ಪುಣೆ: ಕಳೆದ ಅಕ್ಟೋಬರ್ ತಿಂಗಳಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ ವಿವಾಹಿತ ಮಹಿಳೆಯ ಜೊತೆಗಿನ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಕೊಲೆಯಾಗಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ವಿವಾಹಿತ ಮಹಿಳೆಯ ಪತಿ ಸೇರಿ ಮೂವರನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.
Advertisement
ಕೊಲೆಯಾದ ವ್ಯಕ್ತಿಯ ಚಪ್ಪಲಿಯ ಸಾಕ್ಷ್ಯ ಆಧಾರದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಮನೆಗೆ ಕೊಲೆಯಾದ 27 ವರ್ಷದ ಯುವಕ ಬಂದಿದ್ದ. ಇದೇ ಮನೆಯ ಮುಂಭಾಗದಲ್ಲಿ ಚಪ್ಪಲಿಯೊಂದು ಸಿಕ್ಕಿತ್ತು. ಇದನ್ನೇ ಆಧಾರವಾಗಿಟ್ಟುಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಮಹಿಳೆಯ ಪತಿ ಹಾಗೂ ಇನ್ನಿಬ್ಬರು ಸಿಕ್ಕಿಬಿದ್ದಿದ್ದಾರೆ.
Advertisement
Advertisement
ಕೊಲೆಯಾದ ಯುವಕ ಕಳೆದ ಅಕ್ಟೋಬರ್ 22ರಂದು ಬಾವ್ಧಾನ್ ಎಂಬಲ್ಲಿಂದ ನಾಪತ್ತೆಯಾಗಿದ್ದಾನೆ ಎಂದು ಆತನ ತಾಯಿ ದೂರು ನೀಡಿದ್ದರು. ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರು ಕಿಡ್ನ್ಯಾಪ್ ಆಗಿರಬಹುದು ಎಂದು ಕೂಡಾ ವಿಚಾರಣೆ ನಡೆಸಿದ್ದರು. ಇದೇ ವೇಳೆ ಮನೆಯೊಂದರ ಮುಂದೆ ಯುವಕ ಬಳಸುತ್ತಿದ್ದ ಚಪ್ಪಲಿ ಸಿಕ್ಕಿದೆ.
Advertisement
ಏನಾಯ್ತು?: ಪೊಲೀಸರು ಹೇಳುವ ಪ್ರಕಾರ, ಕೊಲೆಯಾದ ಯುವಕ ಚಪ್ಪಲಿ ಸಿಕ್ಕಿದ ಮನೆಯ ಮಾಲೀಕನ ಪತ್ನಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನುವುದು ವಿಚಾರಣೆ ವೇಳೆ ಗೊತ್ತಾಗಿದೆ. ಹತ್ಯೆ ಮಾಡುವುದಕ್ಕೂ ಮುನ್ನ ಆರೋಪಿ ತನ್ನ ಪತ್ನಿಯ ಮೊಬೈಲ್‍ನಲ್ಲಿ 2 ಮಿಸ್ಡ್ ಕಾಲ್ ಬಂದಿರೋದನ್ನ ನೋಡಿದ್ದಾನೆ. ಇದರಿಂದ ಆಕೆಯ ಪತಿಗೆ ಅನುಮಾನ ಶುರುವಾಗಿದೆ. ಅಕ್ಟೋಬರ್ 21ರಂದು ರಾತ್ರಿ ಇದೇ ನಂಬರ್‍ನಿಂದ ಯುವಕನಿಗೆ ಕಾಲ್ ಹೋಗಿದೆ. ಇದನ್ನೂ ಓದಿ: ನೈಟ್ ಕರ್ಫ್ಯೂ ಆದೇಶ ಹಿಂಪಡೆದ ರಾಜ್ಯ ಸರ್ಕಾರ
ಮಧ್ಯರಾತ್ರಿ ಬಳಿಕ ಯುವಕ ಮಹಿಳೆಯ ಮನೆಯತ್ತ ಹೋಗಿದ್ದಾನೆ. ಇದಕ್ಕಾಗಿ ಹೊಂಚು ಹಾಕಿ ಕೂತಿದ್ದ ಆರೋಪಿ ಇನ್ನಿಬ್ಬರ ಜೊತೆ ಸೇರಿ ಯುವಕನ ಎದೆ ಹಾಗೂ ಕಿಬ್ಬೊಟ್ಟೆಗೆ ಚುಚ್ಚಿದ್ದಾರೆ. ಆತ ಮೃತಪಟ್ಟಿರುವುದನ್ನು ಖಚಿತ ಪಡಿಸಿಕೊಂಡ ಬಳಿಕ ಆರೋಪಿಗಳಲ್ಲೊಬ್ಬನ ಕಳ್ಳಭಟ್ಟಿ ಕೇಂದ್ರಕ್ಕೆ ಕೊಂಡೊಯ್ದು ಮೃತದೇಹವನ್ನು ಸುಟ್ಟಿದ್ದಾರೆ. ಬಳಿಕ ಅಳಿದುಳಿದ ಅವಶೇಷಗಳನ್ನು ಪಟ್ಟಣದ ವಿವಿಧ ಪ್ರದೇಶಗಳಲ್ಲಿ ಎಸೆದು ಪರಾರಿಯಾಗಿದ್ದರು.
ಪೊಲೀಸರ ತನಿಖೆ ವೇಳೆ ಒಬ್ಬ ಪುಣೆಯಲ್ಲಿ ಪತ್ತೆಯಾದರೆ, ಪರಾರಿಯಾಗಿದ್ದ ಪ್ರಮುಖ ಆರೋಪಿ ಹಾಗೂ ಆತನ ಸಹಚರನನ್ನು ಮಧ್ಯಪ್ರದೇಶದಲ್ಲಿ ಬಂಧಿಸಿದ್ದಾರೆ.