ಮಂಡ್ಯ: ಸಾವಿನ ರಾಜಕೀಯ, ಮಾತಿನ ರಾಜಕೀಯವಾಯ್ತು, ಇದೀಗ ಮಂಡ್ಯ ಚುನಾವಣಾ ಅಖಾಡದಲ್ಲಿ ಚಪ್ಪಲಿ ಪಾಲಿಟಿಕ್ಸ್ ಆರಂಭವಾಗಿದೆ.
ಹೌದು. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ತನ್ನ ಗನ್ ಮ್ಯಾನ್‍ರಿಂದ ಚಪ್ಪಲಿ ಹಾಕಿಸಿಕೊಂಡರೆ, ಇತ್ತ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಚಪ್ಪಲಿ ಹಾಕಲು ಬಂದವರನ್ನು ತಡೆದಿದ್ದಾರೆ. ಈ ಎರಡೂ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Advertisement
Advertisement
ವಿಡಿಯೋದಲ್ಲೇನಿದೆ..?
ಮನೆಯಿಂದ ಹೊರಬರುತ್ತಿದ್ದಂತೆಯೇ ಸುಮಲತಾ ತಮ್ಮ ಗನ್ ಮ್ಯಾನ್‍ಗೆ ಕೆಳಗೆ ಏನೋ ತೋರಿಸುವ ಮೂಲಕ ಸೂಚಿಸುತ್ತಾರೆ. ಆಗ ಗನ್ ಮ್ಯಾನ್ ಕೆಳಗೆ ಬಗ್ಗಿ ಸುಮಲತಾ ಕಾಲಿಗೆ ಚಪ್ಪಲಿ ತೊಡಿಸಿದ್ದಾರೆ. ಇತ್ತ ತನ್ನ ಕಾಲಿಗೆ ಚಪ್ಪಲಿ ತೊಡಿಸಲು ಬಂದ ಕಾರ್ಯಕರ್ತನನ್ನು ತಡೆದಿದ್ದಾರೆ.
Advertisement
ಕಳೆದ ಮಾರ್ಚ್ 20ರಂದು ಸುಮಲತಾ ತಮ್ಮ ಬೆಂಬಲಿಗ ಸಚ್ಚಿದಾನಂದರ ಮನೆಗೆ ಹೋಗಿದ್ದಾರೆ. ಮಾತುಕತೆ ನಡೆಸಿ ಮನೆಯಿಂದ ಹೊರ ಬಂದ ಸಂದರ್ಭದಲ್ಲಿ ಸುಮಲತಾ ತನ್ನ ಗನ್ ಮ್ಯಾನ್ ಕೈಯಲ್ಲಿ ಚಪ್ಪಲಿ ತೊಡಿಸಿಕೊಂಡಿದ್ದಾರೆ. ಆದ್ರೆ ಚಪ್ಪಲಿ ತೊಡಿಸುವ ದೃಶ್ಯ ಸೆರೆಯಾಗಿಲ್ಲ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಟ್ರೋಲ್ ಆಗುತ್ತಿದ್ದು, ಸುಮಲತಾ ಅವರು ಚಪ್ಪಲಿಯನ್ನೇ ತೆಗೆಸಿ ಹಾಕಿಸಿಕೊಂಡಿದ್ದಾರೆ. ಇದು ಎಷ್ಟರಮಟ್ಟಿಗೆ ಸ್ವಾಭಿಮಾನ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.
Advertisement
ಇನ್ನೊಂದೆಡೆ ಶನಿವಾರ ನಿಖಿಲ್ ಅವರು ಮದ್ದೂರು ಭಾಗದಲ್ಲಿ ಪ್ರಚಾರ ನಡೆಸಿದ ವೇಳೆ ನಡೆದುಕೊಂಡು ಬರುತ್ತಿದ್ದಾಗ ಕಾರ್ಯಕರ್ತರೊಬ್ಬರು ಚಪ್ಪಲಿಯನ್ನು ಹಾಕಲು ಬಂದಿದ್ದಾರೆ. ಆದ್ರೆ ನಿಖಿಲ್ ಅವರನ್ನು ತಡೆದು ತಾನೇ ಚಪ್ಪಲಿಕೊಂಡು ಅವರನ್ನು ಮುಟ್ಟಿ ಕೈ ಮುಗಿದಿದ್ದಾರೆ.