವ್ ಯಾರು ಇದುವರೆಗೂ ಪ್ರಧಾನಿ ಅಭ್ಯರ್ಥಿ ಬಗ್ಗೆ ಮಾತನಾಡಿಲ್ಲ. ಇವರೆಲ್ಲ ಆಶೀರ್ವಾದ ದೊರೆತು ಜಯಶಾಲಿಯಾದ್ರೆ ರಾಹುಲ್ ಗಾಂಧಿ ಪಿಎಂ ಅಗೋದು ಎಂದು ಸ್ಮೃತಿ ಇರಾನಿ ಕಿಚಾಯಿಸಿದರು.
Advertisement
ಕಾಂಗ್ರೆಸ್ಸಿಗೆ ರಾಮ ಮಂದಿರ ವಿಷಯ ಅವರಿಗೆ ಬೇಕಾಗಿಲ್ಲ. ನ್ಯಾಯಾಲಯದಲ್ಲಿ ಭಗವಾನ್ ರಾಮನಿಗೆ ಯಾವುದೇ ಅಸ್ತಿತ್ವವಿಲ್ಲ ಎಂದು ಕಾಂಗ್ರೆಸ್ ಅಫಡವಿಟ್ ಸಲ್ಲಿಸಿದೆ. ಗಾಂಧಿ ಕುಟುಂಬ ಮತ್ತು ಕಾಂಗ್ರೆಸ್ ಪರಿವಾರದವರಿಗೆ ವಿಶೇಷ ವಿಷಯವೇ ಅಲ್ಲ ಎಂದು ಕೈ ನಾಯಕರ ವಿರುದ್ಧ ಕಿಡಿಕಾರಿದರು.
Advertisement
Advertisement
ಸ್ಮೃತಿ ಇರಾನಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶ ಕಾಂಗ್ರೆಸ್ ವಕ್ತಾರ ದ್ವಿಜೇಂದ್ರ ತ್ರಿಪಾಠಿ, ದೇಶದ ಜನರು ಕೇಂದ್ರ ಸಚಿವೆ ಬಳಸಿರುವ ಭಾಷೆಯನ್ನು ಕೇಳಿಸಿಕೊಳ್ಳಿ ಎಂದು ಹೇಳಿದ್ದಾರೆ. ಇರಾನಿ ಅವರು 16ರಿಂದ 17 ಬಾರಿ ಅಮೇಥಿಗೆ ಭೇಟಿ ನೀಡಿರಬಹುದು. ಆದ್ರೆ ರಾಹುಲ್ ಗಾಂಧಿ ಅವರು ಇಲ್ಲಿಯೇ ಹುಟ್ಟಿ ಬಳೆದಂತಹ ವ್ಯಕ್ತಿ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಅಮೇಥಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ನಾವೆಲ್ಲ ನೋಡಿದ್ದೇವೆ. ಮೋದಿ ಸರ್ಕಾರ ಅಮೇಥಿಯಲ್ಲಿಯ ಐಐಟಿ ಮತ್ತು ಹಿಂದೂಸ್ತಾನ ಪೇಪರ್ ಮಿಲ್ ನ್ನು ಇಲ್ಲಿಂದ ಸ್ಥಳಾಂತರಿಸಿದೆ ಎಂದು ಕೇಂದ್ರ ಸಚಿವರಿಗೆ ತ್ರಿಪಾಠಿ ತಿರುಗೇಟು ನೀಡಿದ್ದಾರೆ.
ಶುಕ್ರವಾರ ಮತ್ತು ಶನಿವಾರ ರಾಹುಲ್ ಗಾಂಧಿ ಅವರು ಅಮೇಥಿಗೆ ಭೇಟಿ ನೀಡಬೇಕಿತ್ತು. ಅಧಿವೇಶನ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ತಮ್ಮ ಪ್ರವಾಸವನ್ನು ರದ್ದುಗೊಳಿಸಿ, ಸದನದಲ್ಲಿ ಭಾಗಿಯಾಗಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸ್ಮೃತಿ ಇರಾನಿ, ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿ ಅವರ ವಿರುದ್ಧ 1 ಲಕ್ಷ ಮತಗಳ ಅಂತರದಿಂದ ಸೋಲುಕಂಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv