13 ಸಾವಿರ ಅಡಿ ಎತ್ತರದಲ್ಲಿ ಹಾರಾಡಿದ ರಾಮಮಂದಿರದ ಬ್ಯಾನರ್

Public TV
1 Min Read
RAMMANDIR NEWS

– ಸ್ಕೈ ಡೈವಿಂಗ್‍ನಲ್ಲಿ ಮೊಳಗಿತು ಜೈ ಶ್ರೀರಾಮ್

ವಿಜಯಪುರ: ಅಯೋಧ್ಯೆಯ ರಾಮಮಂದಿರದಲ್ಲಿ (Ram Mandir) ಬಾಲರಾಮನ ಪ್ರಾಣಪ್ರತಿಷ್ಠೆಗೆ (Prana Pratishtha) ದಿನಗಣನೆ ಆರಂಭವಾಗಿದೆ. ಈ ಸಮಯದಲ್ಲಿ ಕೋಟ್ಯಂತರ ಶ್ರೀರಾಮನ ಭಕ್ತರು ದೇಶ ವಿದೇಶಗಳ ನೆಲದಲ್ಲಿ ನಾನಾ ರೀತಿಯಲ್ಲಿ ತಮ್ಮ ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ. ಅದೇ ರೀತಿ ಬ್ಯಾಂಕಾಕ್‍ನ (Bangkok) ಖೋಯಾಯ್ ಎಂಬಲ್ಲಿ ನಗರದ ವ್ಯಕ್ತಿಯೊಬ್ಬರು ಸೇರಿದಂತೆ ನಾಲ್ವರ ತಂಡ, 13 ಸಾವಿರ ಅಡಿ ಎತ್ತರದಿಂದ ಸ್ಕೈಡೈವಿಂಗ್ (Skydiving) ಮಾಡುವಾಗ ರಾಮಮಂದಿರ, ಜೈ ಶ್ರೀರಾಮ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಬ್ಯಾನರ್ ಹಿಡಿದು, ಜೈಶ್ರೀರಾಮ್ ಘೋಷಣೆ ಕೂಗಿ ತಮ್ಮ ಸಂಭ್ರಮವನ್ನು ವ್ಯಕ್ತಪಡಿಸಿದ್ದಾರೆ.

RAMMANDIR NEWS 1

ನಮೋ ಸ್ಕೈಡೈವರ್ಸ್ ಎಂಬ ಈ ನಾಲ್ವರ ತಂಡ ಈ ಸಾಹಸ ಮಾಡಿದ್ದಾರೆ. ನಗರದ ರಾಮನ ಪರಮ ಭಕ್ತರಾದ ಉದ್ಯಮಿ ರಾಜಶೇಖರ ಮುತ್ತಿನಪೆಂಡಿಮಠ ಈ ಸಾಹಸ ಮೆರೆದಿದ್ದು, ಇವರ ಜೊತೆ ಇವರ ಸ್ನೇಹಿತರಾದ ಬೆಂಗಳೂರಿನ ರಾಹುಲ್ ಡಾಕ್ರೆ, ಅನುಭವ ಅಗರವಾಲ್ ಹಾಗೂ ಮಹಾರಾಷ್ಟ್ರದ ಹಿಮಾನಶೂ ಸಾಬಳೆ ಸಾಥ್ ನೀಡಿದ್ದಾರೆ. ಇದನ್ನೂ ಓದಿ: ರಾಮಲಲ್ಲಾ ಪ್ರಾಣಪ್ರತಿಷ್ಠೆ ದಿನ ಶಾಸಕ ಅಭಯ ಪಾಟೀಲ್‌ ಕಡೆಯಿಂದ 5 ಲಕ್ಷ ಲಾಡು ವಿತರಣೆ

ರಾಮ ಭಕ್ತರ 500 ವರ್ಷಗಳ ಕನಸು ನನಸಾಗುತ್ತಿರುವ ಈ ಸಮಯದಲ್ಲಿ, ದೇಶದೆಲ್ಲೆಡೆ ರಾಮನ ಭಕ್ತರು ನಾನಾ ರೀತಿಯಲ್ಲಿ ಭಕ್ತಿ ಪ್ರದರ್ಶಿಸುತ್ತಿದ್ದಾರೆ. ಬೆಂಗಳೂರಿನ ಮಾಲ್‍ಗಳಲ್ಲಿ ರಾಮನ ರಂಗೋಲಿ ಬಿಡಿಸಿದ್ದು ಸುದ್ದಿಯಾಗಿತ್ತು. ಅದೇ ರೀತಿ ನಮೋ ಸ್ಕೈಡೈವರ್ಸ್ ತಂಡ ಕೂಡ ವಿಶೇಷ ಸಾಧನೆ ಮಾಡಿ ರಾಮನ ಭಕ್ತರ ಮನಸ್ಸನ್ನು ಗೆದ್ದಿದ್ದಾರೆ.

ರಾಮನಿಗೆ, ರಾಮ ಭಕ್ತಿಗೆ ವ್ಯಾಪ್ತಿಯ ಮಿತಿಯಿಲ್ಲ. ಹಾಗಾಗಿ ಆಗಸದಲ್ಲೂ ಶ್ರೀ ರಾಮನ ಹೆಸರು ಹಾರಬೇಕು ಎಂದು ವಿಭಿನ್ನ ಪ್ರಯತ್ನವನ್ನು ನಮೋ ಸ್ಕೈ ಡೈವರ್ಸ್ ತಂಡ ಮಾಡಿದೆ. ಇದನ್ನೂ ಓದಿ: Ayodhya Ram Mandir: ರಾಮನೂರಿನಲ್ಲಿ ತಲೆಎತ್ತಲಿದೆ ದೇಶದ ಮೊದಲ 7 ಸ್ಟಾರ್‌ ಸಸ್ಯಹಾರಿ ಹೋಟೆಲ್‌

Share This Article