ಮೈಸೂರು/ಚಾಮರಾಜನಗರ: ನಂಜನಗೂಡು ಮತ್ತು ಗುಂಡ್ಲುಪೇಟೆಯ ಉಪಚುನಾವಣೆಗೆ ಇನ್ನು ಆರೇ ದಿನ ಬಾಕಿ. ಹೀಗಾಗಿ, ಕಾಂಗ್ರೆಸ್-ಬಿಜೆಪಿ ನಾಯಕರ ಪ್ರಚಾರ ಜೋರಾಗ್ತಿದೆ. ಅದ್ರಲ್ಲೂ ಗುಂಡ್ಲುಪೇಟೆಯಲ್ಲಿ ಇವತ್ತು ದಿಗ್ಗಜರೇ ಕ್ಯಾಂಪೇನ್ ಮಾಡಲಿದ್ದಾರೆ.
ಬಿಜೆಪಿ ಸೇರಿರೋ ಮಾಜಿ ಸಿಎಂ ಎಸ್.ಎಂ. ಕೃಷ್ಣ ಇವತ್ತು ಬೃಹತ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಸಾಥ್ ನೀಡಲಿದ್ದಾರೆ.
ಇದಕ್ಕೆ ಪ್ರತಿಯಾಗಿ ಮತ್ತೊಂದು ಕಡೆ ಕಾಂಗ್ರೆಸ್ ಕೂಡ ಅಬ್ಬರದ ಪ್ರಚಾರ ನಡೆಸ್ತಿದೆ. 20ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಸಿಎಂ ಸಿದ್ದರಾಮಯ್ಯ ಸಹ ರೋಡ್ ಶೋ ನಡೆಸಲಿದ್ದಾರೆ. ಸಿಎಂಗೆ 10ಕ್ಕೂ ಹೆಚ್ಚು ಸಚಿವರು ಸಾಥ್ ನೀಡಲಿದ್ದಾರೆ. ಇನ್ನು, ನಂಜನಗೂಡಿನಲ್ಲೂ ಎಸ್‍ಎಂ ಕೃಷ್ಣ ಮತ ಯಾಚಿಸಲಿದ್ದಾರೆ.