ಬೆಂಗಳೂರು: ಸಂಸತ್‌ನಲ್ಲಿ ಸ್ಮೋಕ್ ಬಾಂಬ್ ಪ್ರಕರಣಕ್ಕೆ (Smoke Bomb Case) ಸಂಬಂಧಿಸಿದಂತೆ ಪ್ರತಾಪ್ ಸಿಂಹ (Pratap Simha) ಅವರನ್ನು ಹೇಗೆ ಟ್ರ್ಯಾಪ್ ಮಾಡಲು ಸಾಧ್ಯ? ಆತ ಏನು ಹುಡುಗನಲ್ಲ, ನಾನು ಕೂಡಾ ಹುಡುಗನಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಪ್ರತಿಕ್ರಿಯೆ ನೀಡಿದ್ದಾರೆ.
ಪ್ರತಾಪ್ ಸಿಂಹ ಅವರನ್ನು ಟ್ರ್ಯಾಪ್ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅದೆಲ್ಲಾ ನಮ್ಮ ನಮ್ಮ ಜವಾಬ್ದಾರಿ ಎಂದು ತಿಳಿಸಿದರು.
Advertisement
Advertisement
ದೆಹಲಿ ಪ್ರವಾಸ ವಿಚಾರವಾಗಿ ಮಾತನಾಡಿದ ಅವರು, ಹೈಕಮಾಂಡ್ ನಾಯಕರೇನೂ ನಮ್ಮನ್ನು ಕರೆದಿಲ್ಲ. ನಾವೇ ಹೋಗ್ತಾ ಇದ್ದೇವೆ. ನಾವೆಲ್ಲ ನಿಗಮ ಮಂಡಳಿ ಲಿಸ್ಟ್ ಕೊಟ್ಟಿದ್ದೇವೆ. ಅದಕ್ಕೆ ಅಂಕಿತ ಬೇಕು ಎಂದರು. ಇದನ್ನೂ ಓದಿ: ಜೋಶಿ ವಿರುದ್ಧ ಶೆಟ್ಟರ್ ಕಣಕ್ಕಿಳಿಸಲು ಪ್ಲಾನ್- ಲೋಕಸಭಾ ಟಿಕೆಟ್ ಆಫರ್ ಕೊಟ್ಟ ಸಿಎಂ
Advertisement
ತಾಲೂಕು ಜಿಲ್ಲಾ ಮಟ್ಟದಲ್ಲಿ ಗ್ಯಾರಂಟಿ ಕಾರ್ಯಕ್ರಮ ಮಾಡಬೇಕು. ಇನ್ನು 15 ದಿನಗಳ ಒಳಗೆ ಕಾರ್ಯಕ್ರಮ ಮಾಡಬೇಕು. ಕರವೇ ನಾರಾಯಣಗೌಡ ಬಂದು ಭೇಟಿಯಾಗಿದ್ದರು. ಕನ್ನಡದ ಬೋರ್ಡ್ ಹಾಕಿ ಅಂದಿದ್ದಕ್ಕೆ ಇವರ ಮೇಲೆ ಕೇಸ್ ಹಾಕಿದ್ದಾರೆ. ಯಾರೋ ದುರ್ನಡತೆಯಿಂದ ನಡೆದುಕೊಂಡಿದ್ದಾರೆ ಅಂತ ಬಂದಿದ್ದರು. ಅದರ ಬಗ್ಗೆ ಕಮಿಷನರ್ ಹತ್ತಿರ ಮಾತಾಡಿದ್ದೇನೆ. ಕನ್ನಡ ಹೋರಾಟಗಾರರ ಮೇಲೆ ಕೇಸ್ ಹಾಕಬಾರದು ಎಂದು ಹೇಳಿದರು.
Advertisement
ಕನಕಪುರದಲ್ಲಿ ಆನೆ ದಾಳಿ ವಿಚಾರವಾಗಿ ಮಾತನಾಡಿದ ಅವರು, ಪರಿಹಾರ ನೀಡುವ ಬಗ್ಗೆ ಸೂಚನೆ ನೀಡಿದ್ದೇನೆ. ನಮ್ಮ ನಾಯಕರೆಲ್ಲ ಅಲ್ಲಿಗೆ ಹೋಗಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಯತ್ನಾಳ್ ಒಂದು ಹುಚ್ಚು ನಾಯಿ ಇದ್ದಂತೆ: ರೇಣುಕಾಚಾರ್ಯ ವಾಗ್ದಾಳಿ