ಕೋಲ್ಕತ್ತಾ: ದೆಹಲಿಯಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಹೊಗೆ ಉಂಟಾಗಿರುವಂತೆ ಎಚ್ಚರಿಕೆ ಬಾರಿಸಿಕೊಂಡಿದ್ದು, ವಿಮಾನವನ್ನು ಸೂಕ್ತ ಮುನ್ನೆಚ್ಚರಿಕಾ ಕ್ರಮವನ್ನು ವಹಿಸಿಕೊಂಡು ಕೋಲ್ಕತ್ತಾದಲ್ಲಿ ಇಳಿಸಲಾಗಿದೆ. ಆದರೆ ವಿಮಾನದಲ್ಲಿ ಹೊಗೆ ಅಥವಾ ಬೆಂಕಿ ಉಂಟಾಗಿರಲಿಲ್ಲ, ಅದು ಕೇವಲ ತಾಂತ್ರಿಕ ದೋಷದಿಂದ ಎಚ್ಚರಿಕೆಯ ಸೂಚನೆ ನೀಡಲಾಗಿದೆ ಎನ್ನಲಾಗಿದೆ.
ಭಾನುವಾರ ದೆಹಲಿಯಿಂದ ಹೊರಟಿದ್ದ ವಿಮಾನ 6ಇ-2513(ವಿಟಿ-ಐಜೆಎ) ನಲ್ಲಿ ಸರಕುಗಳನ್ನು ಇಡಲಾಗಿದ್ದ ಪ್ರದೇಶದಲ್ಲಿ ಹೊಗೆ ಉಂಟಾಗಿರುವಂತೆ ಎಚ್ಚರಿಕೆ ಬಾರಿಸಿಕೊಂಡಿತ್ತು. ಆದರೆ ಅದು ತಾಂತ್ರಿಕ ದೋಷದಿಂದ ಹೊಗೆ ಎಚ್ಚರಿಕೆ ನೀಡಿದ್ದು, ಘಟನೆಯ ಬಗ್ಗೆ ವಿಮಾನಯಾನ ನಿಯಂತ್ರಕ ಡಿಜಿಸಿಎ ತನಿಖೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿಂದು 720 ಹೊಸ ಕೋವಿಡ್ ಪ್ರಕರಣ ದೃಢ – 2 ಸಾವು
Advertisement
Advertisement
ವಿಮಾನ ಕೋಲ್ಕತ್ತಾ ನಿಲ್ದಾಣವನ್ನು ತಲುಪಿದ ತಕ್ಷಣ ತಪಾಸಣೆ ನಡೆಸಲಾಯಿತು. ಬಳಿಕ ಅದು ನಕಲಿ ಎಚ್ಚರಿಕೆ ಎಂದು ದೃಢಪಡಿಸಲಾಗಿದೆ ಎಂದು ಇಂಡಿಗೋ ತಿಳಿಸಿದೆ. ಇದನ್ನೂ ಓದಿ: ಅಬಕಾರಿ ನೀತಿ ಹಗರಣ: ಮನೀಶ್ ಸಿಸೋಡಿಯಾ ಸೇರಿ 8 ಆರೋಪಿಗಳ ವಿರುದ್ಧ ಸಿಬಿಐ ಲುಕ್‌ಔಟ್ ನೋಟಿಸ್
Advertisement
ಕಳೆದ ಕೆಲವು ತಿಂಗಳುಗಳಲ್ಲಿ ದೇಶದ ಹಲವು ವಿಮಾನಯಾನ ಸಂಸ್ಥೆಗಳು ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿವೆ. ಇಂಡಿಗೋ ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿದ್ದು, ಜುಲೈನಲ್ಲಿ ಶೇ.58.8 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ.