ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ತಮ್ಮ ಮಗಳ ಸೆಲ್ಫಿ ಫೋಟೋವನ್ನು ಶುಕ್ರವಾರ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಫೋಸ್ಟ್ ಮಾಡಿದ್ದರು. ಆದರೆ ಆ ಬಳಿಕ ಅದನ್ನು ಡಿಲೀಟ್ ಮಾಡಿ ಅಚ್ಚರಿ ಮೂಡಿಸಿದ್ದರು. ಸದ್ಯ ಮತ್ತೆ ಮಗಳ ಫೋಟೋವನ್ನು ರಿ ಪೋಸ್ಟ್ ಮಾಡಿ ಖಡಕ್ ಸಂದೇಶವನ್ನು ನೀಡಿದ್ದಾರೆ.
ನನ್ನ ಇನ್‍ಸ್ಟಾಗ್ರಾಮ್‍ನಲ್ಲಿದ್ದ ಮಗಳ ಫೋಟೋವನ್ನು ಡಿಲೀಟ್ ಮಾಡಿದ್ದೆ. ಆ ಫೋಟೋದಲ್ಲಿ ನನ್ನ ಮಗಳು ಸುಂದರವಾಗಿ ಕಾಣುತ್ತಿಲ್ಲ ಎಂದು ಮಗಳ ಕ್ಲಾಸ್‍ಮೇಟ್ ಕಮೆಂಟ್ ಮಾಡಿದ್ದ. ಅಲ್ಲದೇ ಆತನ ಸ್ನೇಹಿತರೊಂದಿಗೆ ಸೇರಿ ಗೇಲಿ ಮಾಡಿದ್ದ. ಇದರಿಂದ ನೊಂದ ಮಗಳು ಕಣ್ಣೀರಿಟ್ಟಿದ್ದಳು. ಆದ್ದರಿಂದ ನಾನು ಮಗಳ ಫೋಟೋವನ್ನು ಡಿಲೀಟ್ ಮಾಡಿದ್ದೆ. ಆದರೆ ಆ ಬಳಿಕ ಇದು ತಪ್ಪು ಎಂದು ಅರಿವಾಗಿ ಮತ್ತೆ ಪೋಸ್ಟ್ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
Advertisement
Advertisement
ಮಗಳ ಫೋಟೋ ಡಿಲೀಟ್ ಮಾಡಿದಕ್ಕೆ ಆತ ಮತ್ತಷ್ಟು ಗೇಲಿ ಮಾಡುವ ಸಾಧ್ಯತೆ ಇದೆ. ಆದ್ದರಿಂದ ಮತ್ತೆ ಪೋಸ್ಟ್ ಮಾಡುತ್ತಿದ್ದೇನೆ ಎಂದಿದ್ದಾರೆ. ಈ ಪೋಸ್ಟ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಜನರನ್ನು ಆಕರ್ಷಿಸಿದೆ. ಅಲ್ಲದೇ ಮಗಳಿಗೆ ಗೇಲಿ ಮಾಡಿದ ಯುವಕನಿಗೆ ಈ ಮೂಲಕ ಸ್ಮೃತಿ ಇರಾನಿ ಅವರು ಖಡಕ್ ಟಾಂಗ್ ಕೊಟ್ಟಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
Advertisement
ಇತ್ತ ಮಗಳ ಬಗ್ಗೆ ಕಮೆಂಟ್ ಮಾಡಿದ್ದ ವಿದ್ಯಾರ್ಥಿಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಮೃತಿ ಇರಾನಿ, ನನ್ನ ಮಗಳು ಉತ್ತಮ ಆಟಗಾರ್ತಿ, ಲಿಮ್ಕಾ ಬುಕ್ ಆಫ್ ರೆಕಾಡ್ಸ್ ನಲ್ಲಿ ಸ್ಥಾನ ಪಡೆದಿದ್ದಾಳೆ. ಅಲ್ಲದೇ ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಹೊಂದಿದ್ದು, ವಿಶ್ವ ಚಾಂಪಿಯನ್ ಆಗಲು ಸಿದ್ಧತೆ ನಡೆಸಿದ್ದಾಳೆ. ಆಕೆ ನನ್ನ ಮುದ್ದಿನ ಪುತ್ರಿಯಾಗಿದ್ದು, ಸುಂದರವಾಗಿದ್ದಾಳೆ. ಜೊಯಿಶ್ ಇರಾನಿ ತಾಯಿ ಆಗಿದಕ್ಕೆ ನನಗೆ ಹೆಮ್ಮೆ ಅನಿಸುತ್ತಿದೆ ಎಂದು ಹೇಳಿದ್ದಾರೆ.
Advertisement
View this post on Instagram
The birthday hug which reminds you ‘damn my baby has grown up’#motherdaughter ❤️#simplejoys ❤️❤️❤️
ಇಂತಹ ಕೆಟ್ಟ ಕಮೆಂಟ್ ಬಗ್ಗೆ ಆಕೆ ಭಯ ಪಡುವುದಿಲ್ಲ. ಸುಂದರವಾಗಿಯರುವುದು ಎಂದರೆ ರೂಪ ಮಾತ್ರವಲ್ಲ. ತನ್ನ ವ್ಯಕ್ತಿಗತ ಜೀವನದಲ್ಲಿ ಅಂದು ಕೊಂಡಿರುವುದನ್ನು ಸಾಧನೆ ಮಾಡುವ ಸಾಮಥ್ರ್ಯ ಹೊಂದಿದ್ದಾಳೆ ಎಂದು ತಿಳಿಸಿದ್ದಾರೆ. ಇತ್ತ ಸ್ಮೃತಿ ಇರಾನಿ ಅವರ ಪೋಸ್ಟ್ ಪ್ರತಿಕ್ರಿಯೆ ನೀಡಿರುವ ಕೆಲ ಮಂದಿ ‘ಆಕೆ ನಿಮ್ಮ ಮಗಳು. ಸುಂದರವಾಗಿ ಇರುವುದಷ್ಟೇ ಅಲ್ಲ, ಧೈರ್ಯವಾಗಿಯೂ ಇರಬೇಕು’ ಎಂದಿದ್ದಾರೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]