`ಅಗ್ನಿಸಾಕ್ಷಿ’ (Agnisakshi) ಮತ್ತು `ಬಿಗ್ ಬಾಸ್’ (Bigg Boss) ಬೆಡಗಿ ವೈಷ್ಣವಿ ಗೌಡ (Vaishnavi Gowda) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮತ್ತೆ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ಕಿರುತೆರೆಯತ್ತ ಮುಖ ಮಾಡಿದ್ದಾರೆ. ಹೊಚ್ಚ ಹೊಸ ಪಾತ್ರದ ಮೂಲಕ ಟಿವಿ ಪರದೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ.
ಕಿರುತೆರೆಯ ಟಾಪ್ ಒನ್ ಸೀರಿಯಲ್ ಅಗ್ನಿಸಾಕ್ಷಿ ನಾಯಕಿಯಾಗಿ ಮೋಡಿ ಮಾಡಿದ್ದರು. ಬಳಿಕ ಬಿಗ್ ಬಾಸ್ ಮನೆಗೆ ಲಗ್ಗೆ ಕನ್ನಡಿಗರ ಮನ ಗೆದ್ದಿದ್ದರು. ನಟಿಯ ಅದ್ಭುತ ವ್ಯಕ್ತಿತ್ವವನ್ನ ಕರ್ನಾಟಕದ ಜನತೆ ಮೆಚ್ಚಿಕೊಂಡಿತ್ತು. ಇದೀಗ ಲಾಂಗ್ ಗ್ಯಾಪ್ ನಂತರ `ಸೀತಾರಾಮ’ (Seetharam) ಧಾರಾವಾಹಿ ಮೂಲಕ ನಟಿ ಕಂಬ್ಯಾಕ್ ಮಾಡ್ತಿದ್ದಾರೆ.
- Advertisement3
- Advertisement
ಸ್ವಪ್ನ ಕೃಷ್ಣ ನಿರ್ದೇಶನದ ಸೀತಾರಾಮ ಧಾರಾವಾಹಿಯಲ್ಲಿ ನಾಯಕಿಯಾಗಿ ವೈಷ್ಣವಿ ಎಂಟ್ರಿ ಕೊಡ್ತಿದ್ದಾರೆ. ʻಮಂಗಳಗೌರಿ ಮದುವೆʼ(Mangala Gowri Maduve) ಖ್ಯಾತಿಯ ಗಗನ್‌ಗೆ ಜೋಡಿಯಾಗಿ ನಟಿ ಬರುತ್ತಿದ್ದಾರೆ. ಸಿನಿಮಾ ಮತ್ತು ಸೀರಿಯಲ್ ಎರಡನ್ನ ನಟಿ ಬ್ಯಾಲೆನ್ಸ್ ಮಾಡ್ತಿದ್ದಾರೆ. ಇದು ನಿಜಕ್ಕೂ ವೈಷ್ಣವಿ ಫ್ಯಾನ್ಸ್‌ಗೆ ಡಬಲ್ ನ್ಯೂಸ್ ಎಂದೇ ಹೇಳಬಹುದು. ಇದನ್ನೂ ಓದಿ: ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ಅನಿರುದ್ಧ್-ಅನು ಜೋಡಿ
ಸದ್ಯದಲ್ಲೇ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಲಿದ್ದು, `ಅಗ್ನಿಸಾಕ್ಷಿ’ ನೋಡಿ ಮೆಚ್ಚಿಕೊಂಡಿದ್ದ ಫ್ಯಾನ್ಸ್‌ಗೆ ಸೀತಾರಾಮ ಸೀರಿಯಲ್ ಮೂಲಕ ಕೂಡ ನಟಿ ಅದೆಷ್ಟರ ಮಟ್ಟಿಗೆ ಮೋಡಿ ಮಾಡ್ತಾರೆ ಎಂಬುದನ್ನ ಕಾದುನೋಡಬೇಕಿದೆ.