ನವದೆಹಲಿ: ಕೇಂದ್ರ ಸಚಿವೆ ಹಾಗೂ ನಟಿ ಸ್ಮೃತಿ ಇರಾನಿ (Smriti Irani) ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ಚಿಕ್ಕ ವಯಸ್ಸಿನಲ್ಲಿ ಅನುಭವಿಸಿದ ಕಷ್ಟ ಹಾಗೂ ತಂದೆ-ತಾಯಿ ಪರಸ್ಪರ ಬೇರ್ಪಟ್ಟ ಬಗ್ಗೆ ಮಾತನಾಡಿದ್ದಾರೆ.
ಕೇಂದ್ರ ಸಚಿವೆ ಸ್ಮೃತಿ ಇರಾನಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ವೃತ್ತಿಪರ ಹಾಗೂ ವೈಯಕ್ತಿಕ ಜೀವನದ ಬಗ್ಗೆಯ ಹಲವು ಕಷ್ಟದ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಅದರಲ್ಲಿ ತಂದೆ- ತಾಯಿಯ ಪರಸ್ಪರ ಬೇರಾಗಿದ್ದನ್ನು ಕುರಿತು ಮಾತನಾಡಲು ನನಗೆ 40 ವರ್ಷಗಳು ಬೇಕಾಯಿತು ಎಂದು ಹೇಳಿಕೊಂಡಿದ್ದಾರೆ.
ಸ್ಮೃತಿ ಇರಾನಿಯವರ ತಂದೆ ಪಂಜಾಬಿ ಖಾತ್ರಿಯಾಗಿದ್ದರೆ, ತಾಯಿ ಬಂಗಾಳಿ-ಬ್ರಾಹ್ಮಣರಾಗಿದ್ದರು. ಇಬ್ಬರೂ ತಮ್ಮ ಪೋಷಕರ ವಿರೋಧದ ನಡುವೆ ಮದುವೆ ಆಗಿದ್ದರು. ಅವರು ಮದುವೆಯಾದಾಗ ಅವರ ಬಳಿ ಕೇವಲ 150 ರೂ. ಇತ್ತು. ಅದಕ್ಕಾಗಿ ಅವರು ದನದ ಕೊಟ್ಟಿಗೆಯಲ್ಲಿನ ಅಟ್ಟದ ಮೇಲೆ ವಾಸಿಸುತ್ತಿದ್ದರು. ಆ ವೇಳೆ ನಾನು ಲೇಡಿ ಹಾರ್ಡಿಂಜ್ ಆಸ್ಪತ್ರೆಯಲ್ಲಿ ಜನಿಸಿದೆ. ನಂತರ ಅವರು ಆರ್ಥಿಕ ಸಮಸ್ಯೆಯಿಂದಾಗಿ ಗುರುಗ್ರಾಮಕ್ಕೆ ಸ್ಥಳಾಂತರಗೊಂಡರು. ಆದರೆ ಅಲ್ಲಿ ಕೆಲವೇ ಕೆಲವು ದಂಪತಿ ಆರ್ಥಿಕ ಮತ್ತು ಸಾಮಾಜಿಕ ಘರ್ಷಣೆಯ ನಿರ್ಬಂಧಗಳನ್ನು ಬದುಕಬಲ್ಲರು ಎಂದು ನೆನಪಿಸಿಕೊಂಡರು.
ನನ್ನ ತಂದೆ-ತಾಯಿ ಬೇರ್ಪಟ್ಟಿದ್ದಾರೆ ಎಂದು ಹೇಳಲು ನನಗೆ 40 ವರ್ಷಗಳು ಬೇಕಾಯಿತು. ಆ ದಿನಗಳಲ್ಲಿ ನಮ್ಮನ್ನು ಕೀಳಾಗಿ ನೋಡಲಾಗುತ್ತಿತ್ತು. ಆದರೆ ಈಗ ಅವರು ಜೀವನವನ್ನು ಲೆಕ್ಕಾಚಾರ ಮಾಡುವುದು ಎಷ್ಟು ಕಠಿಣವಾಗಿದೆ ಎಂದು ನನಗೆ ತಿಳಿದಿದೆ ಎಂದರು. ಇದನ್ನೂ ಓದಿ: ಬೇಲೂರಿನ ರಥೋತ್ಸವದ ವೇಳೆ ಕುರಾನ್ ಪಠಣ ಮಾಡಬೇಕೆಂದು ಎಲ್ಲೂ ಇಲ್ಲ: ರಾಜ್ಯ ಪುರಾತತ್ವ ಇಲಾಖೆ
ತಂದೆ ಜೇಬಿನಲ್ಲಿ ಕೇವಲ 100 ರೂ. ಇಟ್ಟುಕೊಂಡು ನಮ್ಮೆಲ್ಲರನ್ನೂ ನೋಡಿಕೊಂಡಿದ್ದರು. ನನ್ನ ತಂದೆ ಆರ್ಮಿ ಕ್ಲಬ್‍ನ ಹೊರಗೆ ಪುಸ್ತಕಗಳನ್ನು ಮಾರುತ್ತಿದ್ದರು. ನಾನು ಅವರೊಂದಿಗೆ ಕುಳಿತುಕೊಳ್ಳುತ್ತಿದ್ದೆ. ನನ್ನ ತಾಯಿ ಮನೆ ಮನೆಗೆ ಹೋಗಿ ಮಸಾಲೆಗಳನ್ನು ಮಾರಾಟ ಮಾಡುತ್ತಿದ್ದರು ಎಂದು ತಮ್ಮ ಕಷ್ಟದ ಬದುಕಿನ ಕುರಿತು ಮಾತನಾಡಿದರು. ಇದನ್ನೂ ಓದಿ: ನಮಗೇ ಬಹುಮತ, ನಮ್ಮದೇ ಸರ್ಕಾರ; ಕಾಂಗ್ರೆಸ್ ಸಾಮರ್ಥ್ಯ 60-70 ಸೀಟ್‌ಗಳಷ್ಟೇ – ಬಿಎಸ್‌ವೈ ವಿಶ್ವಾಸ