ಬೆಂಗಳೂರು: ಸಿಲಿಕಾನ್ ಸಿಟಿ ಅಂದ್ರೆನೇ ಥಟ್ ಅಂತ ಕಣ್ಣೆದುರು ಬರೋದು ವಿಧಾನಸೌಧ (Vidhana Soudha), ಹೈಕೋರ್ಟ್, ಕಬ್ಬನ್ ಪಾರ್ಕ್, ಲಾಲ್‌ಬಾಗ್. ಅದು ಬಿಟ್ರೆ, ವಿಶ್ವೇಶ್ವರಯ್ಯ ಮ್ಯೂಸಿಯಂ, ನೆಹರು ತಾರಾಲಯ. ಆದ್ರೆ ಕಾಲ ಬದಲಾಗಿದೆ. ಜನರ ಆಲೋಚನೆಯೂ ಚೇಂಜ್ ಆಗಿದೆ. ಬೆಂಗಳೂರನ್ನ ಮತ್ತಷ್ಟು ಆಕರ್ಷಿಸಲು ಸರ್ಕಾರ ಮುಂದಾಗಿದೆ. ಪ್ರವಾಸಿಗರನ್ನ ಮತ್ತಷ್ಟು ಸೆಳೆಯಲು ಸಿಲಿಕಾನ್ ಸಿಟಿಯಲ್ಲಿ ಅತಿ ಎತ್ತರದ ಸ್ಕೈ ಡೆಕ್ (Sky Deck) ನಿರ್ಮಾಣ ಆಗಲಿದೆ. ಅದರ ಜೊತೆಗೆ ಬ್ರ್ಯಾಂಡ್ ಬೆಂಗಳೂರಿಗೆ (Brand Bengaluru) ಮತ್ತಷ್ಟು ಪ್ಲ್ಯಾನ್‌ಗಳು ಸಹ ರೆಡಿಯಾಗಿದೆ.
Advertisement
ಕಾಲ ಬದಲಾದಂತೆ ಜನರ ಅಭಿರುಚಿಯೂ ಬದಲಾಗ್ತಿದೆ. ಉದ್ಯಾನ ನಗರಿಯ ಸೌಂದರ್ಯವನ್ನು ಬಾನೆತ್ತರದಲ್ಲಿ ನಿಂತು ನೋಡುವ ಅಪೂರ್ವ ಅವಕಾಶವನ್ನ ಜನರಿಗೆ ಒದಗಿಸಲು ಸರ್ಕಾರ (Karnataka Govt) ಮುಂದಾಗಿದೆ. ಅದಕ್ಕಾಗಿಯೇ ಸ್ಕೈ ಡೆಕ್ ಅಂದ್ರೆ ವೀಕ್ಷಣಾ ಗೋಪುರ ನಿರ್ಮಿಸಲು ಸರ್ಕಾರ ಯೋಜನೆ ರೂಪಿಸಿದೆ. ಇದನ್ನೂ ಓದಿ: ಸಿನಿಮಾ ಟಿಕೆಟ್, OTT ಸಬ್‌ಸ್ಕ್ರಿಪ್ಶನ್ ಮೇಲೆ ಸೆಸ್ ವಿಧಿಸಲು ತೀರ್ಮಾನ – ಫಿಲ್ಮ್ ಚೇಂಬರ್ ಅಸಮಾಧಾನ
Advertisement
Advertisement
ನೈಸ್ ರಸ್ತೆಯಲ್ಲಿ ಸ್ಕೈ ಡೆಕ್ ತಲೆ ಎತ್ತಲಿದೆ. ಸ್ಕೈ ಡೆಕ್ ನಿರ್ಮಾಣಕ್ಕೆ ಬೆಂಗಳೂರು ಶಾಸಕರು ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಸರ್ಕಾರದಿಂದಲೇ ಸ್ಕೈ ಡೆಕ್ ನಿರ್ಮಾಣವಾಗಲಿದೆ. ಶನಿವಾರ (ಜು.27) ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಬೆಂಗಳೂರು ಶಾಸಕರ ಸಭೆಯಲ್ಲಿ ಸ್ಕೈ ಡೆಕ್ ನಿರ್ಮಾಣಕ್ಕೆ ಎಲ್ಲಾ ಶಾಸಕರು ಒಪ್ಪಿಗೆ ನೀಡಿದ್ದಾರೆ. ನೈಸ್ ರಸ್ತೆಯಲ್ಲಿ ಸ್ಕೈ ಡೆಕ್ ನಿರ್ಮಾಣಕ್ಕೆ ಜಾಗ ಫೈನಲ್ ಮಾಡಲಾಗಿದೆ. 400 – 500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಅಗತ್ಯ ಜಾಗವನ್ನ ನೈಸ್ ಸಂಸ್ಥೆಯಿಂದ ಬಿಡಿಸಿಕೊಳ್ಳಲು ತೀರ್ಮಾನ ಮಾಡಲಾಗಿದೆ.
Advertisement
ಸಭೆಯಲ್ಲಿ ಮಹತ್ವದ ವಿಷಯಗಳ ಚರ್ಚೆ:
ಒಂದೆಡೆ ಸ್ಕೈ ಡೆಕ್ ನಿರ್ಮಾಣಕ್ಕೆ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ. ಅಲ್ಲದೇ ಬೆಂಗಳೂರಿನಲ್ಲಿ ಟನಲ್ ರೋಡ್ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ. ಮೊದಲ ಹಂತದಲ್ಲಿ ಎಸ್ಟೀಮ್ ಮಾಲ್ ಟು ಸಿಲ್ಕ್ ಬೋರ್ಡ್ ವರೆಗೂ 18.5 ಕಿಮೀ ಟನಲ್ ರೋಡ್ ನಿರ್ಮಾಣ ಮಾಡಲಾಗುತ್ತದೆ. ಟನಲ್ ರೋಡ್‌ಗೆ ಕೆಲವು ಕಡೆ ಭೂಸ್ವಾಧೀನ ಅವಶ್ಯಕತೆ ಇದೆ. ಭೂಸ್ವಾಧೀನಕ್ಕೂ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧರಿಸಲಾಗಿದೆ. ಇದನ್ನೂ ಓದಿ: ನಾಯಿ ಸ್ವಲ್ಪ ಟಚ್ ಆದ್ರೂ ಮಸೀದಿಯೊಳಕ್ಕೆ ಹೋಗಲ್ಲ, ಅಂತಹದ್ದರಲ್ಲಿ ಮಾಂಸ ತರೋಕಾಗುತ್ತಾ? – ಅಬ್ದುಲ್ ರಜಾಕ್
ಪೂರ್ವ ಪಶ್ಚಿಮ ಭಾಗದಲ್ಲಿ 2ನೇ ಹಂತದಲ್ಲಿ ಮತ್ತೊಂದು ಟನಲ್ ರೋಡ್ ನಿರ್ಮಾಣ ಮಾಡಲು ಚರ್ಚೆಯೂ ಸಹ ನಡೆದಿದೆ. ಬೆಂಗಳೂರಿನಲ್ಲಿ ಮೆಟ್ರೋ ಮಾರ್ಗಕ್ಕಾಗಿ ಇನ್ಮುಂದೆ ಭೂಸ್ವಾಧೀನ ಇಲ್ಲ. ಭೂಸ್ವಾಧೀನ ಬದಲಿಗೆ ಡಬಲ್ ಡಕ್ಕರ್ ರಸ್ತೆಗಳನ್ನ ನಿರ್ಮಾಣ ಮಾಡಲು ಆದ್ಯತೆ ನೀಡಲಾಗುತ್ತದೆ. ಪಾಲಿಕೆ ಮತ್ತು ಮೆಟ್ರೋದವರೇ ಈ ಪ್ರಾಜೆಕ್ಟ್‌ಗೆ ಹಣ ಖರ್ಚು ಮಾಡಲಿವೆ. ಇನ್ನು ಸಿಗ್ನಲ್ ಫ್ರೀ ಕಾರಿಡಾರ್‌ಗೆ 100 ಕಿಮೀ ಫ್ಲೈಓವರ್ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ಫ್ಲೈಓವರ್ ನಿರ್ಮಾಣಕ್ಕೆ 12 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತೆ. ಕಸ ಸಮಸ್ಯೆ ನಿವಾರಣೆಗೆ ಬೆಂಗಳೂರು ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮದಲ್ಲಿ 4 ಜಾಗ ಗುರುತಿಸಲಾಗಿದೆ. ಪ್ರತಿ ಭಾಗದಲ್ಲಿ 100 ಎಕರೆ ಜಾಗದಲ್ಲಿ ಕಸ ಡಂಪಿಂಗ್ ಮಾಡುವ ಬಗ್ಗೆಯೂ ಚರ್ಚೆಯಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇನ್ನು ಸಭೆಯಲ್ಲಿ ಬೆಂಗಳೂರು ಅಭಿವೃದ್ಧಿ ಜೊತೆಗೆ ಎಲ್ಲಾ ಶಾಸಕರು ವಿಶೇಷ ಅನುದಾನಕ್ಕೆ ಬೇಡಿಕೆ ಇಟ್ಟರು. ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ಕ್ರಮ ಕೈಗೊಳ್ಳುವ ಭರವಸೆ ಡಿಸಿಎಂ ಶಾಸಕರಿಗೆ ನೀಡಿದ್ದಾರೆ. ಇದನ್ನೂ ಓದಿ: ಪುನೀತ್ ಕೆರೆಹಳ್ಳಿ ಮೇಲೆ ಪೊಲೀಸರ ದೌರ್ಜನ್ಯ ಆರೋಪ – ಹಿಂದೂ ಸಂಘಟನೆಗಳ ಒಕ್ಕೂಟದಿಂದ ಕಮಿಷನರ್‌ಗೆ ದೂರು