ಬೆಂಗಳೂರು: ಅಂದೊಂದು ಸಣ್ಣ ಕುಟುಂಬ ಗಂಡ-ಹೆಂಡತಿ ಮಗು, ಜೊತೆಗೆ ಎರಡು ನಾಯಿಗಳು. ಮದುವೆಯಾಗಿ 11 ವರ್ಷದ ಬಳಿಕ ಮಗುವಾಗಿತ್ತು. ಮಗುವಾಗೋ ಮೊದಲು ಈ ದಂಪತಿಗೆ ಮಕ್ಕಳಂತೆ ಇದ್ದಿದ್ದು ಆ ಶ್ವಾನಗಳು. ಎಲ್ಲೇ ಹೊರಗೆ ಹೊದರೂ ಜೊತೆಯಲ್ಲಿ ನಾಯಿ ಇದ್ದೆ ಇರ್ತಿತ್ತು. ಹೀಗೆ ಕಳೆದ ಮಾರ್ಚ್ 8 ರ ಶಿವರಾತ್ರಿಗೆ ಹಾಸನದ ಪುರದಮ್ಮ ದೇವಾಲಯಕ್ಕೆ ಕುಟುಂಬ ಸಮೇತ ಹೋಗಿದ್ದ ಈ ದಂಪತಿ ತಮ್ಮ ಪ್ರೀತಿಯ ಶ್ವಾನವೊಂದನ್ನು ಮಿಸ್ (Dog Missing) ಮಾಡಿಕೊಂಡಿದ್ದಾರೆ.
Advertisement
ಸಾಕು ಪ್ರಾಣಿಗಳ ಜೊತೆಗಿನ ಸಂಬಂಧವೇ ಬೇರೆಯದ್ದಾಗಿರುತ್ತದೆ. ಮೂರು ವರ್ಷದಿಂದ ಸಾಕಿದ್ದ ಡಂಬೂ ಎಂಬ ನಾಯಿ ಕಳೆದ ಶಿವರಾತ್ರಿ ಹಬ್ಬದ ದಿನ ಹಾಸನ ಅರಸೀಕೆರೆ ಹೈವೇಯಲ್ಲಿ ಮಿಸ್ ಆಗಿಬಿಟ್ಟಿದೆ. ದೇವಸ್ಥಾನಕ್ಕೆ ಅಂತಾ ಹೋಗಿದ್ದ ಅಶೋಕ್, ಅಶ್ವಿನಿ ದಂಪತಿ ಬರುವಾಗ ಹೈವೇಯಲ್ಲಿ ರೆಸ್ಟ್ ಗೆ ಅಂತಾ ಕಾರ್ ನಿಲ್ಲಿಸಿದ್ದಾಗ ಡಂಬೂ ಕೂಡ ಕಾರಿನಿಂದ ಇಳಿದಿದ್ದ. ಆದರೆ ಅದೇ ವೇಳೆ ಡಂಬೂ ಮಿಸ್ ಆಗಿಬಿಟ್ಟಿದ್ದಾನೆ. ನಾಯಿ ಕಳೆದು ಹೋಗಿದ್ದನ್ನ ಗಮಿಸಿದ ದಂಪತಿ ಸುತ್ತಮುತ್ತ ಎಲ್ಲಾ ಕಡೆ ಹುಡುಕಿದ್ದಾರೆ. ಜೊತೆಗೆ ದುಗ್ಗ ಪೊಲೀಸ್ರಿಗೂ ಮಾಹಿತಿ ನೀಡಿ ದಯಮಾಡಿ ನಾಯಿಯನ್ನ ಹುಡುಕಿಸಿ ಕೊಡಿ ಎಂದು ಮನವಿ ಮಾಡಿದ್ದಾರೆ.
Advertisement
Advertisement
ನಾಯಿ ಮಿಸ್ ಆದಾಗಿನಿಂದ ಅಶ್ವಿನಿಯವರು ಕಣ್ಣೀರಿನಲ್ಲೇ ಕಾಲಕಳೆಯುತ್ತಿದ್ದರೆ, ಒಂದು ವರ್ಷದ ಮಗ ಅರ್ಥಿವ್ ನಾಯಿ ಡಂಬೂ ಕಾಣಿಸದೇ ಇರೋದ್ರಿಂದ ಅನ್ನ ನೀರು ಬಿಟ್ಟಿದ್ದಾನೆ. ಪರಿಣಾಮ ಇದೀಗ ಆತ ಜ್ವರದಿಂದ ಬಳಲುತ್ತಿದ್ದಾನೆ. ಸ್ವಂತ ಮಗನಂತೆ ನಾಯಿಯನ್ನ ಸಾಕಿದ್ದ ಇವರು ನಾಯಿಗಾಗಿ ಕಳೆದುಹೋಗಿರೋ ಭಾಗದಲ್ಲಿ ಹುಡುಕಾಟ ಮುಂದುವರಿಸಿದ್ದಾರೆ. ಇದನ್ನೂ ಓದಿ: ಪಿಟ್‍ಬುಲ್, ಬುಲ್‍ಡಾಗ್, ರಾಟ್‍ವೀಲರ್: 23 ತಳಿ ಅಪಾಯಕಾರಿ ಶ್ವಾನಗಳ ನಿಷೇಧಕ್ಕೆ ರಾಜ್ಯಗಳಿಗೆ ಕೇಂದ್ರ ಆದೇಶ
Advertisement
ಬೆಂಗಳೂರಿನ ಬಾಗಲಗುಂಟೆಯಲ್ಲಿ ವಾಸವಾಗಿರೋ ಇವರು, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮತ್ತು ವಾಟ್ಸಾಪ್ ನಲ್ಲಿ ಪೋಸ್ಟ್ ಹಾಕಿ ನಾಯಿ ತೆಗೆದುಕೊಂಡು ಹೋಗಿರೋರು ದಯವಿಟ್ಟು ವಾಪಸ್ ಕೊಡಿ ಎಂದು ಮನವಿ ಮಾಡಿದ್ದಾರೆ. ಅಶ್ವಿನಿ ಪತಿ ಅಶೋಕ್ ಕೂಡ ಶುಕ್ರವಾರದಿಂದ ಕೆಲಸ ಕಾರ್ಯ ಬಿಟ್ಟು ಅರಸೀಕೆರೆ ಹಾಸನ ಹೈವೇಯಲ್ಲ ಸುತ್ತಮುತ್ತ ಅಲ್ಲಿನ ಗ್ರಾಮಗಳಲ್ಲಿ ನಾಯಿಗಾಗಿ ಹುಡುಕಾಟ ಮಾಡ್ತಿದ್ದಾರೆ.
ಡಿಂಬೂ ಎಂಬ ನಾಯಿ ಈ ಮನೆಯ ಮಗನಾಗಿದ್ದು, ಇನ್ನೊಂದು ನಾಯಿ ಚಿಟ್ಟಿ ಕೂಡ ಊಟ ಮಾಡದೇ ಒಂದು ಮೂಲೆಯಲ್ಲಿ ಮಂಕಾಗಿ ಕೂತಿದ್ದಾನೆ. ನಾಯಿ ಕಾಣದೇ ಮಗು ಕೂಡ ಡಲ್ ಆಗಿದ್ದು, ನಾಯಿಗಾಗಿ ಅಶ್ವಿನಿ ಕಣ್ಣೀರು ಹಾಕ್ತಿದ್ದಾರೆ. ನಮ್ಮ ಮನೆಯ ಮಗನಂತೆ ಅವನು ಇದ್ದ, ಅವನು ಇಲ್ಲದೇ ಮನೆ ಖಾಲಿಖಾಲಿಯಾಗಿದೆ. ನಾಯಿಯನ್ನ ತೆಗೆದುಕೊಂಡು ಹೋಗಿರೋರು ವಾಪಸ್ ಕೊಡಿ, ನಿಮಗೆ ನಮ್ಮ ಕೈಲಾದ ಸಹಾಯ ಮಾಡ್ತೀವಿ ಅಂತಾ ಅಶ್ವಿನಿ ಮನವಿ ಮಾಡಿದ್ದಾರೆ.
ಒಟ್ಟಿನಲ್ಲಿ ಹಾಸನ ಅರಸೀಕರೆ ಹೈವೇಯಲ್ಲಿ ಮಿಸ್ ಆಗಿರೋ ನಾಯಿಯನ್ನ ಯಾರೋ ಬೈ ಮಿಸ್ ಆಗಿ ತೆಗೆದುಕೊಂಡು ಹೋಗಿರೋರು ವಾಪಸ್ ತಂದುಕೊಟ್ಟು ತಾಯಿ-ಮಗನ ನೋವನ್ನ ನೀಗಿಸಿ ಅನ್ನೋದೇ ಎಲ್ಲರ ಆಶಯವಾಗಿದೆ.