ಬೆಂಗಳೂರು: ಹುಟ್ಟುಹಬ್ಬದ ಪಾರ್ಟಿ ವೇಳೆ ಗಲಾಟೆ ಮಾಡಿ ಇನ್ಸ್ ಪೆಕ್ಟರ್ ಕಾರಿಗೆ ಡಿಕ್ಕಿ ಹೊಡೆದು ಎಸ್ಕೇಪ್ ಆಗಿದ್ದ ಸ್ಲಂ ಭರತ್‍ನನ್ನು ದೆಹಲಿಯಲ್ಲಿ ಬಂಧಿಸಲಾಗಿದೆ.
ಭರತ್‍ನನ್ನು ಹಿಡಿಯೋಕೆ 3 ತಂಡಗಳಾಗಿ ಪೊಲೀಸರು ಹುಡುಕುತ್ತಿದ್ದರು. ಆದರೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಊರೂರು ಅಲೆಯುತ್ತಿದ್ದ ಭರತ್, ಮುಂಬೈ, ಚೆನೈ, ದೆಹಲಿಯಲ್ಲಿ ಓಡಾಡಿಕೊಂಡಿದ್ದ. ಸದ್ಯ ದೆಹಲಿಯಲ್ಲಿ ಭರತ್‍ನನ್ನು ಬಂಧಿಸಲಾಗಿದೆ. ಭರತ್ ಜೊತೆ ಆತನ ಒಬ್ಬ ಸಹಚರ ಕೂಡ ಅರೆಸ್ಟ್ ಆಗಿದ್ದು, ಈ ಬಗ್ಗೆ ಬೆಂಗಳೂರು ಪೊಲೀಸರು ಮಾಹಿತಿ ಬಿಟ್ಟು ಕೊಡ್ತಿಲ್ಲ.
Advertisement
Advertisement
ಮಹೇಶ್ ಮರ್ಡರ್ ಕೇಸ್ ಪ್ರಮುಖ ಆರೋಪಿಯಾಗಿರೋ ಭರತ್ ವಿರುದ್ಧ ಪೊಲೀಸರಿಗೆ ಹಣ ನೀಡುವ ವಿಡಿಯೋ ಮಾಡಿಸಿ ಬ್ಲಾಕ್ ಮೇಲ್ ಮಾಡಿಸಿದ್ದ ಅನ್ನೋ ಆರೋಪವಿದೆ. ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಮಹೇಶ್ ಅನ್ನೋನ ಕೊಲೆಯಾಗಿತ್ತು. ಮರ್ಡರ್ ಕೇಸಿನಲ್ಲಿ ಅಂದ್ರಳ್ಳಿ ಅಭಿ ಹಾಗೀ ಮಹೇಶ್ ಅಲಿಯಾಸ್ ಇಟಾಚಿಯ ಕಾಲಿಗೆ ಫೈರಿಂಗ್ ಮಾಡಲಾಗಿತ್ತು. ಆದರೆ ಕೊಲೆಯ ಎ1 ಆರೋಪಿಯಾಗಿದ್ದ ಭರತ್ ತಲೆ ಮರೆಸಿಕೊಂಡಿದ್ದ. ಮಹೇಶ್ ಕೊಲೆಗೆ ನೆಲಮಂಗಲ ಡಾಬಾದಲ್ಲಿ ಸ್ಕೆಚ್ ಹಾಕಲಾಗಿತ್ತು.
Advertisement
Advertisement
ಗುರುವಿನ ಕೊಲೆ ಪ್ರತಿಕಾರವಾಗಿ ಕೊಲೆಗೆ ಭರತ್ ಸಂಚು ಮಾಡಿದ್ದ. ಜೈಲಿನಿಂದ ಬಂದ ಇಪ್ಪತ್ತೆ ದಿನದಲ್ಲಿ ಫೀಲ್ಡಿಗಿಳಿದಿದ್ದ. ವರ್ಷದ ಆರಂಭದಲ್ಲಿ ಸಿಸಿಬಿ ಪೊಲೀಸರ ಬುಲೆಟ್ ತಿಂದು ಈ ಕುಖ್ಯಾತ ಜೈಲು ಸೇರಿದ್ದ. ಗುಂಡ ಸೂರಿ ಶಿಷ್ಯ ಸ್ಲಂ ಭರತ್, 2006ರಲ್ಲಿ ಸೂರಿ ಜೊತೆ ಸೇರಿ ಕುಳ್ಳ ಸೀನಾನ ಕೊಲೆ ಮಾಡಿದ್ದ. 2014ರಲ್ಲಿ ಬ್ಯಾಡರಹಳ್ಳಿಯಲ್ಲಿ ಮಹೇಶ್ ಆ್ಯಂಡ್ ಟೀಂನಿಂದ ಕೊಲೆಯಾಗಿದ್ದ ಸುರೇಶ್ ಹತ್ಯೆ ರಿವೇಂಜ್‍ಗೆ ಸ್ಲಂನಿಂದ ಮಹೇಶ್ ಕೊಲೆಗೆ ಸ್ಕೆಚ್ ಹಾಕಿದ್ದ.
ಪ್ರಕರಣದಲ್ಲಿ ತನ್ನ ಹೆಸರು ಬರದಂತೆ ಮಾಸ್ಟರ್ ಪ್ಲಾನ್ ಮಾಡಿದ್ದ ಸ್ಲಂ ಭರತ್, ಮಹೇಶನ ಕೊಲೆ ಹಿಂದಿನ ಇಟಾಚಿ ಪ್ರವೀಣ ಮತ್ತು ಅಂದ್ರಳ್ಳಿ ಅಭಿ ಜೊತೆ ಡಾಬಾದಲ್ಲಿ ಮೀಟಿಂಗ್ ಮಾಡಿದ್ದ. ನೆಲಮಂಗಲ ಡಾಬಾದಲ್ಲಿ ಮಹೇಶನ ಕೊಲೆಗೆ ಸ್ಕೆಚ್ ಹಾಕಿ ಕೊಟ್ಟಿದ್ದ. ಸ್ಕೆಚ್ ಹಾಕಿ ಪೊಲೀಸರಿಗೆ ಡೌಟ್ ಬರಬಾರ್ದು ಅಂತ ಶಿರಡಿಗೆ ಎಸ್ಕೇಪ್ ಆಗಿದ್ದ. ಹುಡುಗರು ಸರೆಂಡರ್ ಆಗುವಾಗ ಸ್ಟಿಂಗ್ ವಿಡಿಯೋ ಆಗ್ಬೇಕು ಅಂತ ಪ್ಲಾನ್ ಕೊಟ್ಟಿದ್ದೆ ಸ್ಲಂ ಭರತ್. ಭರತನ ಸ್ಕೆಚ್ ನಂತೆ ಕಾಮಾಕ್ಷಿಪಾಳ್ಯ ಲಿಮಿಟ್ ನಲ್ಲೇ ಮಹೇಶನ ಕೊಲೆಯ ಡೀಲ್ ನಲ್ಲಿ ಪೊಲೀಸರ ವಿಡಿಯೋ ಇದ್ದರೆ ಅವರನ್ನು ಈಸಿಯಾಗಿ ಬ್ಲಾಕ್ ಮೇಲ್ ಮಾಡಬಹುದು ಎಂಬುದಾಗಿ ಭರತ್ ಪ್ಲಾನ್ ಮಾಡಿದ್ದ. ಕೊಲೆಯಾದ ಮಾರನೇ ದಿನವೇ ಸ್ಲಂ ಭರತ್ ನ ಕೈವಾಡದ ಬಗ್ಗೆ ಪೊಲೀಸರಿಗೆ ಮಾಹಿತಿ ಗೊತ್ತಾಗಿತ್ತು.