ಬೆಂಗಳೂರು: ಬೇಕರಿ, ದಿನಸಿ, ಟೀ ಅಂಗಡಿಗಳಿಗೆ ಟ್ಯಾಕ್ಸ್ (Tax) ಕಟ್ಟುವಂತೆ ವಾಣಿಜ್ಯ ತೆರಿಗೆ ಇಲಾಖೆ ನೀಡುತ್ತಿರುವ ನೋಟಿಸ್ ಈಗ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ವಾಣಿಜ್ಯ ಇಲಾಖೆಯ ಈ ಟ್ಯಾಕ್ಸ್‌ನ್ನು ವಜಾ ಮಾಡುವಂತೆ ಆಗ್ರಹಿಸಿ ಬೇಕರಿ, ದಿನಸಿ, ಟೀ ಅಂಗಡಿ ಮಾಲೀಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸಿಎಂ, ಡಿಸಿಎಂ ಸೇರಿದಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೂ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಸಂಪೂರ್ಣ ಟ್ಯಾಕ್ಸ್ ವಜಾಕ್ಕೆ ಆಗ್ರಹಿಸಿದ್ದಾರೆ. ಈ ಬಗ್ಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಶೀಘ್ರವೇ ಸಭೆ ಕರೆದು, ಟ್ಯಾಕ್ಸ್ ಅಧಿಕಾರಿಗಳ ಜೊತೆ ಮಾತನಾಡುವ ಬಗ್ಗೆ ಭರವಸೆ ನೀಡಿದೆ ಎನ್ನಲಾಗಿದೆ.
ಇಷ್ಟಕ್ಕೆ ಸುಮ್ಮನಾಗದ ಕಾರ್ಮಿಕರು ಸರ್ಕಾರಕ್ಕೆ ಹತ್ತು ದಿನದ ಗಡುವು ನೀಡಿದ್ದಾರೆ. ಒಂದು ವೇಳೆ ಸರ್ಕಾರ ಸಭೆ ಕರೆದು ಪರಿಹಾರ ನೀಡದೇ ಹೋದಲ್ಲಿ, ಜುಲೈ 25 ರಂದು ರಾಜ್ಯಾದ್ಯಾಂತ ಅಂಗಡಿ, ಬೇಕರಿಗಳನ್ನು ಬಂದ್ ಮಾಡಿ ಪ್ರತಿಭಟನೆ (Protest) ಮಾಡಲಾಗುವುದು ಅಂತ ಎಚ್ಚರಿಕೆ ನೀಡಿದ್ದಾರೆ.