ಬೆಂಗಳೂರು: ಶ್ವಾಸಕೋಶ ಸೋಂಕಿ (Lungs Infection) ನಿಂದ ಬಳಲುತ್ತಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ (S.M Krishna) ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದಿದೆ.
ಇಂದು ಮಣಿಪಾಲ ಆಸ್ಪತ್ರೆ (Manipal Hospital) ಗೆ ಕೆಪಿಸಿಸಿ ಅಧ್ಯಕ್ಷರು ಭೇಟಿ ನೀಡಿ ಎಸ್‍ಎಂ ಕೃಷ್ಣ ಅವರ ಆರೋಗ್ಯ ವಿಚಾರಿಸಿದರು. ಕೃಷ್ಣ ಅವರಿಗೆ ಹೆಚ್ಚಿನ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಯಾರೂ ಅವರ ಭೇಟಿಗೆ ಬರಬಾರದು ಎಂದು ಡಿಕೆಶಿ (D.K Shivakumar ಕೋರಿದ್ದಾರೆ.
Advertisement
Advertisement
ತೀವ್ರ ಜ್ವರ ಹಿನ್ನೆಲೆ ಶನಿವಾರ ರಾತ್ರಿ 11 ಗಂಟೆವರೆಗೂ ವೈದೇಹಿ (Vydehi Hospital) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಇದ್ದರು. ಐಸಿಯು ಮತ್ತು ಹೆಚ್ಚಿನ ನಿಗಾ ಹಿನ್ನೆಲೆ ಕುಟುಂಬಸ್ಥರು ಅವರನ್ನು ಮಣಿಪಾಲ್ ಆಸ್ಪತ್ರೆ (Manipal Hospital) ಗೆ ಶಿಫ್ಟ್ ಮಾಡಿದ್ದಾರೆ. ಸದ್ಯ ಮಣಿಪಾಲ್ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಾ ಇದ್ದು, ವೈದ್ಯರ ತಂಡ ಆರೈಕೆ ಮಾಡ್ತಿದೆ: ಎಸ್‍ಎಂಕೆ ಹೆಲ್ತ್ ಬುಲೆಟಿನ್
Advertisement
Advertisement
ಮಾಜಿ ಸಿಎಂ ಆಸ್ಪತ್ರೆಗೆ ದಾಖಲಾದ ವಿಚಾರ ಗೊತ್ತಾಗುತ್ತಿದ್ದಂತೆಯೇ ರಾಜಕೀಯ ಮುಖಂಡರು ಶೀಘ್ರ ಚೇತರಿಕೆಗೆ ಪ್ರಾರ್ಥಿಸಿಕೊಂಡಿದ್ದಾರೆ. ಅಲ್ಲದೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಯವರು ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.