ನವದೆಹಲಿ: ಎಸ್‍ಎಂ ಕೃಷ್ಣ ಬಿಜೆಪಿ ಸೇರ್ಪಡೆ ಯಾಗುತ್ತಿರುವುದು ದುರ್ದೈವ ಎಂದು ಕಾಂಗ್ರೆಸ್ ಲೋಕಸಭೆ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ಕೃಷ್ಣ ಸೋಶಿಯಲಿಸ್ಟ್ ಪಾರ್ಟಿಯಿಂದ ಬಂದಂತಹ ವ್ಯಕ್ತಿ ಐಡಿಯಲಾಜಿ ಮೂಲಕ ರಾಜಕಾರಣ ಮಾಡಿದವರು. ಈಗ ತಮ್ಮ ಚಿಂತನೆಗಳಿಗೆ ತಿಲಾಂಜಲಿ ಇಟ್ಟು ಬಿಜೆಪಿ ಸೇರ್ಪಡೆಯಾಗುತ್ತಿರುವುದು ತಪ್ಪು ಅಂತಾ ಪ್ರತಿಕ್ರಿಯೆ ನೀಡಿದರು.
Advertisement
ಕೃಷ್ಣ ರಾಜಕೀಯ ಕೊನೆ ಗಳಿಗೆಯಲ್ಲಿ ತಪ್ಪು ನಿರ್ಧಾರ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸೋತರೂ ಅವರನ್ನು ಕಾಂಗ್ರೆಸ್ ನಿರ್ಲಕ್ಷ್ಯ ಮಾಡದೇ ಅವರಿಗೆ ಅಧಿಕಾರ ನೀಡಿದೆ ಎಂದರು.
Advertisement
ಅಬರೀಷ್ ಬಿಜೆಪಿಗೆ ಹೋಗಲ್ಲ: ಅಂಬರೀಷ್ ಬಿಜೆಪಿ ಹೋಗುವುದಿಲ್ಲ ಅವರ ಜೊತೆ ಇರುವವರು ಯಾರು ಬಿಜೆಪಿ ಸೇರುವುದಿಲ್ಲ ಎನ್ನುವ ನಂಬಿಕೆ ಇದೆ. ಅತೃಪ್ತರು ಅಸಮಾಧಾನವನ್ನು ಸಿಎಂ, ರಾಜ್ಯಾಧ್ಯಕ್ಷರು ಅಥವಾ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಬಳಿ ಹೇಳಿಕೊಳ್ಳಲಿ. ಸಿಎಂಗೂ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಹೇಳಿದ್ದೇನೆ ಎಂದು ತಿಳಿಸಿದರು.
Advertisement
ಅಂಬರೀಶ್ ತರಾತುರಿ ನಿರ್ಣಯ ತೆಗೆದುಕೊಳ್ಳುದಿಲ್ಲ ಎಂದು ಭಾವಿಸಿದ್ದೇನೆ. ಒಂದು ವೇಳೆ ಕೆಲವರು ಬಿಜೆಪಿ ಸೇರ್ಪಡೆಯಾಗಲೇ ಬೇಕು ಎಂದು ನಿರ್ಧರಿಸಿದರೆ ಯಾರೂ ತಡೆಯಲು ಸಾಧ್ಯವಿಲ್ಲ. ಅವರಿಗೆ ಸ್ವಾತಂತ್ರ್ಯ ಇದೆ ಗಾಳಿ ಬಂದಹಾಗೇ ಕೆಲವರು ತೂರಿಕೊಳ್ತಾರೆ ಅಂತವರು ಪಕ್ಷಾಂತರವಾಗುವುದರಿಂದ ಕಾಂಗ್ರೆಸ್‍ಗೆ ಯಾವುದೇ ನಷ್ಟ ಇಲ್ಲ ಎಂದು
Advertisement
ಈ ಹಿಂದೆ ಕೂಡಾ ಕಾಂಗ್ರೆಸ್ ನಲ್ಲಿ ಇಂತಹ ಪ್ರಕ್ರಿಯೆ ನಡೆದಿದೆ. ಈಗಿನ ಈ ನಡೆಗಳು ಚುನಾವಣೆಯಲ್ಲಿ ತೊಂದರೆಯಾಗದು ಅಂತಾ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸಿದ್ಧವಿದೆ: ನಾಳೆಯಿಂದ ಕೇಂದ್ರ ಬಜೆಟ್ ಸಂಸತ್ ಅಧಿವೇಷನ ಪ್ರಾರಂಭವಾಗಲಿದೆ. ದೇಶದಲ್ಲಾಗುತ್ತಿರುವ ಬೆಳವಣಿಗೆಗಳ ಕುರಿತು ಸಮಗ್ರ ಚರ್ಚೆ ನಡೆಸಲು ಕಾಂಗ್ರೆಸ್ ಸಿದ್ದವಾಗಿದೆ. ಈ ಅಧಿವೇಶನ ಸುಮಾರು ನಲವತ್ತು ದಿನಗಳ ಕಾಲ ನಡೆಯಲಿದೆ ಹಾಗಾಗೀ ಹೆಚ್ಚು ವಿಷಯಗಳನ್ನು ಸಮಗ್ರವಾಗಿ ಚರ್ಚೆ ಮಾಡಲಿದ್ದೇವೆ ಎಂದು ತಿಳಿಸಿದರು.
ಮುಖ್ಯವಾಗಿ ದೆಹಲಿ ವಿವಿಗಳಲ್ಲಿ ಸ್ಟೂಡೆಂಟ್ ಯೂನಿಯನ್ ಗಳಲ್ಲಿ ವಾಕ್ ಸ್ವಾತಂತ್ರ್ಯಕ್ಕೆ ದಕ್ಕೆ ಯಾಗಿರುವುದನ್ನು ಹಾಗೂ ಕಾನೂನು ಪರಿಸ್ಥಿತಿ ಬಗ್ಗೆ ಚರ್ಚಿಸಿಲಾಗುವುದು. ನೋಟ್ ರದ್ದತಿಯಿಂದ ಬಳಿಕ ಜಿಡಿಪಿ ಬೆಳವಣಿಗೆಯಾಗಿದೆ ಅಂತಾ ಬಿಜೆಪಿ ಹೇಳುತ್ತಿದೆ ಹೇಗೆ ಎಂಬುದು ಅರಿಯಬೇಕಿದೆ. ಜೊತೆಗೆ ಅಮೆರಿಕದಲ್ಲಿ ಭಾರತೀಯರ ಹತ್ಯೆಗಳು ನಡೆಯುತ್ತಿದೆ. ಕೇಂದ್ರ ಸರ್ಕಾರ ಯಾವ ಕ್ರಮಗಳನ್ನು ಕೈಗೊಂಡಿದೆ ರಾಜ್ಯದಲ್ಲಿ ಬರಗಾಲ ಆವರಿಸಿದೆ ರಾಜ್ಯಕ್ಕೆ ಸರಿಯಾದ ಅನುದಾನ ನೀಡುತ್ತಿಲ್ಲ. ಆರ್‍ಎಸ್‍ಎಸ್ ನಾಯಕರು ಬಾಯಿಗೆ ಬಂದಹಾಗೇ ಮಾತನಾಡಿ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದು ಅವರ ಬಾಯಿಗೆ ಬೀಗ ಹಾಕಿಸಬೇಕಿದೆ ಇದಕ್ಕೆಲ್ಲ ಕಾಂಗ್ರೆಸ್ ಸಿದ್ಧವಾಗಿದೆ ಅಂತಾ ಮಲ್ಲಿಕಾರ್ಜುನ ಖರ್ಗೆ ಹೇಳಿದ್ರು.
ಷರತ್ತು ಹಾಕಬೇಕು: ಮ್ಯಾನ್‍ಹೋಲ್ ನಲ್ಲಿ ಉಸಿರುಗಟ್ಟಿ ಮೂವರು ಸಾವನ್ನಪ್ಪಿದ ಪ್ರಕರಣಕ್ಕೆ ಬೇಸರ ವ್ಯಕ್ತಪಡಿಸಿರುವ ಅವರು ಪ್ರತಿಬಾರಿ ಇಂತಹ ಪ್ರಕರಣಗಳು ನಡೆಯುತ್ತಿವೆ. ಆದರೂ ಎಚ್ಚೆತ್ತುಕೊಳ್ಳುತ್ತಿಲ್ಲ. ಒಂದು ಕಡೆ ಮಲಹೋರುವ ಪದ್ದತಿಯನ್ನು ಸರ್ಕಾರ ನಿಷೇಧ ಮಾಡಿದರೂ ಮತ್ತೊಂದು ಕಡೆ ಮೂಲಕ ಇದಕ್ಕೆ ಪ್ರೋತ್ಸಾಹ ಸಿಗುತ್ತಿದೆ. ಮ್ಯಾನ್ ಹೋಲ್ ಗೆ ಇಳಿಯುವಾಗ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುತ್ತಿಲ್ಲ. ಹೀಗಾಗಿ ಗುತ್ತಿಗೆದಾರರಿಗೆ ಕಠಿಣ ಷರತ್ತುಗಳು ಹಾಕಬೇಕು. ಬೆಂಗಳೂರು ಅತ್ಯಂತ ದೊಡ್ಡ ಮತ್ತು ತಾಂತ್ರಿಕ ವಾಗಿ ಮುಂದುವರಿದ ಊರಾಗಿದ್ದು ಮ್ಯಾನಹೋಲ್‍ಗೆ ದಲಿತರು ಬಲಿಯಾಗುತ್ತಿರುವದು ವಿಪರ್ಯಾಸ. ಅವರಿಗೆ ಪರಿಹಾರ ಕೊಟ್ಟು ಕೈ ತೊಳೆದುಕೊಂಡ್ರೆ ಸಾಲದು ಮುಂದೆ ಇಂತಹ ಘಟನೆ ಆಗದಂತೆ ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳಬೇಕಿದೆ ಎಂದು ಖರ್ಗೆ ಹೇಳಿದರು.