ರಾಮನಗರ: ಮಾಜಿ ಸಿಎಂ ಎಸ್‌ಎಂ ಕೃಷ್ಣ (SM Krishna) ವಿಧಿವಶರಾದ ಹಿನ್ನೆಲೆ ಬುಧವಾರ ರಾಮನಗರದಲ್ಲಿ (Ramanagara) ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ರಾಮನಗರ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಮಾಹಿತಿ ನೀಡಿದ್ದಾರೆ.
ಬುಧವಾರ ಬಿಡದಿ, ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಿದ್ದು, ಜಿಲ್ಲಾಡಳಿತ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ಬಿಡದಿಯ ಬಿಜೆಎಸ್ ಸರ್ಕಲ್, ರಾಮನಗರ ಐಜೂರು ವೃತ್ತ ಹಾಗೂ ಚನ್ನಪಟ್ಟಣದ ಗಾಂಧಿ ಭವನದ ಬಳಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದನ್ನೂ ಓದಿ: ಭಾಗ-1 | ಶಾಸಕನಿಂದ ಮುಖ್ಯಮಂತ್ರಿವರೆಗೆ…. ಎಸ್‌ಎಂಕೆ ರಾಜಕೀಯ ಜೀವನದ ಏಳುಬೀಳು!
Advertisement
Advertisement
ಬೆಳಗ್ಗೆ 9:30ಕ್ಕೆ ಬಿಡದಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಬಳಿಕ ರಾಮನಗರದ ಐಜೂರು ವೃತ್ತ ಹಾಗೂ ಚನ್ನಪಟ್ಟಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಪಾಯಿಂಟ್‌ನಲ್ಲೂ 15ರಿಂದ 20 ನಿಮಿಷಗಳು ಮಾತ್ರ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಬಳಿಕ ಮೈಸೂರು-ಬೆಂಗಳೂರು ಹಳೆ ಹೆದ್ದಾರಿಯಲ್ಲಿ ಎಸ್.ಎಂ.ಕೃಷ್ಣ ಪಾರ್ಥೀವ ಶರೀರ ಸೋಮನಹಳ್ಳಿ ತಲುಪಲಿದೆ. ಇದನ್ನೂ ಓದಿ: ಎಸ್‌ಎಂಕೆ ಅಂತಿಮ ದರ್ಶನ ಪಡೆದ ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ
Advertisement