ತ್ವಚೆಯ ಅಂದ ಹೆಚ್ಚಿಸಲು ಹಾಲಿನ ಫೇಸ್‍ಪ್ಯಾಕ್

Advertisements

ತ್ವಚೆ ಚಂದವಿದ್ದಷ್ಟು ಮುಖದ ಕಾಂತಿಯೂ ಹೆಚ್ಚುತ್ತದೆ. ಮುಖದ ರಕ್ಷಣೆಗಾಗಿ ಸಾವಿರಾರು ರೂ. ಖರ್ಚು ಮಾಡಿ ತ್ವಚೆಯನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅದರಲ್ಲೂ ಚಳಿಗಾಲ ಬಂದರೆ ಸಾಕು. ಚರ್ಮಗಳಲ್ಲಿ ಮೂಡುವ ಬಿರುಕು ಮುಖದ ಅಂದವನ್ನು ಕೆಡಿಸುತ್ತದೆ.

Advertisements

ಚರ್ಮವನ್ನು ರಕ್ಷಿಸಿಕೊಳ್ಳಲು ಹರಸಾಹಸ ಪಡಬೇಕು. ತಮ್ಮ ತ್ವಚೆಯ ರಕ್ಷಣೆಗೆ ಸಾವಿರಾರು ರೂ. ನೀಡುವ ಬದಲು ಮನೆಯಲ್ಲೇ ಸಿಂಪಲ್ ಆಗಿ ಫೇಸ್ ಪ್ಯಾಕ್‍ಗಳನ್ನು ಮಾಡಿಕೊಂಡು ಮುಖದ ಅಂದವನ್ನು ಹೆಚ್ಚಿಸಿಕೊಳ್ಳಿ. ಹಾಲನ್ನು ಬಳಸಿ ಯಾವ ರೀತಿ ಫೇಸ್ ಪ್ಯಾಕ್‍ಗಳನ್ನು ಮಾಡಬಹುದು ಎನ್ನುವುದಕ್ಕೆ ಕುರಿತು ಮಾಹಿತಿ ಇಲ್ಲಿವೆ ನೋಡಿ.

Advertisements

ಗುಲಾಬಿ ಎಸಳಿನ ಫೇಸ್‍ಪ್ಯಾಕ್:
ತಾಜಾ ಗುಲಾಬಿ ಎಸಳುಗಳನ್ನು ರಾತ್ರಿಯಿಡೀ ಹಾಲಿನಲ್ಲಿ ನೆನೆಸಿ, ಮರುದಿನ ಬೆಳಗ್ಗೆ ಎಸಳುಗಳನ್ನು ಮತ್ತು ಹಾಲನ್ನು ಒಟ್ಟಿಗೆ ಪುಡಿಮಾಡಿ. ಅದಕ್ಕೆ ಒಂದು ಚಮಚ ಶ್ರೀಗಂಧದ ಪುಡಿಯನ್ನು ಸೇರಿಸಿ ಫೇಸ್ ಪ್ಯಾಕ್ ಮಾಡಿ. ಈ ಫೇಸ್ ಪ್ಯಾಕ್ ಮುಖದ ಮೇಲೆ ಹೊಳಪು ಪಡೆಯಲು ಅನುವು ಮಾಡಿಕೊಡುತ್ತದೆ.

ಆಲೂಗಡ್ಡೆ ಸಿಪ್ಪೆ ಪೇಸ್ಟ್: ಆಲೂಗಡ್ಡೆಯ ಸಿಪ್ಪೆ ತೆಗೆದು ಅದರ ಜೊತೆ ಹಾಲನ್ನು ಹಾಕಿ ಪೇಸ್ಟ್ ಮಾಡಿ. ಪೇಸ್ಟ್ ಮಾಡುವಾಗ ಅರ್ಧ ಕಪ್‍ಗಿಂತ ಕಡಿಮೆ ಹಾಲು ಸೇರಿಸಿ. ಸ್ವಲ್ಪ ಸಮಯದವರೆಗೆ ಫ್ರಿಡ್ಜ್‍ನಲ್ಲಿ ಇರಿಸಿ, ಆ ನಂತರ ಅದನ್ನು ಮುಖಕ್ಕೆ ಹಚ್ಚಿ ಮತ್ತು 15 ನಿಮಿಷಗಳ ನಂತರ ತಣ್ಣೀರಿನಿಂದ ನಿಮ್ಮ ಮುಖವನ್ನು ತೊಳೆಯಿರಿ.

Advertisements

ಹಾಲು ಮತ್ತು ಜೇನುತುಪ್ಪ ಮಿಶ್ರಣದ ಫೇಸ್‍ಪ್ಯಾಕ್: ಅರ್ಧ ಕಪ್ ಹಾಲಿಗೆ ಎರಡು ಚಮಚ ಜೇನುತುಪ್ಪ ಸೇರಿಸಿ ಸ್ವಲ್ಪ ಹೊತ್ತು ಹಾಗೆಯೇ ಬಿಡಿ. ನಂತರ ಬ್ರಶ್‍ನ ಸಹಾಯದಿಂದ ಮುಖಕ್ಕೆ ಹಚ್ಚಿಕೊಳ್ಳಿ. ಅದನ್ನು ಒಣಗಲು ಬಿಡಿ, ನಂತರದಲ್ಲಿ ಅದನ್ನು ನಿಮ್ಮ ಕೈಗಳಿಂದ ಉಜ್ಜಿ ಅದನ್ನು ತೆಗಿಯಿರಿ. ಈ ಫೇಸ್‍ಪ್ಯಾಕ್ ಮುಖದ ಮೇಲಿನ ಕಲೆಗಳನ್ನು ತೆಗೆಯಲು ನಿಮಗೆ ಅನುಕೂಲವಾಗುತ್ತದೆ. ಇದನ್ನೂ ಓದಿ: ನಿಮ್ಮ ಪಾದಗಳ ಅಂದ ಹೆಚ್ಚಿಸಲು ಈ ಮೆಹಂದಿ ಡಿಸೈನ್ ಸೂಕ್ತ

ಬಾದಾಮಿ ಪೇಸ್ಟ್: ಒಂದು ಬಟ್ಟಲಿನಲ್ಲಿ 5-6 ಬಾದಾಮಿಗಳನ್ನು ಹಾಲಿನಲ್ಲಿ ರಾತ್ರಿ ನೆನೆಸಿ, ನೆನೆಸಿದ ಬಾದಾಮಿಯನ್ನು ಮರುದಿನ ಪೇಸ್ಟ್ ಮಾಡಿ ಮತ್ತು 2 ಚಮಚ ಮಜ್ಜಿಗೆ ಸೇರಿಸಿ ನಂತರ ಅದನ್ನು ಮುಖಕ್ಕೆ 15 ನಿಮಿಷಗಳ ಕಾಲ ಹಚ್ಚಿದರೆ ನಿಮ್ಮ ತ್ವಚೆಯನ್ನು ರಕ್ಷಿಸಿಕೊಳ್ಳಬಹುದು.  ಇದನ್ನೂ ಓದಿ: ಮಾಲಿನ್ಯ ನಿಯಂತ್ರಣಕ್ಕೆ ಟಾಸ್ಕ್‌ಫೋರ್ಸ್‌- 17 ತಂಡ ರಚನೆ

Advertisements
Exit mobile version