ಜೈಪುರ: 2024ರ ಐಪಿಎಲ್ ಟೂರ್ನಿಯ ರಾಜಸ್ಥಾನ್ ರಾಯಲ್ಸ್ (Rajasthan Royals) ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಜೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಅವರು ದಾಖಲೆಯ 8ನೇ ಶತಕ ಸಿಡಿಸಿದರು. ಅಲ್ಲದೇ ಐಪಿಎಲ್‌ನಲ್ಲಿ 7,500 ರನ್ ಪೂರೈಸಿದ ಮೊದಲ ಆಟಗಾರ ಮೈಲುಗಲ್ಲನ್ನೂ ಸ್ಥಾಪಿಸಿದರು. ಆದ್ರೆ ಈಗ ಆರ್‌ಸಿಬಿ ತಂಡದ ಸೋಲಿಗೆ ಕೊಹ್ಲಿ ಅವರನ್ನು ಹೊಣೆ ಮಾಡಲಾಗಿದೆ.
ಶನಿವಾರ ಸವಾಯ್ ಮಾನ್ಸಿಂಗ್ ಕ್ರೀಂಡಾಗಣದಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಗಳಿಸಿದ ನಿಧಾನಗತಿಯ ಶತಕವೇ ಆರ್‌ಸಿಬಿ (RCB) ತಂಡದ ಸೋಲಿಗೆ ಕಾರಣ ಎಂದು ನೆಟ್ಟಿಗರು ದೂಷಿಸಿದ್ದಾರೆ.
Advertisement
Advertisement
ಹೌದು. ಆರ್‌ಸಿಬಿ ಪರ ಅಂತಿಮ ಎಸೆತದವರೆಗೂ ಏಕಾಂಗಿ ಹೋರಾಟ ನಡೆಸಿದ್ದ ವಿರಾಟ್ ಕೊಹ್ಲಿ 67 ಎಸೆತಗಳಲ್ಲಿ ಶತಕ ಸಿಡಿಸಿದರೆ, ಒಟ್ಟಾರೆ 72 ಎಸೆತಗಳಿಂದ 12 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ ಅಜೇಯ 113 ರನ್ ದಾಖಲಿಸಿದರು. ಆದ್ರೆ ಕೊಹ್ಲಿ ಅವರ ಈ ಶತಕವು ಐಪಿಎಲ್ ಇತಿಹಾಸದಲ್ಲೇ ಅತ್ಯಂತ ನಿಧಾನಗತಿಯ ಶತಕವಾಗಿತ್ತು. ಅಲ್ಲದೇ 20 ಓವರ್‌ಗಳ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 12 ಓವರ್‌ಗಳನ್ನು ಒಬ್ಬರೇ ಎದುರಿಸಿದರು. ಹಿಂದಿನ ಕೆಕೆಆರ್ ವಿರುದ್ಧ ನಡೆದ ಪಂದ್ಯದಲ್ಲೂ ಕೊಹ್ಲಿ 59 ಎಸೆತಗಳನ್ನ ಎದುರಿಸಿ ಕೇವಲ 83 ರನ್ (4 ಬೌಂಡರಿ, 4 ಸಿಕ್ಸರ್) ಕಲೆಹಾಕಿದ್ದರು. ಕೊಹ್ಲಿ ಅವರ ನಿಧಾನಗತಿಯ ಬ್ಯಾಟಿಂಗ್‌ನಿಂದಲೇ ತಂಡ ಸೋಲಿಗೆ ತುತ್ತಾಯಿತು ಎಂದು ನೆಟ್ಟಿಗರು ಅಸಮಾಧಾನ ಹೊರಹಾಕಿದ್ದಾರೆ.
Advertisement
Advertisement
ಆರ್‌ಸಿಬಿ ಮೊದಲ ವಿಕೆಟ್‌ಗೆ 14 ಓವರ್‌ಗಳಲ್ಲಿ 125 ರನ್ ಗಳಿಸಿತ್ತು. ದಿನೇಶ್ ಕಾರ್ತಿಕ್, ಮಹಿಪಾಲ್ ಲೊಮ್ರೋರ್, ಅನೂಜ್ ರಾವತ್ ನಂತಹ ಸ್ಪೋಟಕ ಆಟಗಾರರ ವಿಕೆಟ್‌ಗಳಿದ್ದವು. ಆದ್ರೆ ಕ್ರೀಸ್ ಬಿಟ್ಟುಕೊಡದ ಕೊಹ್ಲಿ ನಿಧಾನಗತಿಯ ಬ್ಯಾಟಿಂಗ್ ಅನ್ನೇ ಮುಂದುವರಿಸಿದರು. ಇದು ತಂಡದ ಬೃಹತ್ ಮೊತ್ತದ ಮೇಲೆ ಭಾರೀ ಪರಿಣಾಮ ಬೀರಿತು. ಇದರಿಂದಾಗಿ ಕೊಹ್ಲಿ ಅವರ ನಿಧಾನಗತಿಯ ಬ್ಯಾಟಿಂಗ್ ಸೋಲಿಗೆ ಕಾರಣ ಎಂದು ನೆಟ್ಟಿಗರು ದೂಷಿಸಿದ್ದಾರೆ. ಆದ್ರೆ ನಾಯಕ ಡುಪ್ಲೆಸಿಸ್ ಹೊರತುಪಡಿಸಿ ಉಳಿದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಕೊಹ್ಲಿ ಅವರೇ ಏಕಾಂಗಿ ಹೋರಾಟ ನಡೆಸಿದ್ದಾರೆ ಎಂದು ಕೊಹ್ಲಿಯನ್ನ ಕೆಲವರು ಬೆಂಬಲಿಸಿದ್ದಾರೆ.
ಐಪಿಎಲ್‌ನಲ್ಲಿ ನಿಧಾನಗತಿಯ ಶತಕ ಸಿಡಿಸಿದ ಪ್ಲೇಯರ್ಸ್:
* ವಿರಾಟ್ ಕೊಹ್ಲಿ: 67 ಎಸೆತಗಳು Vs ರಾಜಸ್ಥಾನ್ ರಾಯಲ್ಸ್, 2024
* ಮನೀಶ್ ಪಾಂಡೆ: 67 ಎಸೆತಗಳು Vs ಡೆಕ್ಕನ್ ಚಾರ್ಜರ್ಸ್, 2009
* ಸಚಿನ್ ತೆಂಡೂಲ್ಕರ್: 66 ಎಸೆತಗಳು Vs ವಿರುದ್ಧ ಕೊಚ್ಚಿ ಟಸ್ಕರ್ಸ್ ಕೇರಳ, 2011
* ಡೇವಿಡ್ ವಾರ್ನರ್: 66 ಎಸೆತಗಳು Vs ಕೆಕೆಆರ್, 2010
* ಜೋಸ್ ಬಟ್ಲರ್: 66 ಎಸೆತಗಳು Vs ಮುಂಬೈ ಇಂಡಿಯನ್ಸ್, 2022
* ಕೆವಿನ್ ಪೀಟರ್ಸನ್: 64 ಎಸೆತಗಳು Vs ಡೆಕ್ಕನ್ ಚಾರ್ಜರ್ಸ್, 2012
ಐಪಿಎಲ್‌ನಲ್ಲಿ ಹೆಚ್ಚು ಶತಕ ಸಿಡಿಸಿದ ಟಾಪ್-5 ಪ್ಲೇಯರ್ಸ್
* ವಿರಾಟ್ ಕೊಹ್ಲಿ – 8
* ಕ್ರಿಸ್ ಗೇಲ್ – 6
* ಜೋಸ್ ಬಟ್ಲರ್ – 6
* ಕೆ.ಎಲ್ ರಾಹುಲ್ – 4
* ಶೇನ್ ವಾಟ್ಸನ್ – 4