ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಟ್ಟಡಗಳು ವಾಲುವುದು, ಕುಸಿಯೋದು ಇತ್ತೀಚಿನ ದಿನಗಳಲ್ಲಿ ಮಾಮೂಲಿ ಎನ್ನುವ ರೀತಿಯಾಗಿದ್ದು, ಬನಶಂಕರಿ ಬಳಿ ಇರುವ ರಾಜೇಶ್ವರಿ ಸ್ಲಂ ಜನ ವಾಸಿಸುತ್ತಿರುವ ಕಟ್ಟಡ ಒಂದೂವರೆ ಅಡಿಯಷ್ಟು ಒಂದು ಕಡೆಗೆ ವಾಲಿದೆ.
ಈ ಕಟ್ಟಡ ಕೇವಲ 6 ವರ್ಷಗಳ ಹಿಂದೆ ಕೋಟ್ಯಂತರ ರೂ. ಖರ್ಚು ಮಾಡಿ ನಿರ್ಮಿಸಲಾಗಿತ್ತು. ಆದರೆ ಈಗ ಈ ಕಟ್ಟಡ ಇವತ್ತೋ ನಾಳೆಯೋ ಬೀಳುತ್ತೆ ಎನ್ನುವ ಭಯದಲ್ಲಿ ಅಲ್ಲಿನ ಬಡ ಜನರಿದ್ದಾರೆ. ಕೋಟಿ ಕೋಟಿ ಖರ್ಚು ಮಾಡಿ ನಮ್ಮನ್ನು ಸಾಯಿಸುವುದಕ್ಕೆ ಈ ಕಟ್ಟಡ ಕಟ್ಟಿದ್ದಾರೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Advertisement
ಈ ಕಟ್ಟಡ ವಾಲಿದೆ ಎನ್ನುವುದನ್ನು ಸ್ಲಂ ಬೋರ್ಡ್ ತಾಂತ್ರಿಕ ನಿರ್ದೇಶಕರಾದ ಎನ್.ಪಿ ಬಾಲರಾಜು ಒಪ್ಪಿಕೊಂಡಿದ್ದಾರೆ. ಆದರೆ ಏನೂ ಆಗಲ್ಲ ಸ್ವಲ್ಪ ವಾಲಿದೆ ಅಷ್ಟೇ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಕಟ್ಟಡ ಇರುವ ಸ್ಥಳದಲ್ಲಿ ಮೊದಲು ಕ್ವಾರಿ ಇತ್ತು ಇಲ್ಲಿ ಕಸ ತುಂಬಲಾಗಿತ್ತು. ಎಲ್ಲಾ ಪರೀಕ್ಷೆ ನಡೆಸಿ ಕಟ್ಟಡ ಕಟ್ಟಿದ್ದೇವೆ. ಈಗ ಸ್ವಲ್ಪ ವಾಲಿದಂತೆ ಎನಿಸುತ್ತದೆ. ಅದಕ್ಕೆ ರಿಟೈನಿಂಗ್ ವಾಲ್ ಕಟ್ಟುತ್ತಿದ್ದೀವಿ ಎಂದು ಹೇಳುತ್ತಾರೆ.
Advertisement
ಕಟ್ಟಡವೇ ವಾಲಿದೆ ಎಂದು ಈ ರಿಟೈನಿಂಗ್ ವಾಲ್‍ಗೆ ಲಕ್ಷ ಲಕ್ಷ ರೂ. ಖರ್ಚು ಮಾಡುತ್ತಿದ್ದಾರೆ. ಆ ಕಳಪೆ ಕಾಮಗಾರಿ ಮಾಡಿದರಿಂದಲೇ ಈಗ ಮತ್ತೆ ಹಣವನ್ನು ನುಂಗುತ್ತಿದ್ದಾರೆ. ಮೊದಲು ಕುಸಿದಿರಲಿಲ್ಲ ಈಗ ಕುಸಿದಿದೆ, ನಾಳೆ ಬೀಳುತ್ತೆ. ಕೋಟಿ ಕೋಟಿ ನುಂಗಿ ಕಳಪೆ ಕಾಮಗಾರಿ ಮಾಡಿ ಬಡ ಜನರ ಸಮಾಧಿ ಮಾಡಲು ಕೂತಿದ್ದಾರೆ ಎಂದು ಸ್ಥಳೀಯರು ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.