ಸವಣೂರು ಪಟ್ಟಣದ ಎಸ್.ಎಂ.ಕೃಷ್ಣ ನಗರ ಸೀಲ್‍ಡೌನ್

Public TV
1 Min Read
HVR Sealdown

ಹಾವೇರಿ: ಜಿಲ್ಲೆಯ ಸವಣೂರು ಪಟ್ಟಣದ ಎಸ್.ಎಂ.ಕೃಷ್ಣ ನಗರವನ್ನು ಸೀಲ್‍ಡೌನ್ ಮಾಡಲಾಗಿದೆ.

ಮುಂಬೈನಿಂದ ಬಂದಿದ್ದ ಇಬ್ಬರಿಗೆ ಕೊರೊನಾ ತಗುಲಿರೋದು ದೃಢಪಡುತ್ತಿದ್ದಂತೆ ಸೋಂಕಿತರು ವಾಸವಾಗಿದ್ದ ಎಸ್.ಎಂ.ಕೃಷ್ಣ ನಗರವನ್ನು ಜಿಲ್ಲಾಡಳಿತ ಸೀಲ್‍ಡೌನ್ ಮಾಡಿದೆ. ಸೀಲ್‍ಡೌನ್ ಮಾಡಿರೋ ಪ್ರದೇಶದಲ್ಲಿ ಯಾರೂ ಒಳಗೆ ಮತ್ತು ಹೊರಗೆ ಹೋಗದಂತೆ ಜಿಲ್ಲಾಡಳಿತ ಪ್ರವೇಶ ನಿರ್ಬಂಧಿಸಿದೆ. ಪ್ರದೇಶದ ಜನರಿಗಾಗಿ ಜಿಲ್ಲಾಡಳಿತ ಕಂಟ್ರೋಲ್ ರೂಂ ಸ್ಥಾಪಿಸಿದ್ದು, ಅಗತ್ಯ ವಸ್ತುಗಳನ್ನ ಪೂರೈಸೋದಾಗಿ ಹೇಳಿದೆ.

HVR Sealdown. 1jpg

ಎಸ್.ಎಂ.ಕೃಷ್ಣ ನಗರದ ಸುತ್ತಲಿನ 5 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಬಫರ್ ಝೋನ್ ಅಂತ ಘೋಷಣೆ ಮಾಡಲಾಗಿದೆ. ಎರಡು ದಿನಗಳ ಹಿಂದೆ ತಮ್ಮನಿಗೆ ಕೊರೊನಾ ಸೋಂಕು ಇರೋದು ದೃಢಪಟ್ಟಿದ್ರೆ, ಅಣ್ಣನಲ್ಲಿ ಸೋಂಕು ಇರೋದು ಮಂಗಳವಾರ ಖಚಿತವಾಗಿತ್ತು. ಏಪ್ರಿಲ್ 28,ರಂದು ಗೂಡ್ಸ್ ಲಾರಿಯಲ್ಲಿ ಮುಂಬೈನಿಂದ ಮೂವರು ಬಂದಿದ್ರು. ಮೂವರಲ್ಲಿ ತಮ್ಮ ಮತ್ತು ಅಣ್ಣನಿಗೆ ಕೊರೊನಾ ಸೋಂಕು ತಗುಲಿದೆ.

Share This Article
Leave a Comment

Leave a Reply

Your email address will not be published. Required fields are marked *