ಸ್ಲೋವಾಕಿಯಾ: 360 ಡಿಗ್ರಿಯಲ್ಲಿ ತಿರುಗಿ ಬಿಎಂಡ್ಲ್ಯು ಕಾರ್ ಪಲ್ಟಿ ಹೊಡೆದು ತೇಲಾಡುತ್ತ ನೆಲಕ್ಕೆ ಅಪ್ಪಳಿಸಿದರೂ ಚಾಲಕ ಬದುಕುಳಿದ ಘಟನೆ ಈಶಾನ್ಯ ಸ್ಲೋವಾಕಿಯಾದಲ್ಲಿ ನಡೆದಿದೆ. ಈ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಈ ಅಪಘಾತವು ಗುರುವಾರ ಬೆಳಗ್ಗೆ ನಡೆದಿದೆ. ಅದೃಷ್ಟವಶಾತ್ 44 ವರ್ಷ ಚಾಲಕನಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ವಿಡಿಯೋವನ್ನು ಈಶಾನ್ಯ ಸ್ಲೋವಾಕಿಯಾ ಪೊಲೀಸರು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದು, 2 ಲಕ್ಷಕ್ಕೂ ಅಧಿಕ ಜನರು ಈ ವಿಡಿಯೋವನ್ನು ನೋಡಿದ್ದಾರೆ. ಅಪಘಾತದಲ್ಲಿ ಕಾರು ಜಖಂಗೊಂಡಿದ್ದ ಎರಡು ಫೋಟೋಗಳನ್ನು ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
Advertisement
Advertisement
ಘಟನೆಯ ವಿವರ:
ಮದ್ಯದ ಮತ್ತಿನಲ್ಲಿ ವ್ಯಕ್ತಿ ಒಬ್ಬನೇ ಬಿಎಂಡ್ಲ್ಯು ಕಾರ್ ನಲ್ಲಿ ಕುಳಿತು ವೇಗವಾಗಿ ಚಾಲನೆ ಮಾಡಿಕೊಂಡು ಬಂದಿದ್ದಾನೆ. ಪರಿಣಾಮ ಆತನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಕಟ್ಟೆಯ ಮೇಲೆ ಹತ್ತಿದೆ. ಅಷ್ಟೇ ವೇಗವಾಗಿ ನೆಗೆದ ಕಾರು ಸುರಂಗ ಮಾರ್ಗದ ಮೇಲ್ಭಾಗಕ್ಕೆ ಅಪ್ಪಳಿಸಿ, ಸ್ವಲ್ಪ ದೂರವರೆಗೂ ತೆಲಾಡುತ್ತ ನೆಲಕ್ಕಪಳಿಸಿದೆ. ಅದೃಷ್ಟವಶಾತ್ ಅಪಘಾತದ ವೇಳೆ ಕಾರಿನ ಮುಂದೆ ಹಾಗೂ ಹಿಂದೆ ಯಾವುದೇ ವಾಹನವಿರಲಿಲ್ಲ. ಹೀಗಾಗಿ ಭಾರೀ ಅನಾಹುತ ಕೈತಪ್ಪಿದೆ.
Advertisement
ಕಾರು ನೆಲಕ್ಕೆ ಅಪ್ಪಳಿಸುತ್ತಿದ್ದಂತೆ ಹಿಂದೆ ಬರುತ್ತಿದ್ದ ಚಾಲಕ ತನ್ನ ಕಾರನ್ನು ದೂರದಲ್ಲಿಯೇ ನಿಲ್ಲಿಸಿದ್ದಾನೆ. ಈ ದೃಶ್ಯಗಳು ಸ್ಥಳದಲ್ಲಿಯೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋವನ್ನು ಈಶಾನ್ಯ ಸ್ಲೋವಾಕಿಯಾ ಪೊಲೀರು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
Advertisement
https://www.facebook.com/policiaslovakia/videos/2228375497408730/
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv