ಹೈದರಾಬಾದ್: ನಗರದಲ್ಲಿ ಆಗ್ನೇಯ ಏಷ್ಯಾದ 375 ಗ್ರಾಂ ತೂಕವುಳ್ಳ ಮಗುವಿಗೆ ತಾಯಿ ಜನ್ಮ ನೀಡಿದ್ದಾರೆ.
ಹೈದರಾಬಾದ್‍ನಲ್ಲಿರುವ ರೈನ್‍ಬೋ ಆಸ್ಪತ್ರೆಯಲ್ಲಿ 375 ಗ್ರಾಂ ಮಗು ಜನನವಾಗಿದೆ. ವೈದ್ಯರು ಈ ಮಗುವಿನ ತೂಕ ನೋಡಿ ದಂಗಾಗಿದ್ದಾರೆ. ಅಲ್ಲದೇ ಕಡಿಮೆ ತೂಕವಿರುವ ಮಗು ಆರೋಗ್ಯವಾಗಿ ಇರೋದನ್ನು ನೋಡಿದ ಆಸ್ಪತ್ರೆ ಸಿಬ್ಬಂದಿ ಆಶ್ಚರ್ಯಚಕಿತರಾಗಿದ್ದಾರೆ.
Advertisement
ನಿಖಿತಾ ಹಾಗೂ ಸೌರವ್ ದಂಪತಿಗೆ ಈ ಮಗು ಜನಿಸಿದೆ. ನಿಖಿತಾ ಮೂಲತಃ ಛತ್ತಿಸ್‍ಗಢದವರಾಗಿದ್ದು, ಮಗುವಿನ ತಾಯಿ ನಿಖಿತಾ ಹಾಗೂ ಮಗಳು ಚೆರಿ ಆರೋಗ್ಯಕರವಾಗಿದ್ದಾರೆ ಎಂದು ವರದಿಯಾಗಿದೆ. ಡೆಲಿವರಿ ಸಮಯದಲ್ಲಿ ವೈದ್ಯರು ಈ ಮಗುವನ್ನು ನೋಡಿ ಒಂದು ಕ್ಷಣ ದಂಗಾದರು. ನಂತರ ಮಗು ಆರೋಗ್ಯಕರವಾಗಿದೆ ಎಂದು ತಿಳಿದು ವೈದ್ಯರು ನಿಟ್ಟಸಿರು ಬಿಟ್ಟಿದ್ದಾರೆ.ಸದ್ಯ ಈ ಹೆಣ್ಣು ಮಗು ಯಾವುದೇ ತೊಂದರೆ ಇಲ್ಲದೇ ಸುಖಕರವಾಗಿದೆ ಎಂದು ಹೇಳಲಾಗಿದೆ.
Advertisement
Advertisement
ಸೌರವ್ ತನ್ನ ಅತ್ಯಂತ ಚಿಕ್ಕ ಮಗುವನ್ನು ಕಂಡು ಸಾಕಷ್ಟು ಖುಷಿಯಾಗಿದ್ದಾರೆ. ಈ ಮಗುವನ್ನು ನಿಖಿತಾ 25 ವಾರದೊಳಗೆ ಜನ್ಮ ನೀಡಿದ್ದಾರೆ. ನಾಲ್ಕು ತಿಂಗಳು ಮೊದಲೇ ಮಗು ಜನಿಸಿದ್ದು, 20 ಸೆ.ಮೀ ಉದ್ದವಿದೆ ಎಂದು ರೈನ್‍ಬೋ ಆಸ್ಪತ್ರೆಯ ಚೇರ್‍ಮೆನ್ ಹಾಗೂ ಎಂಡಿ ರಮೇಶ್ ಕಂಚ್ರಾಲಾ ತಿಳಿಸಿದ್ದಾರೆ.
Advertisement
ಈ ಹಿಂದೆ ಮುಂಬೈನಲ್ಲಿ ಭಾರತದ ಅತ್ಯಂತ ಚಿಕ್ಕ ಮಗು ಜನಿಸಿತ್ತು. ಆ ಮಗುವಿನ ಹೆಸರು ನಿರ್ವಾನ್ ಆಗಿದ್ದು, ಮುಂಬೈನ ಸೂರ್ಯ ಆಸ್ಪತ್ರೆಯಲ್ಲಿ 5 ತಿಂಗಳಿಗೆ ಜನ್ಮ ಪಡೆದಿತ್ತು. ಮಗುವಿನ ತಾಯಿ ಗರ್ಭವತಿ ಆಗಿ 22ನೇ ವಾರದಲ್ಲಿ ಅಂದರೆ ಮೇ 12, 2017ರಂದು ಜನ್ಮ ನೀಡಿದ್ದರು. ಈ ಮಗು 610 ಗ್ರಾಂ ತೂಕವಿತ್ತು.