ಎಸ್.ಎಂ.ಕೃಷ್ಣ ಅವರ ರಾಜಕೀಯ ಜೀವನ ಶುರುವಾಗಿದ್ದೆ ವಿದ್ಯಾರ್ಥಿ ದೆಸೆಯಿಂದ. ಅಮೆರಿಕಾಗೆ ಹೋಗಿ ಬಂದ ನಂತರ ರಾಜಕೀಯಕ್ಕೆ ಬರಲ್ಲ ಅಂದುಕೊಂಡಿದ್ದವರಿಗೆ ಶಾಕ್ ಕೊಟ್ಟಿದ್ರಂತೆ ಎಸ್.ಎಂ.ಕೃಷ್ಣ. ಅದಕಕ್ಕೆ ಕಾರಣ ಕಾಲೇಜು ದಿನಗಳಿಂದ ಯೂನಿಯನ್ ಚುನಾವಣೆಗಳಲ್ಲಿ ಭಾಗವಹಿಸಿ ಗೆಲ್ಲುತ್ತಿದ್ದು.
ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಓದುವಾಗಲೇ ಕಾಲೇಜ್ ಯೂನಿಯನ್ ಗೆ ಎಸ್.ಎಂ.ಕೃಷ್ಣ ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ರಂತೆ. ಆ ಯೂನಿಯನ್ ಚುನಾವಣೆಯಲ್ಲಿ 18 ಮತಗಳ ಅಂತರದಿಂದ ಎಸ್.ಎಂ.ಕೃಷ್ಣ ಸೋತು ಬಿಟ್ಟರಂತೆ. ಆ ಚುನಾವಣೆಯಲ್ಲಿ ಎಸ್‍ಎಂಕೆ ಸೋತರೂ ಒಂದು ಸಮಾಧಾನ ಸಿಕ್ಕಿತ್ತಂತೆ. 101 ಹುಡುಗಿಯರ ಮತಗಳು ಇದ್ವಂತೆ. ಇದರಲ್ಲಿ ಎಸ್ ಎಂಕೆಗೆ ಬರೋಬ್ಬರಿ 97 ಮತಗಳು ಬಿದ್ದಿದ್ವಂತೆ.
ಈ ಸ್ವಾರಸ್ಯಕರ ಘಟನೆ ಹೇಳಿದವರು ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ. ಬೆಂಗಳೂರಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಎಸ್ ಎಂಕೆ ಕುರಿತ 5 ಪುಸ್ತಕಗಳು ಬಿಡುಗಡೆಯಾದವು. ಈ ಸಮಾರಂಭದಲ್ಲಿ ಮಾತನಾಡಿದ ವೆಂಕಟಾಚಲಯ್ಯ ಅವರು ಎಸ್.ಎಂ. ಕೃಷ್ಣರ ಆಕರ್ಷಣೆಯ ಬಗ್ಗೆ ಮೆಲಕು ಹಾಕಿದರು. ಆಗಿನಿಂದಲೂ ಎಸ್ ಎಂಕೆ ಹುಡುಗಿಯರ ಕಣ್ಮಣಿ. ಮಹಾರಾಜ ಕಾಲೇಜಿನ ಎಲೆಕ್ಷನ್ ನಲ್ಲಿ ಸೋತ್ರೂ 97 ಹುಡುಗಿಯರ ಮತ ಬಿದ್ದಿದ್ವು ಅಂದ್ರೆ ಅರ್ಥ ಮಾಡಿಕೊಳ್ಳಿ ಅಂತಾ ಹಾಸ್ಯ ಮಾಡಿದ್ರು. ಇದನ್ನೂ ಓದಿ: ಎಸ್. ಎಂ.ಕೃಷ್ಣ ಹಿಂದೆ ರೂಪವತಿಯರ ಕ್ಯೂ
ಅಷ್ಟೇ ಅಲ್ಲ ಎಸ್.ಎಂ. ಕೃಷ್ಣ ಚಾರ್ಮಿಂಗ್ ಮ್ಯಾನ್. 125 ವರ್ಷ ಬದುಕಿರಲಿ. ಎಲೆಕ್ಷನ್ ಗೆ ನಿಲ್ಲಬೇಕು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ವೋಟ್ ಹಾಕ್ತಾರೆ ಅಂತೇಳಿದ್ರು. ಆಗ ಇಡೀ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಗು ನಗು.