ಶಿವಮೊಗ್ಗ: ಸ್ಮಾರ್ಟ್ ಸಿಟಿ ಕಾಮಗಾರಿಗಾಗಿ ಅಗೆಯಲಾಗಿದ್ದ ಗುಂಡಿಗೆ ಮೂರು ವರ್ಷದ ಮಗುವೊಂದು ಬಿದ್ದಿದೆ. ಈ ವೇಳೆ ಆಟೋ ಚಾಲಕರೊಬ್ಬರ ಸಮಯ ಪ್ರಜ್ಞೆಯಿಂದ ಮಗು ಅಪಾಯದಿಂದ ಪಾರಾದ ಘಟನೆ ನಗರದ ಆಲ್ಕೋಳ ವೃತ್ತದಲ್ಲಿ ನಡೆದಿದೆ.
Advertisement
ಬುಧವಾರ ರಾತ್ರಿ ತಾಯಿ ಹಾಗೂ ಮಗು ಖಾಸಗಿ ಬಸ್‍ನಲ್ಲಿ ಆಗಮಿಸಿ, ಆಲ್ಕೋಳ ವೃತ್ತದ ಬಳಿ ಇಳಿದಿದ್ದಾರೆ. ಮಗುವನ್ನು ಕೆಳಗಿಳಿಸಿದ ತಾಯಿ, ನಂತರ ಲಗೇಜ್ ಇಳಿಸಲು ಮುಂದಾಗಿದ್ದಾರೆ. ಅಷ್ಟರಲ್ಲೇ ಮಗು ಸ್ಥಳದಿಂದ ನಾಪತ್ತೆಯಾಗಿತ್ತು. ಮಗು ಆಲ್ಕೋಳ ವೃತ್ತದ ಸಮೀಪವಿದ್ದ ದೊಡ್ಡ ಗುಂಡಿಗೆ ಬಿದ್ದಿದ್ದೆ. ಗುಂಡಿಯಲ್ಲಿ ಬಿದ್ದು ನೀರಿನಲ್ಲಿ ಮುಳುಗುತ್ತಿದ್ದ ಮಗುವನ್ನು ಗಮನಿಸಿದ ಆಟೋ ಚಾಲಕ ಲೋಕೇಶ್ ಗುಂಡಿಯೊಳಗೆ ಇಳಿದು ಮಗುವನ್ನು ರಕ್ಷಿಸಿದ್ದಾರೆ. ಇದನ್ನೂ ಓದಿ: ಹೆಂಡತಿ ಬಾರದಿದ್ದಕ್ಕೆ ಅಪ್ರಾಪ್ತ ನಾದಿನಿಯೊಂದಿಗೆ ಪರಾರಿಯಾಗಿದ್ದ 4 ಮಕ್ಕಳ ತಂದೆ
Advertisement
ಸ್ಮಾರ್ಟ್ ಸಿಟಿ ಕಾಮಗಾರಿಗಾಗಿ ರಸ್ತೆಯ ಸಮೀಪ ಗುಂಡಿ ಅಗೆಯಲಾಗಿದ್ದು, ಗುಂಡಿ ತೆಗೆದು ತುಂಬಾ ದಿನವಾದರೂ ಮುಚ್ಚುವ ಪ್ರಯತ್ನ ಮಾಡಿರಲಿಲ್ಲ. ಈ ಘಟನೆಯ ಬಳಿಕ ಇದೀಗ ಮತ್ತಷ್ಟು ಅವಾಂತರಕ್ಕೆ ಕಾರಣವಾಗುವ ಮೊದಲು ಅಧಿಕಾರಿಗಳು ಗುಂಡಿ ಮುಚ್ಚಿಸುವ ಕೆಲಸ ಕೈಗೊಳ್ಳಲಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Advertisement
Advertisement