ಬ್ರಾಟಿಸ್ಲಾವಾ: ಸರ್ಕಾರ ಸಭೆಯೊಂದರ ಬಳಿಕ ನಡೆದ ಗುಂಡಿನ ದಾಳಿಯಲ್ಲಿ ಸ್ಲೋವಾಕಿಯಾ (Slovak) ಪ್ರಧಾನಿ ರಾಬರ್ಟ್ ಫಿಕೊ (Robert Fico) ಗಾಯಗೊಂಡಿದ್ದಾರೆ.
TASR ಸಂಸತ್ತಿನ ಉಪಾಧ್ಯಕ್ಷ ಲುಬೋಸ್ ಬ್ಲಾಹಾ ಅವರು ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಗುಂಡಿನ ದಾಳಿಯಲ್ಲಿ ಫಿಕೊ ಅವರು ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಳಿವಿನಂಚಿಗೆ ಸಾಗುತ್ತಿದ್ಯಾ ಭೂಮಿ? – ಕೆಂಡದಂತಾದ ಧರಣಿಗೆ ‘ರೆಡ್ ಅಲರ್ಟ್’; ಹವಾಮಾನ ತಜ್ಞರ ಆತಂಕ!
ಅಪರಿಚಿತನೊಬ್ಬ ಹಲವು ಸುತ್ತಿನ ಗುಂಡಿನ ದಾಳಿ ನಡೆಸಿದ. ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವುದನ್ನು ನಾನು ನೋಡಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ಗುಂಡೇಟಿನಿಂದ ಪ್ರಧಾನಿ ಮಂತ್ರಿಗಳು ಕೆಳಗೆ ಬಿದ್ದರು. ತಕ್ಷಣ ಅವರನ್ನು ರಕ್ಷಣಾ ಸಿಬ್ಬಂದಿ ಕಾರಿನೊಳಗೆ ಕೂರಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಚೀನಾ ಸಾಲದ ಸುಳಿಗೆ ಬಿದ್ದ ಮಾಲ್ಡೀವ್ಸ್‌ಗೆ ಐಎಂಎಫ್ ಎಚ್ಚರಿಕೆ