ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ವ್ಯಂಗ್ಯವಾಗಿ ಧನ್ಯವಾದ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.
ರಾಹುಲ್ ಗಾಂಧಿ ಟ್ವಿಟ್ಟರ್‍ನಲ್ಲಿ ರೋಹಿತ್ ವೇಮುಲಾ ಪ್ರಕರಣ ಹಾಗೂ ನೋಟ್‍ಬ್ಯಾನ್ ವಿಷಯವನ್ನ ಇಟ್ಟುಕೊಂಡು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
Advertisement
ಶುಕ್ರವಾರದಂದು ರಾಹುಲ್ ಗಾಂಧಿ ಡಾ. ಬಿ ಆರ್ ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ವೇಳೆ ರೋಹಿತ್ ವೇಮುಲಾ ಪ್ರಕರಣವನ್ನ ಪ್ರಸ್ತಾಪಿಸಿ, ಆತ ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ. ದಲಿತ ಎಂಬ ಕಾರಣಕ್ಕೆ ಆತನನ್ನ ಕೊಲೆ ಮಾಡಲಾಯ್ತು ಅಂದ್ರು.
Advertisement
ಹಿಟ್ಲರ್ ಒಮ್ಮೆ ಬರೆದಿದ್ದರು: ವಾಸ್ತವದ ಮೇಲೆ ಬಿಗಿಯಾದ ಹಿಡಿತ ಇಟ್ಟುಕೊಳ್ಳಿ, ಆಗ ಯಾವಾಗ ಬೇಕಾದ್ರೂ ನೀವು ಅದರ ಕತ್ತು ಹಿಸುಕಬಹುದು ಎಂದು. ಈಗ ನಡೆಯುತ್ತಿರುವುದೂ ಕೂಡ ಅದೇ. ವಾಸ್ತವದ ಕತ್ತು ಹಿಸುಕುವಿಕೆ ಎಂದು ರಾಹುಲ್ ಗಾಂಧಿ ಹೇಳಿದ್ದರು.
Advertisement
ನೋಟ್‍ಬ್ಯಾನ್‍ನಿಂದ ಸಾವಿರಾರು ಉದ್ಯಮಗಳು ನಾಶವಾಗಿವೆ. ನೂರಾರು ಜನ ಸಾಯ್ತಿದ್ದಾರೆ. ಆದ್ರೆ ಅದರ ಬಗ್ಗೆ ಮೋದಿ ಸಂಸತ್ತಿನಲ್ಲಿ ಮಾತನಾಡಲೇ ಇಲ್ಲ ಎಂದು ಕೇಂದ್ರದ ವಿರುದ್ಧ ಕಿಡಿ ಕಾರಿದ್ದರು.
Advertisement
They say Rohit Vemula committed suicide.I call it murder.He was murdered by the indignities he suffered.He was killed because he was a Dalit
— Rahul Gandhi (@RahulGandhi) July 21, 2017
Hitler,once wrote: Keep a firm grasp on reality, so you can strangle it at any time
This is what is happening today-strangulation of reality
— Rahul Gandhi (@RahulGandhi) July 21, 2017
Thousands of businesses are wiped out due to demonetization,hundreds die,but instead of speaking to the Parliament, Modi spoke to Coldplay.
— Rahul Gandhi (@RahulGandhi) July 21, 2017
ಇದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ಸ್ಮೃತಿ ಇರಾನಿ, “ಏನೇ ಆದ್ರೂ, ನೀವು ಮಾಡೋ ಎಲ್ಲದಕ್ಕೂ ಧನ್ಯವಾದ ರಾಹುಲ್ ಗಾಂಧಿ. ವಿಶ್ವಾಸದೊಂದಿಗೆ, ಬಿಜೆಪಿಯಿಂದ” ಎಂದು ಟ್ವೀಟ್ ಮಾಡಿದ್ದಾರೆ.
However, thank you @officeofRG for all that you do. Sincerely from the BJP!????????
— Smriti Z Irani (@smritiirani) July 21, 2017