ಬೆಂಗಳೂರು: ಈಗ ಹೊಗೆ ಐಸ್‍ಕ್ರೀಂ ಹವಾ ಶುರುವಾಗಿದೆ. ದೇಶದಲ್ಲಿ ಬ್ಯಾನ್ ಆಗಿರುವ ಡೇಂಜರಸ್ ನೈಟ್ರೋಜನ್ ಐಸ್ ಕ್ರೀಂ ಈಗ ಬೆಂಗಳೂರಿನ ಫುಡ್ ಫೆಸ್ಟ್‍ಗಳಲ್ಲಿ ಖುಲ್ಲಾಂ ಖುಲ್ಲಾ ಮಾರಾಟ ಮಾಡಲಾಗುತ್ತಿದೆ. ಇದನ್ನು ಪ್ರಶ್ನಿಸೋದಕ್ಕೆ ಹೋದ ನಾಗರಿಕನ ಮೇಲೆ ಐಸ್ ಕ್ರೀಂ ಅಂಗಡಿ ಮಾಲೀಕ ಹಲ್ಲೆಗೆ ಮುಂದಾಗಿದ್ದಾನೆ.
ನೈಟ್ರೋಜನ್ ನ್ನು ವೈದ್ಯರು ಸರ್ಜರಿ ಸಮಯದಲ್ಲೂ ಕೂಡ ಅತ್ಯಂತ ಜಾಗರೂಕತೆಯಿಂದ ಬಳಕೆ ಮಾಡುತ್ತಾರೆ. ದೇಶದಲ್ಲಿ ಇದು ಬ್ಯಾನ್ ಆಗಿದ್ರೂ ಈ ನೈಟ್ರೋಜನ್ ಐಸ್‍ಕ್ರೀಂನ್ನು ಫ್ರೀಡಂಪಾರ್ಕ್ ನಲ್ಲಿ ಮಂಗಳವಾರ ನಡೆದ ತಿಂಡಿಪೋತರ ಹಬ್ಬದಲ್ಲಿ ರಾಜಾರೋಷವಾಗಿ ಮಾರಾಟ ಮಾಡಲಾಗಿದೆ.
Advertisement
Advertisement
ಈ ಐಸ್ ಕ್ರೀಂಗಳಲ್ಲಿ ಅತಿ ಹೆಚ್ಚು ನೈಟ್ರೋಜನ್ ಕೂಡ ಬಳಸಲಾಗಿತ್ತು. ಇದನ್ನು ಪ್ರಶ್ನಿಸಿದಕ್ಕೆ ನಾಗರಿಕರೊಬ್ಬರ ಮೇಲೆ ಅಂಗಡಿ ಮಾಲೀಕ ಹಲ್ಲೆಗೆ ಮುಂದಾಗಿದ್ದಾನೆ. ಅದೇನ್ ಮಾಡ್ಕೋತಿಯೋ ಮಾಡ್ಕೋ ನಂಗೆ ಅನುಮತಿ ಕೊಟ್ಟಿದ್ದಾರೆ ಅಂತಾ ದರ್ಪ ಮೆರೆದಿದ್ದಾನೆ. ಅಸಲಿಗೆ ಹರಿಯಾಣದಲ್ಲಿ ಈ ಐಸ್ ಕ್ರೀಂನಿಂದಾಗಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ನಂತರ ದೇಶದ್ಯಾಂತ ನಿಷೇಧ ಮಾಡಲಾಗಿತ್ತು.
Advertisement
ಹೊಗೆ ಐಸ್ ಕ್ರೀಂ ತಿಂದರೆ ಏನಾಗುತ್ತೆ?
1. ಕರುಳು ಹುಣ್ಣು,
2. ಅನ್ನನಾಳ ಸುಟ್ಟು ಹೋಗಲಿದೆ
3. ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಳ್ಳಲಿದೆ.
4. ಉಸಿರಾಟದ ತೊಂದರೆ
5. ಚರ್ಮ ಸಂಬಂಧಿ ಕಾಯಿಲೆ
Advertisement
ಮೈಸೂರಿನಲ್ಲಿ ಐಸ್ ಕ್ರೀಂ ಮಾರಾಟ ಅಡ್ಡೆಯ ಮೇಲೆ ದಾಳಿ ಕೂಡ ನಡೆಸಲಾಗಿತ್ತು. ಆದರೆ ಬೆಂಗಳೂರಿನಲ್ಲಿ ಮಾತ್ರ ರಾಜರೋಷವಾಗಿ ಅನುಮತಿ ಕೊಟ್ಟಿರೋದು ಚರ್ಚೆಗೆ ಗ್ರಾಸವಾಗಿದೆ. ಹಾಗಿದ್ರೇ ಅಲ್ಲಿ ಗ್ರಾಹಕ ಮತ್ತು ವ್ಯಾಪಾರಿ ನಡುವಿನ ಸಂಭಾಷಣೆ ಹೀಗಿತ್ತು.
ಯುವಕ : ಇಟ್ಸ್ ಟೂ ಡೇಂಜರ್ಸ್ -ಮೈ ಗಾಡ್ ಇದ್ರ ಪಿಎಚ್ ಲೆವೆಲ್ ನಾಲ್ಕು ಇದೆ. ಏನನ್ನು ಹಾಕ್ತಾ ಇದ್ದೀಯಾ, ಎಲ್ಲರನ್ನು ಸಾಯಿಸಬೇಕು ಅಂತಿದ್ದೀಯಾ?
ವ್ಯಾಪಾರಿ : ಹೇ ಏನ್ ಮಾತಾನಾಡ್ತಾ ಇದ್ದೀಯಾ – ಹೋಗ್ ಇಲ್ಲಿಂದ !
ಯುವಕ : ಹೇ ಕರಿ ಯಾರನ್ನು ಕರೀತಿಯೋ , ನಾನೇ ಕರೀತಿನಿ, ಏನ್ ಕೆಮಿಕಲ್ ಮಿಕ್ಸ್ ಮಾಡಿದ್ದೀಯಾ ಹೇಳು ನಾನೇ ಟೆಸ್ಟ್ ಮಾಡಿದ್ದೀನಿ.
(ಅಷ್ಟರಲ್ಲಿ ಯುವಕನನ್ನು ತಳ್ಳಿದ ವ್ಯಾಪಾರಿ)
ವ್ಯಾಪಾರಿ : ಹೋಗ್ ಇಲ್ಲಿಂದ ಔಟ್, ನನ್ನ ಬಳಿ ಫುಡ್ ಲೈಸೆನ್ಸ್ ಇದೆ, ಎಫ್‍ಎಸ್‍ಎಸ್‍ಐ ಪ್ರತಿ ಇದೆ.
ಯುವಕ : ಯಾಕೆ ತಳ್ತಾ ಇದ್ದೀಯಾ , ತೋರಿಸು ನಿನ್ನಾ ಲೈಸೆನ್ಸ್
ವ್ಯಾಪಾರಿ : ನೀನ್ಯಾರು ಇದನ್ನು ಕೇಳೋಕೆ? ನೀನ್ಯಾಕೆ ಇಶ್ಯೂ ಮಾಡ್ತಾ ಇದ್ದೀಯಾ?
ಯುವಕ : ನೋಡಿಲ್ಲಿ ಡ್ರೈ ಐಸ್ ನೈಟ್ರೋಜನ್‍ದು, ಇವನ ಮುಂದೆಯೇ ನಾನಿದನ್ನು ಟೆಸ್ಟ್ ಮಾಡಿದ್ದೀನಿ..!
ವ್ಯಾಪಾರಿ : ನೀನ್ ಹೇಗೆ ಟೆಸ್ಟ್ ಮಾಡ್ತೀಯಾ, ನಾನು ಆರ್ಗನೈಸರ್‍ಗೆ ಹೇಳ್ತೀನಿ, ಸಿಕ್ಕಾಪಟ್ಟೆ ನಾಟಕ ಆಡಬೇಡ
ಯುವಕ : ಹೇ ಕಾಲ್ ಮಾಡು ನೋಡೋಣ ,
ವ್ಯಾಪಾರಿ : ಗಾಂಚಲಿ ಮಾಡಬೇಡಿ, ನೀವ್ಯಾರು, ನಿಮಗ್ಯಾಕೆ ತೋರಿಸಬೇಕು ಲೈಸೆನ್ಸ್ ನ್ನು?
ಯುವಕ : ಗಾಂಚಲಿ ಅಲ್ಲ ಪ್ರೂಫ್ ತೋರಿಸಿದ್ದೀನಿ, ಅವನು ಯ್ಯೂಸ್ ಮಾಡಿರೋದು ಫುಡ್ ಗ್ರೇಡ್ ಅಲ್ಲ , ಅದನ್ನು ಕುಡಿದ್ರೇ ಪ್ರಾಬ್ಲಂ ಸರ್ , ತಪ್ಪದು
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv