– ಬೇರೆ ರಾಜ್ಯಗಳಲ್ಲಿ 900 ಆದ್ರೆ ಕರ್ನಾಟಕದಲ್ಲಿ 10 ಸಾವಿರ ಯಾಕೆ ಎಂದು ಪ್ರಶ್ನಿಸಿದ ಪೀಠ
ಬೆಂಗಳೂರು: ಕರ್ನಾಟಕದಲ್ಲಿ ಸ್ಮಾರ್ಟ್ ಮೀಟರ್ (Smart Meter) ಅಳವಡಿಕೆ ವಿಚಾರವಾಗಿ ಹೈಕೋರ್ಟ್ (High Court) ಅರ್ಜಿ ವಿಚಾರಣೆಯನ್ನು ಜುಲೈ 9ಕ್ಕೆ ಮುಂದೂಡಿದೆ.
ವಿಚಾರಣೆ ನಡೆಸಿದ ಪೀಠವು ಸರ್ಕಾರದ ನಡೆಯ ಬಗ್ಗೆ ಪ್ರಶ್ನಿಸಿದೆ. ಬೇರೆ ರಾಜ್ಯಗಳಿಗೂ ಹಾಗೂ ನಮ್ಮ ರಾಜ್ಯಕ್ಕೂ ಹಣದ ವ್ಯತ್ಯಾಸ ಯಾಕೆ ಬರುತ್ತಿದೆ. ಹಳೆ ಮೀಟರ್‌ಗೂ, ಹೊಸ ಸ್ಮಾರ್ಟ್ ಮೀಟರ್‌ಗೂ ವ್ಯತ್ಯಾಸ ಏನಿದೆ, ಇದರ ವಿಶೇಷತೆಗಳೆನು ಎಂದು ಕೇಳಿದೆ.ಇದನ್ನೂ ಓದಿ: ಶಿರಸಿ ನಗರಸಭೆಯಲ್ಲಿ 21 ಲಕ್ಷ ಮೌಲ್ಯದ ಐರನ್ ಪೈಪ್ ಕಳ್ಳತನ ಕೇಸ್ – ನಗರಸಭೆ ಕಮಿಷನರ್, ಮಾಜಿ ಅಧ್ಯಕ್ಷ ಸೇರಿ 7 ಆರೋಪಿಗಳು
ಇದೇ ವೇಳೆ ಅರ್ಜಿದಾರರ ಪರ ವಕೀಲೆ ಲಕ್ಷ್ಮೀ ಅಯ್ಯಂಗಾರ್ ವಾದ ಮಾಡಿ, ಸ್ಮಾರ್ಟ್ ಮೀಟರ್ ಅಳವಡಿಕೆಯ ಮಾರ್ಗಸೂಚಿಯಲ್ಲಿ ಏನೋ ವಿಚಾರ ಅಡಗಿದೆ. ಅದನ್ನು ಓದಿ ಅರ್ಥ ಮಾಡಿಕೊಳ್ಳುವುದು ನಮಗೆ ಕಷ್ಟ ಆಗಿದೆ. ತ್ರಿ-ಫೇಸ್ ಮೀಟರ್‌ಗೆ 10 ಸಾವಿರ ರೂ. ಆಗುತ್ತದೆ. ಹೀಗಾಗಿ ಹೊಸ ಮಾರ್ಗಸೂಚಿಯಿಂದ ಜನರಿಗೆ ಹೊರೆ ಆಗ್ತಿದೆ ಎಂದು ವಾದ ಮಂಡಿಸಿದರು.
ವಾದ ಆಲಿಸಿದ ನ್ಯಾಯಾಲಯ ಮಾರ್ಗಸೂಚಿ ಬಗ್ಗೆ ಯಾಕಿಷ್ಟು ಗೊಂದಲ? ಕಾರ್ಯ ನಿರ್ವಹಣೆಯಲ್ಲಿರುವ ಮಾರ್ಗಸೂಚಿ ಎಂದು ಗ್ರಾಹಕರಿಗೆ ಆಪರೇಷನ್ ಮಾಡ್ತಿದ್ದೀರಾ? ವಿದ್ಯುತ್ ಸಂಪರ್ಕಕ್ಕೆ 10 ಸಾವಿರ ರೂ. ಕೊಡಲು ಆಗುತ್ತಾ? ಬಡವರಿಗೆ ಅಷ್ಟು ಹಣ ನೀಡಲು ಆಗುತ್ತಾ? ಗ್ರಾಹಕರಿಗೆ ಸಮಸ್ಯೆ ಆಗಬಾರದು ಎಂದು ಎಜಿಗೆ ಸೂಚನೆ ನೀಡಿದೆ.
ರಾಜ್ಯದಲ್ಲಿ 10 ಸಾವಿರ ರೂ. ಇರುವ ಸ್ಮಾರ್ಟ್ ಮೀಟರ್ ಬೇರೆ ರಾಜ್ಯದಲ್ಲಿ 900 ರೂ. ಹೇಗೆ? ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡಿ ಎಂದು ತಿಳಿಸಿ, ವಿಚಾರಣೆಯನ್ನು ಬುಧವಾರಕ್ಕೆ (ಜು.9) ಮುಂದೂಡಿದೆ.ಇದನ್ನೂ ಓದಿ: ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿಯ ಸೀರಿಯಲ್ ಫಸ್ಟ್ ಲುಕ್ ಔಟ್