ನವದೆಹಲಿ: ದೆಹಲಿ ಜನರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಶೀಘ್ರದಲ್ಲಿಯೇ ರಾಷ್ಟ್ರ ರಾಜಧಾನಿಯಲ್ಲಿ ಉಸಿರಾಡಲು ತಾಜಾ ಗಾಳಿ ಸಿಗಲಿದೆ. ಕನ್ನಾಟ್ ಪ್ಲೇಸ್‍ನಲ್ಲಿನ ಹೊಂಜು ಗೋಪುರ ಪ್ರಯೋಗ ಪೂರ್ಣಗೊಂಡಿದೆ ಮತ್ತು ಅಕ್ಟೋಬರ್ 1ರಿಂದ ಕಾರ್ಯನಿರ್ವಹಿಸಲಿದೆ ಎಂದು ಬುಧವಾರ ದೆಹಲಿ ಪರಿಸರ ಸಚಿವ ಗೋಪಾಲ್ ರಾಯ್ ತಿಳಿಸಿದ್ದಾರೆ.
ಈ ಕುರಿತಂತೆ ಹೆಚ್ಚಿನ ವಿವರಗಳನ್ನು ನೀಡಿದ ಅವರು, ಐಐಟಿ-ಬಾಂಬೆ ಮತ್ತು ಐಐಟು-ದೆಹಲಿಯಿಂದ ವಿಜ್ಞಾನಿಗಳ ತಂಡವನ್ನು ರಚಿಸಲಾಗಿದ್ದು, ಅದರ ಕಾರ್ಯನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಲು ತಂಡಗಳನ್ನು ರಚಿಸಲಾಗಿದೆ ಮತ್ತು ಐಐಟಿ-ಬಾಂಬೆಯಿಂದ ಐವರು ತಜ್ಞರು ಮತ್ತು ಐಐಟಿ ದೆಹಲಿಯ ಒಬ್ಬರು ಪರಿಣತರನ್ನು ಹೊಂದಿರುತ್ತಾರೆ. ಈ ಮುನ್ನ ಆಗಸ್ಟ್ 24ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 24 ಮೀಟರ್ ಹೊಂಜು ಗೋಪುರವನ್ನು ಉದ್ಘಾಟಿಸಿದ್ದರು. ಇದನ್ನೂ ಓದಿ: ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ 50,000 ಪರಿಹಾರ ನೀಡಲು NDMA ಶಿಫಾರಸು
स्मॉग टॉवर का ट्रायल पूरा हुआ। आगामी 1 अक्टूबर से फुल कैपेसिटी में काम करना करेगा शुरू। मॉनिटरिंग के लिए IIT Bombay, IIT Delhi और DPCC के
साइंटिस्टों की टीम तैयार।
— Gopal Rai (@AapKaGopalRai) September 22, 2021
ಹೊಂಜು ಗೋಪುರದ 40 ಫ್ಯಾನ್‍ಗಳನ್ನು ಮತ್ತು 10,000 ಫಿಲ್ಟರ್‌ಗಳನ್ನು ಮಿನ್ನೇಸೋಟ ವಿಶ್ವವಿದ್ಯಾಲಯದ ತಜ್ಞರು ಅಭಿವೃದ್ಧಿಪಡಿಸಿದ್ದು, ಇದು ಚೀನಾದ ಕ್ಸಿಯಾನ್‍ನಲ್ಲಿ 100 ಮೀಟರ್ ಎತ್ತರದ ಹೊಂಜು ಗೋಪುರವನ್ನು ವಿನ್ಯಾಸಗೊಳಿಸಲು ಸಹಾಯ ಮಾಡಿದೆ. ಇದನ್ನೂ ಓದಿ: ಸೋಲೂರಿನಲ್ಲಿ ದೇಶದಲ್ಲಿಯೇ ಪ್ರಥಮ ಬಾರಿಗೆ ಹುಲ್ಲನ್ನು ಬಳಸಿ ಬಯೋ ಗ್ಯಾಸ್ ತಯಾರು – ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಪ್ರಶಂಸೆ