-ಸಾಹಿತ್ಯಕ್ಕೆ ಮಹತ್ವ ತಿರುವು ಕೊಟ್ಟಿದ್ದೆ ವಾಣಿಜ್ಯ ನಗರಿ
ಹುಬ್ಬಳ್ಳಿ: ನಾಡುಕಂಡ ಸರಸ್ವತಿ ಸಮ್ಮಾನ್ ಎಸ್.ಎಲ್ ಭೈರಪ್ಪನವರಿಗೂ ವಾಣಿಜ್ಯ ನಗರಿ ಹುಬ್ಬಳ್ಳಿಗೂ (Hubballi) ಅವಿನಾಭಾವ ನಂಟಿದೆ.
ಹೌದು, ಭೈರಪ್ಪನವರ ವೃತ್ತಜೀವನ ಮತ್ತು ಸಾಹಿತ್ಯ ಹುಬ್ಬಳ್ಳಿಯಲ್ಲಿ ಮಹತ್ವದ ತಿರುವು ಪಡೆದುಕೊಂಡಿತ್ತು. ಹುಬ್ಬಳ್ಳಿಯ ಕೆಎಲ್‌ಇ ಸಂಸ್ಥೆಯ ಕಾಡುಸಿದ್ದೇಶ್ವರ ಕಾಲೇಜಿನಲ್ಲಿ ಕಲಾ ವಿಭಾಗದ ಸೈಕಾಲಜಿ ಮತ್ತು ಲಾಜಿಕ್ ವಿಷಯದ ಪ್ರಾಧ್ಯಾಪಕರಾಗಿ ಭೈರಪ್ಪನವರು 1959 ರಿಂದ 1961 ಕೆಲಸ ಮಾಡಿದ್ದರು. ಆಗ ಭೈರಪ್ಪನವರಿಗೆ 181 ರೂ. ಸಂಬಳ ಇತ್ತು. ಇವರ ಸೇವೆಯನ್ನು ಕಾಲೇಜು ಆಡಳಿತ ಮಂಡಳಿ ಇಂದಿಗೂ ನೆನಪಿಸಿಕೊಳ್ಳುತ್ತಿದೆ.ಇದನ್ನೂ ಓದಿ: ʼಲೆಫ್ಟಿಸ್ಟ್‌ಗಳು ಅಪ್ರಾಮಾಣಿಕರು, ದೇಶ ಬೆಳೆಯಬೇಕಾದರೆ ಕ್ಯಾಪಿಟಲಿಸಂ ಅಗತ್ಯʼ
ಇನ್ನೂ ಭೈರಪ್ಪನವರ ಮೊದಲ ಕಾದಂಬರಿ `ಧರ್ಮಶ್ರೀ’ ಹುಬ್ಬಳ್ಳಿ ಸಾಹಿತ್ಯ ಭಂಡಾರದಲ್ಲಿ ಮುದ್ರಣಗೊಂಡಿತ್ತು. ಬ್ಯಾಂಕ್ ಮ್ಯಾನೇಜರ್ ಒಬ್ಬರ ಸಹಾಯದಿಂದ ಸಾಹಿತ್ಯ ಭಂಡಾರಕ್ಕೆ ಮನವಿ ಮಾಡಿದ್ದ ಭೈರಪ್ಪನವರು, ತಮ್ಮ ಕೃತಿಯನ್ನು ಮೊದಲ ಗೌರವ ಧನಕ್ಕೆ ನೀಡಿದ್ದರು.
ಇನ್ನೂ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಹುಬ್ಬಳ್ಳಿಗೆ ಬಂದಿದ್ದರು. ಎಂಟು ದಿನ ಹುಬ್ಬಳ್ಳಿಯ ನೃಪತುಂಗ ಬೆಟ್ಟ, ಉಣಕಲ್ ಕೆರೆ, ಕಂಚಾಗರಗಲ್ಲಿ, ಧಾರವಾಡದಲ್ಲಿ ಸುತ್ತಾಡಿದ್ದರು.ಇದನ್ನೂ ಓದಿ: ನಾಡಿನ ಶ್ರೀಮಂತ ಇತಿಹಾಸವನ್ನು ಪರಿಚಯಿಸಿದ್ದ ಸಾಹಿತ್ಯದ ಸಾಕ್ಷಿಪ್ರಜ್ಞೆ: ಆರ್‌ಎಸ್‌ಎಸ್ ಸಂತಾಪ