ಚಳಿಗಾಲ ಬಂತೆಂದರೆ ಸಾಕು ನಿಮ್ಮ ತ್ವಚೆಯ ಮೇಲೆ ಅನೇಕ ಹಾನಿ ಉಂಟಾಗಿ, ತ್ವಚೆ ಕೆಡುತ್ತದೆ. ಅಷ್ಟೇ ಅಲ್ಲದೇ ಚರ್ಮವೂ ಒಣ ಚರ್ಮವಾಗಿ ಬಿಡುತ್ತದೆ. ಇದನ್ನು ಹೋಗಲಾಡಿಸಲು ಸಾವಿರಾರು ರೂಪಾಯಿ ಖರ್ಚು ಮಾಡುತ್ತೇವೆ. ಅದರ ಬದಲು ಮನೆಯ ಅಡುಗೆ ಸಾಮನುಗಳನ್ನೇ ಬಳಸಿ ಸುಲಭವಾಗಿ ನಿಮ್ಮ ತ್ವಚೆಯನ್ನು ಕಾಪಾಡಿಕೊಳ್ಳುವ ಒಂದಿಷ್ಟು ಟಿಪ್ಸ್‌ಗಳು ಇಲ್ಲಿವೆ.
ಕಾಫಿ ಪುಡಿ ಮಿಶ್ರಣ: ಒಂದು ಬೌಲ್‍ಗೆ ಸ್ವಲ್ಪ ಕಂದು ಸಕ್ಕರೆ ಮತ್ತು ಕಾಫಿ ಪೌಡರ್‍ನ್ನು ಹಾಕಿಕೊಳ್ಳಿ. ಅವೆರಡು ಸರಿ ಪ್ರಮಾಣದಲ್ಲಿ ಇರಲಿ. ಅದಕ್ಕೆ ಸ್ವಲ್ಪ ತೆಂಗಿನ ಎಣ್ಣೆಯನ್ನು ಸೇರಿಸಿ ಮಿಕ್ಸ್ ಮಾಡಿ. ನಂತರ ನಿಮ್ಮ ತ್ವಚೆಗೆ ಕಾಫಿ ಪೌಡರ್ ಮಿಶ್ರಣವನ್ನು ಸ್ಕ್ರಬ್ ಮಾಡಿ. ಆಗ ನಿಮ್ಮ ಚರ್ಮದಲ್ಲಿ ಹೊಳಪನ್ನು ನೀವು ಗಮನಿಸಬಹುದು.
Advertisement
Advertisement
ಸಕ್ಕರೆಯ ಮಿಶ್ರಣ: ಕಂದು ಸಕ್ಕರೆಯನ್ನು ಮಿಕ್ಸರ್‌ನಲ್ಲಿ ಚೆನ್ನಾಗಿ ರುಬ್ಬಿ, ಅದಕ್ಕೆ ಸ್ವಲ್ಪ ಆಲಿವ್ ಎಣ್ಣೆ, ರೋಸ್ ವಾಟರ್ ಮತ್ತು ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಆ ಮಿಶ್ರಣ ನೀರಾಗುವಂತೆ ಮಾಡಬೇಡಿ, ಸ್ವಲ್ಪ ಗಟ್ಟಿ ಇರಲಿ. ನಂತರ ನಿಮ್ಮ ಮೊಣಕೈ, ತುಟಿ, ಒಡೆದ ಹಿಮ್ಮಡಿಗೆ ಹಚ್ಚಿ. ಇದರಿಂದ ಚಳಿಯ ವಾತಾವರಣವಿದ್ದರೂ ನಿಮ್ಮ ತ್ವಚೆಯನ್ನು ಕಾಪಾಡಲು ಸಹಕಾರಿಯಾಗುತ್ತದೆ.
Advertisement
Advertisement
ನಿಂಬೆ ಮಿಶ್ರಣ: ಒಂದು ಬಟ್ಟಲಿನಲ್ಲಿ ಸಕ್ಕರೆ, ಸ್ವಲ್ಪ ನಿಂಬೆ ರಸ, ಒಂದು ಚಮಚ ಜೇನುತುಪ್ಪ ಮತ್ತು ಸ್ವಲ್ಪ ರೋಸ್ ವಾಟರ್‍ನ್ನು ಸೇರಿಸಿ ಅದನ್ನು ಮಿಶ್ರಣ ಮಾಡಿ. ಅದನ್ನು ನಿಮ್ಮ ಒಣ ಚರ್ಮದ ಮೇಲೆ ಹಚ್ಚಿ. ಇದರಿಂದ ನಿಮ್ಮ ಒಣ ಚರ್ಮ ನಿವಾರಣೆಯಾಗುತ್ತದೆ.
ಕಾಂತಿಯುತ ಚರ್ಮಕ್ಕೆ ಮೈದಾ: ನಿಮ್ಮ ತ್ವಚೆಯನ್ನು ಎಲ್ಲಾ ಕಾಲದಲ್ಲೂ ಕಾಂತಿಯುತವಾಗಿ ಇಟ್ಟುಕೊಳ್ಳಲು ಕಡಲೆ ಹಿಟ್ಟು ಅತ್ಯುತ್ತಮ ಮಾರ್ಗ. ಹಾಲಿನ ಕೆನೆ, ಅರಿಶಿನ ಹಾಗೂ ಜೇನುತುಪ್ಪಕ್ಕೆ ಸ್ವಲ್ಪ ಕಡಲೆ ಹಿಟ್ಟನ್ನು ಸೇರಿಸಿ ನಿಮ್ಮ ತ್ವಚೆಗೆ ಹಚ್ಚಿ. ಇದರಿಂದ ನಿಮ್ಮ ತ್ವಚೆ ಮೃದುವಾಗುತ್ತದೆ. ಇದನ್ನೂ ಓದಿ: ಖರ್ಜೂರ ತಿಂದು ಆರೋಗ್ಯವಾಗಿರಿ – ಪ್ರತಿದಿನ ಒಂದೊಂದು ತಿಂದರೂ ನೀವು ಗಟ್ಟಿಯಾಗ್ತೀರಿ
ಗ್ರೀನ್ ಟೀ ಮತ್ತು ಲ್ಯಾವೆಂಡರ್: ಸಕ್ಕರೆ ಮಿಶ್ರಣದಲ್ಲಿ ಗ್ರೀನ್ ಟೀ ಮತ್ತು ಲ್ಯಾವೆಂಡರ್‌ನ್ನು ಸೇರಿಸಿ. ನಂತರ ಅದಕ್ಕೆ ಆಲಿವ್ ಅಥವಾ ತೆಂಗಿನ ಎಣ್ಣೆಯನ್ನು ಸೇರಿಸುವ ಮೂಲಕ ಸ್ಕ್ರಬ್ ಮಾಡಿ. ಚರ್ಮದ ಒಡೆದ ಭಾಗಕ್ಕೆ ಹಚ್ಚಿ. ಇದನ್ನೂ ಓದಿ: ಚಳಿಗಾಲದಲ್ಲಿ ಈ ತರಕಾರಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ