InternationalLatestMain Post

ವಿದ್ಯುತ್ ಟವರ್‌ನಲ್ಲಿ ಸಿಕ್ಕಿಹಾಕಿಕೊಂಡ ಮಿನಿ ವಿಮಾನ

ವಾಷಿಂಗ್ಟನ್: ಮಿನಿ ವಿಮಾನವೊಂದು (Small Plane) ಆಗಸದಲ್ಲಿ ಹಾರುತ್ತ ಕೆಳಗಿಳಿದು ವಿದ್ಯುತ್ ಟವರ್‌ನಲ್ಲಿ (Power Lines) ಸಿಕ್ಕಿಹಾಕಿಕೊಂಡ ಘಟನೆ ಅಮೆರಿಕದ (America) ಮೇರಿಲ್ಯಾಂಡ್‍ನಲ್ಲಿ ನಡೆದಿದೆ.

ವಿದ್ಯುತ್ ಟವರ್‌ನಲ್ಲಿ ಸಿಕ್ಕಿಹಾಕಿಕೊಂಡ ಮಿನಿ ವಿಮಾನ

ಮಿನಿ ವಿಮಾನ ಹಾರಾಡುತ್ತ ಏಕಾಏಕಿ ಕೆಳಕ್ಕೆ ಬಂದು ವಿದ್ಯುತ್ ಟವರ್‌ಗೆ ಡಿಕ್ಕಿ ಹೊಡೆದು ಅಲ್ಲೇ ಸಿಕ್ಕಿಹಾಕಿಕೊಂಡಿದೆ. ವಿಮಾನ ಡಿಕ್ಕಿ ಹೊಡೆಯುತ್ತಿದ್ದಂತೆ ಪವಾಡ ಸದೃಶ್ಯವಾಗಿ ಪೈಲಟ್ ಪಾರಾಗಿದ್ದಾನೆ. ಇದನ್ನೂ ಓದಿ: ಇಟಲಿಯ ಇಶಿಯಾ ದ್ವೀಪದಲ್ಲಿ ಭೂಕುಸಿತ – 3 ವಾರದ ಶಿಶು ಸೇರಿ 7 ಸಾವು

ಘಟನೆಯಿಂದಾಗಿ ವಾಷಿಂಗ್ಟನ್ (Washington) ಸೇರಿದಂತೆ ಮೇರಿಲ್ಯಾಂಡ್‍ನ 90,000 ಮನೆ ಹಾಗೂ ಕೈಗಾರಿಕಾ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಾಸವಾಗಿ ಜನ ಪರದಾಡಿದ್ದಾರೆ. ಮಿನಿ ವಿಮಾನ ಅಪಘಾತವಾಗುತ್ತಿದ್ದಂತೆ ವಿದ್ಯುತ್ ಟವರ್‌ನ ವಯರ್‌ಗಳು ಕಡಿತಗೊಂಡಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಮತ್ತು ಅಗ್ನಿ ಶಾಮಕದಳ ಪೈಲಟ್‍ನನ್ನು ರಕ್ಷಿಸಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿದ ವೇಳೆ ಮಳೆಯಿಂದಾಗಿ ಮಿನಿ ವಿಮಾನ ವಿದ್ಯುತ್ ಟವರ್‌ಗೆ ಡಿಕ್ಕಿ ಹೊಡೆದಿದೆ ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ. ಇದನ್ನೂ ಓದಿ: ಗಂಟಲಲ್ಲಿ ಸಿಕ್ಕಿಕೊಂಡ ಚಾಕ್ಲೇಟ್- 9 ವರ್ಷದ ಬಾಲಕ ಉಸಿರುಗಟ್ಟಿ ಸಾವು

Live Tv

Leave a Reply

Your email address will not be published. Required fields are marked *

Back to top button