ಮಂಡ್ಯ: ಎಸ್.ಎಂ ಕೃಷ್ಣ (SM Krishna) ಅವರು ಸಾವಿನಲ್ಲಿಯೂ ತಮ್ಮ ಹುಟ್ಟೂರಿನ ಒಳಿತನ್ನೇ ಬಯಸುವ ಮೂಲಕ ದೇವಸ್ಥಾನಗಳ ಜೀರ್ಣೋದ್ಧಾರಗೊಳಿಸಿದ್ದರು.
ಮಂಡ್ಯ (Mandya) ಜಿಲ್ಲೆಯವರಾದ ಎಸ್.ಎಂ ಕೃಷ್ಣ ಅವರು ತಮ್ಮ ಹುಟ್ಟೂರು ಸೋಮನಹಳ್ಳಿಯಲ್ಲಿ ಅಭಯ ಆಂಜನೇಯಸ್ವಾಮಿ, ಮಾರಮ್ಮ ಹಾಗೂ ಬೋರೆದೇವೇರ ದೇವಸ್ಥಾನಗಳನ್ನು 45 ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಿದ್ದರು.ಇದನ್ನೂ ಓದಿ: ಸರ್ಕಾರಿ ಶಾಲಾ ಮಕ್ಕಳಿಗೆ ಬಿಸಿಯೂಟ ರಾಯಚೂರಿನಲ್ಲಿ ಉದ್ಘಾಟಿಸಿದ್ದ ಕೃಷ್ಣ
- Advertisement -
- Advertisement -
ದೇವಸ್ಥಾನ ಜೀರ್ಣೋದ್ಧಾರ ಸಮಯದಲ್ಲಿ ಮಂಡಲ ಪೂಜೆ ಪೂಜೆ ಮಾಡುವಾಗ ತೀವ್ರ ಅನಾರೋಗ್ಯಕ್ಕೀಡಾಗಿದ್ದರು. ಎಸ್‌ಎಂಕೆ ಒಟ್ಟು 48 ದಿನಗಳ ಮಂಡಲ ಪೂಜೆ ನೆರವೇರಿಸಬೇಕಿತ್ತು. ಕಾಕತಾಳೀಯ ಎಂಬಂತೆ 48 ದಿನಗಳ ಮಂಡಲ ಪೂಜೆ ಬಳಿಕ ಸಾವನ್ನಪ್ಪಿದ್ದಾರೆ. ಒಂದು ವೇಳೆ ಪೂಜೆಯ ಮಧ್ಯೆಯೇ ಸಾವನ್ನಪ್ಪಿದ್ದರೆ ಮಂಡಲ ಪೂಜೆ ಅಪೂರ್ಣವಾಗುತ್ತಿತ್ತು. ದೇವರ ಆಶಯವೆಂಬಂತೆ ಪೂಜೆ ಮುಗಿದ ಬಳಿಕ ಎಸ್‌ಎಂಕೆ ಕೊನೆಯುಸಿರೆಳೆದಿದ್ದಾರೆ.
- Advertisement -
- Advertisement -
ಸಾವಲ್ಲೂ ಗ್ರಾಮಕ್ಕೆ ಒಳಿತನ್ನೇ ಬಯಸಿದ್ದ ಎಸ್‌ಎಂ ಕೃಷ್ಣ ಅವರು ಹುಟ್ಟೂರಿಗೆ ಸಲ್ಲಿಸಿದ್ದ ಸೇವೆಯನ್ನು ನೆನದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಭಾವುಕರಾಗಿದ್ದಾರೆ.ಇದನ್ನೂ ಓದಿ: ಭಾರತ ಒಬ್ಬ ದೂರದೃಷ್ಟಿ ನಾಯಕನನ್ನು ಕಳೆದುಕೊಂಡಿದೆ – ಪ್ರಹ್ಲಾದ್ ಜೋಶಿ ಸಂತಾಪ