ಮಂಡ್ಯ: ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ (SM Krishna) ವಿಧಿವಶರಾದ ಹಿನ್ನೆಲೆ ಬುಧವಾರ ಮದ್ದೂರು ಪಟ್ಟಣ (Maddur Town) ಸ್ವಯಂ ಪ್ರೇರಿತ ಬಂದ್‌ಗೆ ಕರೆ ನೀಡಲಾಗಿದೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಎಸ್‌ಎಂ ಕೃಷ್ಣ ಮಂಗಳವಾರ ಮುಂಜಾನೆ ನಿಧನರಾಗಿದ್ದು, ಬುಧವಾರ ಹುಟ್ಟೂರಾದ ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಈ ಹಿನ್ನೆಲೆ ಪ್ರಗತಿಪರ ಸಂಘಟನೆಗಳು ಸ್ವಯಂ ಪ್ರೇರಿತ ಬಂದ್‌ಗೆ (Spontaneous Bandh) ಕರೆ ಕೊಟ್ಟಿವೆ. ಬಂದ್‌ಗೆ ವರ್ತಕರು, ಬೀದಿಬದಿ ವ್ಯಾಪಾರಿಗಳು, ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರ ಸಂಘ ಬೆಂಬಲ ಸೂಚಿಸಿವೆ. ಇದನ್ನೂ ಓದಿ: RSS ಹೊಗಳೋದ್ರಲ್ಲಿ ತಪ್ಪೇನು?, ಅವಿಶ್ವಾಸ ನಿರ್ಣಯ ಮಂಡಿಸಿರುವುದು ವಿಷಾದನೀಯ: ಕಿರಣ್ ರಿಜಿಜು
Advertisement
Advertisement
ಅಗಲಿದ ನಾಯಕನಿಗೆ ಅಂಗಡಿ ಮುಂಗಟ್ಟು ಮುಚ್ಚಿ ಅಂತಿಮ ನಮನ ಸಲ್ಲಿಸುವಂತೆ ಕರೆ ನೀಡಲಾಗಿದೆ. ಒಕ್ಕಲಿಗರ ಸಂಘ, ದಲಿತಪರ ಸಂಘಟನೆ ಸೇರಿ ವಿವಿಧ ಸಂಘಟನೆಗಳು ಇದಕ್ಕೆ ಬೆಂಬಲ ನೀಡಿದೆ. ಧ್ವನಿ ವರ್ಧಕದ ಮೂಲಕ ಮದ್ದೂರು ಪಟ್ಟಣದಲ್ಲಿ ಸ್ವಯಂ ಪ್ರೇರಿತ ಬಂದ್ ಮಾಡುವಂತೆ ಪ್ರಚಾರ ಮಾಡಲಾಗಿದೆ. ಇದನ್ನೂ ಓದಿ: Haveri | ಹೋರಿ ಹಬ್ಬದಲ್ಲಿ ಹೋರಿ ತಿವಿದು ವಿದ್ಯಾರ್ಥಿ ದುರ್ಮರಣ
Advertisement