ಸದ್ಯ ಎಲ್ಲೆಡೆ ಕೇಳಿ ಬರುತ್ತಿರುವ ಮಾತು ಕೊರೊನಾ ವೈರಸ್ ಮಾತ್ರ. ವಿಶ್ವವ್ಯಾಪಿ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ವೈರಸ್‍ಗೆ ಘಟಾನುಘಟಿ ರಾಷ್ಟ್ರಗಳು ತತ್ತರಿಸಿ ಹೋಗಿವೆ. ಭಾರತ ಕೂಡ ಕೊರೊನಾ ವೈರಸ್ ಹಾವಳಿಗೆ ತುತ್ತಾಗಿದ್ದು, ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಂದಿಗೆ ಕೊರೊನಾ ಸೋಂಕು ಬಹುಬೇಗ ತಗಲುತ್ತದೆ. ಅದರಲ್ಲೂ ಧೂಮಪಾನ ಪ್ರಿಯರಿಗೆ ಕೊರೊನಾ ವೈರಸ್ ತಟ್ಟುವ ಸಾಧ್ಯತೆ ಹೆಚ್ಚಿದೆ ಎಂದು ಅಧ್ಯಯನಗಳು ತಿಳಿಸಿವೆ.
Advertisement
ಆಗಾಗ ಬಾಯಿ, ಮೂಗು, ಕಣ್ಣು ಮುಟ್ಟಬೇಡಿ ಇದರಿಂದ ಕೊರೊನಾ ವೈರಸ್ ಬಹುಬೇಗ ಹರಡುತ್ತದೆ ಎಂದು ವೈದ್ಯರು, ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದೆ. ಆದರೆ ಧೂಮಪಾನ ಮಾಡುವಾಗ ಕೈ ಬಾಯಿಗೆ ತಾಗುತ್ತದೆ, ಬಾಯಿ ಮೂಲಕ ವೈರಸ್ ದೇಹವನ್ನು ಸೇರಿ ಶ್ವಾಸಕೋಶಕ್ಕೆ ಹಾನಿ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ.
Advertisement
Advertisement
ಧೂಮಪಾನ ಮಾಡಿದ್ದರಿಂದ ಶ್ವಾಸಕೋಶಕ್ಕೆ ಮೊದಲೇ ಹಾನಿಯಾಗಿರುತ್ತದೆ. ಈಗ ಕೊರೊನಾ ವೈರಸ್ ತಗಲಿದರೆ ಉಸಿರಾಟದ ತೊಂದರೆ ಜಾಸ್ತಿಯಾಗುತ್ತದೆ. ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ದೇಹದಲ್ಲಿ ರೋಗ ನಿರೋಧಕ ಶಕ್ತಿ ಉತ್ತಮವಾಗಿರಬೇಕು. ಆದರೆ ಧೂಮಪಾನಿಗಳ ಶ್ವಾಸಕೋಶ ಮೊದಲೇ ಹಾನಿಯಾಗಿತ್ತದೆ ಹೀಗಾಗಿ ಸೋಂಕು ಕಾಣಿಸಿಕೊಂಡರೆ ಅವರ ದೇಹದಲ್ಲಿ ಸೋಂಕನ್ನು ಎದರಿಸುವ ಶಕ್ತಿ ತೀರ ಕಡಿಮೆ ಇರುತ್ತದೆ. ಪರಿಸ್ಥಿತಿ ಮತ್ತಷ್ಟು ಗಂಭೀರವಾದರೆ ಶ್ವಾಸನಾಳದಲ್ಲಿ ದ್ರವ ತುಂಬಿಕೊಂಡು, ಆಮ್ಲಜನಕ ಸರಿಯಾಗಿ ದೊರೆಯದೆ ನ್ಯೋಮೋನಿಯಾ ಉಂಟಾಗಿ ಉಸಿರಾಡಲು ಕಷ್ಟವಾಗಿ ಸಾವಿಡೀಡಾಗುವ ಸಾಧ್ಯತೆ ಹೆಚ್ಚಾಗಿದೆ.
Advertisement
ಧೂಮಪಾನ ಮಾಡುವವರು ಹೆಚ್ಚಾಗಿ ಆರೋಗ್ಯ ಸಮಸ್ಯೆ ಎದರಿಸುತ್ತಾರೆ ಎಂದು ಅಧ್ಯಯನ ವರದಿಗಳು ತಿಳಿಸಿವೆ. ಅದರಲ್ಲೂ ಕ್ಯಾನ್ಸರ್, ಹೃದಯ ಸಮಸ್ಯೆ ಮತ್ತಿತರ ಗಂಭೀರ ಸಮಸ್ಯೆ ಎದರಿಸುವ ರೋಗಿಗಳಲ್ಲಿ ಶೇ. 51ರಷ್ಟು ಧೂಮಪಾನಿಗಳ, ಶೇ. 17ರಷ್ಟು ಮಂದಿ ಧೂಮಪಾನಿಗಳು ಎಳೆದು ಬಿಟ್ಟ ಹೊಗೆ ಸೇವಿಸುವವರು(ಪ್ಯಾಸಿವ್ ಸ್ಮೋಕರ್ಸ್) ಆಗಿರುತ್ತಾರೆ ಎಂದು ತಿಳಿಸಲಾಗಿದೆ.
ಇತ್ತ ಇ ಸಿಗರೇಟ್ ಸೇದುವ ಮಂದಿಯಲ್ಲೂ ರೋಗ ನಿರೋಧಕ ಶಕ್ತಿ ಕುಗ್ಗಿರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಶ್ವಾಸಕೋಶ ಮಾತ್ರವಲ್ಲ ಇದು ದೇಹದ ಜೀನ್‍ಗಳ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಇದು ದೇಹದಲ್ಲಿ 60ಕ್ಕೂ ಹೆಚ್ಚು ಜೀನ್‍ಗಳಿಗೆ ಹಾನಿ ಮಾಡುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿ ದೇಹದಲ್ಲಿ ಕಡಿಮೆಯಾಗಿ ರೋಗಗಳಿಗೆ ಬಹುಬೇಗ ಧೂಮಪಾನಿಗಳು ತುತ್ತಾಗುತ್ತಾರೆ.