ನವದೆಹಲಿ: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿಯವರ (Rahul Gandhi) ಮೊಹಬ್ಬತ್ (ಪ್ರೀತಿ) ಹಿಂದೂ ಜೀವನ ಶೈಲಿಯನ್ನು ಖಂಡಿಸುತ್ತದೆಯೇ? ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ಗುರುವಾರ ವಾಗ್ದಾಳಿ ನಡೆಸಿದ್ದಾರೆ.
ನಿಮ್ಮ ಮೊಹಬ್ಬತ್ ಕಿ ದುಕಾನ್ (ಪ್ರೀತಿಯ ಅಂಗಡಿ) ಸಿಖ್ಖರ ಹತ್ಯೆಯನ್ನು ಒಳಗೊಂಡಿರುತ್ತದೆಯೇ? ಅದರಲ್ಲಿ ರಾಜಸ್ಥಾನದ ಮಹಿಳೆಯರ ಅಪಹರಣ ಸೇರಿದೆಯೇ? ದೇಶವನ್ನು ಹಾಳು ಮಾಡಲು ಬಯಸುವವರ ಜೊತೆ ಪಾಲುದಾರಿಕೆ ಇದೆಯೇ? ನಿಮ್ಮ ಪ್ರೀತಿಯ ಅಂಗಡಿ ಸ್ವಂತ ಪ್ರಜಾಪ್ರಭುತ್ವದ (Democracy) ವಿರುದ್ಧ ಹೊರಗಿನ ಹಸ್ತಕ್ಷೇಪವನ್ನು ಹುಡುಕಲು ನಿಮಗೆ ಒತ್ತಾಯಿಸುತ್ತದೆಯೇ? ಎಂಬ ಪ್ರಶ್ನೆಗಳನ್ನು ಸಚಿವೆ ಇಟ್ಟಿದ್ದಾರೆ. ಇದನ್ನೂ ಓದಿ: 500 ರೂ. ನೋಟ್ ಬ್ಯಾನ್ ಮಾಡಲ್ಲ – 1,000 ರೂ. ನೋಟ್ ಪರಿಚಯಿಸುವ ಉದ್ದೇಶ ಇಲ್ಲ: RBI
Advertisement
Advertisement
ರಾಹುಲ್ ಗಾಂಧಿಯವರು ಒಂದೆಡೆ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಾರೆ. ಹಿಂದೂ-ಮುಸ್ಲಿಂರನ್ನು ವಿಭಜಿಸುವ ಮಾತುಗಳನ್ನಾಡುತ್ತಾರೆ. ಇದರೊಂದಿಗೆ ಸಮಾಜವನ್ನು ವಿಭಜಿಸುವ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ಪ್ರೀತಿಯ ಅಂಗಡಿ ತೆರೆಯುತ್ತೇವೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ದ್ವೇಷದ ಮಾಲ್‍ನ್ನು ತೆರೆದಿದ್ದೀರಿ. ದೇಶದಲ್ಲಿ ನಿಮ್ಮದು ಪ್ರೀತಿಯ ಅಂಗಡಿಯನ್ನು ತೆರೆಯುವ ಚಿಂತನೆಯಲ್ಲ, ಅದು ನಿಮ್ಮ ರಾಜಕೀಯದ ಅಂಗಡಿ ತರೆಯುವ ಹುನ್ನಾರ ಎಂದು ಕುಟುಕಿದ್ದಾರೆ.
Advertisement
Advertisement
ಆಮೆರಿಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿಯವರು, ಇತ್ತೀಚೆಗೆ ಭಾರತೀಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದರು. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಬಿಜೆಪಿ (BJP) ವಿರುದ್ಧ ವಾಗ್ದಾಳಿ ನಡೆಸಿದ್ದರು. ಕರ್ನಾಟಕದ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದ ವೇಳೆ `ಕರ್ನಾಟಕದಲ್ಲಿ ಪ್ರೀತಿಯ ಅಂಗಡಿ ತೆರೆದಿದ್ದೇವೆ’ ಎಂದು ಹೇಳಿದ್ದರು. ಇದನ್ನೂ ಓದಿ: 5 ದಿನಗಳ ಹಿಂದಷ್ಟೇ ವಸತಿ ಶಾಲೆಗೆ ದಾಖಲಾಗಿದ್ದ ವಿದ್ಯಾರ್ಥಿನಿ ಸಾವು