ಬೆಂಗಳೂರು: ವಿಧಾನಸಭಾ ಚುನಾವಣೆಗೆ ಬಿಜೆಪಿ ಈಗಾಗಲೇ ತನ್ನ ಎರಡು ಪಟ್ಟಿಗಳಲ್ಲಿ 154 ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿದ್ದು, ಈ ನಡುವೆ ಮಾಜಿ ಸಿಎಂ ಎಂಸ್ ಕೃಷ್ಣ ಕೆಲ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪಗೆ ಶಿಫಾರಸು ಪತ್ರ ಬರೆದಿದ್ದಾರೆ.
ಎಸ್‍ಎಂ ಕೃಷ್ಣ ಅವರು ತಮ್ಮ ಪತ್ರದ ಮೂಲಕ ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ನಾಲ್ವರು ಅಭ್ಯರ್ಥಿಗಳನ್ನು ಪರಿಗಣಿಸುವಂತೆ ತಿಳಿಸಿದ್ದು, ಪ್ರಮುಖವಾಗಿ ಕಡೂರು ಕ್ಷೇತ್ರದಿಂದ ಬೀರೂರು ದೇವರಾಜ್, ಗಾಂಧಿನಗರದಿಂದ ಎಂ.ಬಿ.ಶಿವಪ್ಪ, ಚಾಮರಾಜನಗರದಿಂದ ಡಿ.ಮಾದೇಗೌಡ, ಮಂಡ್ಯ ಕ್ಷೇತ್ರದಿಂದ ಎನ್.ಶಿವಣ್ಣ ಅವರ ಹೆಸರನ್ನು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈಗಾಗಲೇ ಕಡೂರು ಕ್ಷೇತ್ರದಿಂದ ಬೆಳ್ಳಿ ಪ್ರಕಾಶ್ ಟಿಕೆಟ್ ಘೋಷಣೆ ಮಾಡಲಾಗಿದೆ. ಕೃಷ್ಣ ಅವರ ಪತ್ರದಿಂದ ಕಡೂರಿನ ಅಭ್ಯರ್ಥಿ ಬದಲಾಗುತ್ತಾ ಅಥವಾ ಉಳಿದ ಮೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ವೇಳೆ ಮೂವರಿಗೂ ಟಿಕೆಟ್ ಸಿಗುತ್ತಾ ಎನ್ನುವ ಪ್ರಶ್ನೆಗೆ ಬಿಜೆಪಿಯ ಮೂರನೇ ಪಟ್ಟಿ ಬಿಡುಗಡೆಯ ವೇಳೆ ಉತ್ತರ ಸಿಗಲಿದೆ.