ಬೆಂಗಳೂರು: ಸಹೋದರಿ ನಿಧನದಿಂದ ಮುಂದೂಡಲ್ಪಟ್ಟಿದ್ದ ಮಾಜಿ ಸಿಎಂ ಎಸ್‍ಎಂ ಕೃಷ್ಣ ಬಿಜೆಪಿ ಸೇರ್ಪಡೆ ವಿಚಾರ ಮತ್ತೆ ಗರಿಗೆದರಿದೆ.
ಪಕ್ಷ ಸೇರ್ಪಡೆ ವಿಚಾರವಾಗಿ ಮಾತನಾಡಲು ಎಸ್‍ಎಂ ಕೃಷ್ಣ ಇಂದು ದೆಹಲಿಗೆ ತೆರಳಲಿದ್ದಾರೆ. ಇಂದು ಸಂಜೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನ ಎಸ್‍ಎಂ ಕೃಷ್ಣ ಭೇಟಿ ಮಾಡಲಿದ್ದು, ಬಿಜೆಪಿ ಸೇರ್ಪಡೆ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಎಲ್ಲಾ ಅಂದುಕೊಂಡತೆ ಆದರೆ 21ಕ್ಕೆ ಎಸ್‍ಎಂ ಕೃಷ್ಣ ಅಧಿಕೃತವಾಗಿ ಪಕ್ಷ ಸೇರ್ಪಡೆಯಾಗೋ ಸಾಧ್ಯತೆ ಇದೆ.