ಬೆಂಗಳೂರು: ಸುಂದರವಾಗಿ ಕಾಣಲು ಎಲ್ಲರು ಇಷ್ಟಪಡ್ತಾರೆ. ಅದಕ್ಕಾಗಿ ಎಲ್ಲರೂ ಒಂದಲ್ಲಾ ಒಂದು ಟಿಪ್ಸ್ ಫಾಲೋ ಮಾಡ್ತಾರೆ. ಆದರೆ ಸರಿಯಾದ ಜ್ಞಾನವಿಲ್ಲದೇ ಜನರು ಈ 5 ಟಿಪ್ಸ್ ಅನ್ನು ನಂಬಿ ಇದನ್ನು ಅನುಸರಿಸುತ್ತಾರೆ. ಆದರೆ ಈ 5 ಟಿಪ್ಸ್ ಈಗ ಶುದ್ಧ ಸುಳ್ಳು ಎಂದು ತಿಳಿದುಬಂದಿದೆ.
1. ನಿಮ್ಮ ಸ್ಕಿನ್ ನನ್ನು ನಿಂಬೆಹಣ್ಣಿನಿಂದ ಉಜ್ಜುವುದು:
ಜನರು ಪಿಂಪಲ್ ಫ್ರೀ ತ್ವಚೆ ಪಡೆಯಲು ನಿಂಬೆಹಣ್ಣಿನಿಂದ ಸ್ಕ್ರಬ್ಬಿಂಗ್ ಮಾಡಿಕೊಳ್ಳುತ್ತಾರೆ. ಆದರೆ ಈ ರೀತಿ ಮಾಡುವುದರಿಂದ ನಿಮ್ಮ ತ್ವಚೆಗೆ ಹಾನಿಯಾಗುತ್ತದೆ. ಏಕೆಂದರೆ ನಿಂಬೆಹಣ್ಣಿನಲ್ಲಿ ಸಿಟ್ರಿಕ್ ಆ್ಯಸಿಡ್ ಇರುತ್ತದೆ. ಹಾಗಾಗಿ ಅದನ್ನು ತ್ವಜೆ ಮೇಲೆ ನೇರವಾಗಿ ಉಜ್ಜುವುದು ಒಳ್ಳೆಯದಲ್ಲ. ನಿಂಬೆಹಣ್ಣನ್ನು ನೇರವಾಗಿ ಸ್ಕೀನ್‍ಗೆ ಉಜ್ಜುವುದರ ಬದಲು ಅದನ್ನು ಗ್ಲಿಸರಿನ್ ಅಥವಾ ಫೇಸ್‍ಪ್ಯಾಕ್‍ನಲ್ಲಿ ಮಿಕ್ಸ್ ಮಾಡಿ ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ.
Advertisement
Advertisement
2. ಪದೇ ಪದೇ ನೀರಿನಿಂದ ಮುಖ ತೊಳೆದರೆ ಮೊಡವೆ ಮಾಯ:
ಪದೇ ಪದೇ ನೀರಿನಿಂದ ಮುಖ ತೊಳೆದರೆ ಮೊಡವೆಗಳು ಮಾಯವಾಗುತ್ತದೆ ಎಂದು ತುಂಬಾ ಜನ ನಂಬುತ್ತಾರೆ. ಆದರೆ ಇದು ಶುದ್ಧ ಸುಳ್ಳು. ಪದೇ ಪದೇ ನೀರಿನಿಂದ ಮುಖ ತೊಳೆದರೆ ನಿಮ್ಮ ಸ್ಕಿನ್‍ಗೆ ಬೇಕಾದ ಆಯಿಲ್ ಕಡಿಮೆ ಆಗುತ್ತದೆ. ಇದರಿಂದ ನಿಮ್ಮ ಸ್ಕೀನ್ ಡ್ರೈ ಆಗಿ ಮೊಡವೆ ಜಾಸ್ತಿಯಾಗುವ ರೀತಿ ಮಾಡುತ್ತದೆ. ಹೀಗಾಗಿ ದಿನಕ್ಕೆ 2 ಅಥವಾ 3 ಬಾರಿ ಮಾತ್ರ ಫೇಸ್ ವಾಶ್ ಮಾಡಬೇಕು.
Advertisement
Advertisement
3. ಸ್ಕ್ರಬ್ ಹಾಗೂ ಫೇಶಿಯಲ್‍ನಿಂದ ಪಿಂಪಲ್ ಫ್ರೀ:
ಸ್ಕ್ರಬ್, ಕ್ಲೀನಿಂಗ್ ಹಾಗೂ ಫೇಶಿಯಲ್ ಮಾಡುವುದರಿಂದ ಪಿಂಪಲ್ ಕಡಿಮೆಯಾಗುತ್ತದೆ ಎಂದು ಎಲ್ಲರು ನಂಬುತ್ತಾರೆ. ಆದರೆ ಇದರಿಂದ ನಿಮ್ಮ ಹಣ ಮಾತ್ರ ವ್ಯರ್ಥ ಆಗುವುದು ಹೊರತು ಪಿಂಪಲ್ ದೂರವಾಗುವುದಿಲ್ಲ. ಈ ರೀತಿ ಮಾಡುವುದರಿಂದ ನಿಮ್ಮ ತ್ವಚೆಯ ಪೋರ್ ಓಪನ್ ಆಗಿ ನಿಮ್ಮ ಸ್ಕೀನ್ ಅನ್ನು ಸೆನ್ಸಿಟಿವ್ ಮಾಡುತ್ತದೆ. ಅಲ್ಲದೇ ಇದರಿಂದ ನಿಮ್ಮ ಮುಖದ ಮೇಲೆ ಇನ್ನಷ್ಟೂ ಪಿಂಪಲ್ ಜಾಸ್ತಿ ಮಾಡುತ್ತದೆ.
4. ಫೇರ್ ನೆಸ್ ಕ್ರೀಂ ಬೆಳ್ಳಗೆ ಮಾಡುತ್ತದೆ:
ಫೇರ್ ನೆಸ್ ಕ್ರೀಂ ನಿಮ್ಮ ಮುಖವನ್ನು ಹೊಳೆಯುವಂತೆ ಮಾಡುತ್ತದೆ ಎಂದು ಅಂದುಕೊಂಡಿದ್ದಾರೆ. ಆದರೆ ಈ ಕ್ರೀಂಗಳು ಹಾಗೇ ಮಾಡುವುದಿಲ್ಲ. ಕಂಪೆನಿಗಳು ತಮ್ಮ ಪ್ರಾಡೆಕ್ಟ್ ಗಳನ್ನು ಮಾರಾಟ ಮಾಡಲು ಈ ರೀತಿಯ ಐಡಿಯಾ ಉಪಯೋಗಿಸುತ್ತಾರೆ. ಈ ಕ್ರೀಂಗಳನ್ನು ಉಪಯೋಗಿಸಿದ್ದರೆ ಅದು ನಿಮ್ಮ ತ್ವಚೆಯ ಫಿಗ್ಮೆಂಟೇಶನ್‍ನನ್ನು ತೆಗೆಯುತ್ತದೆ. ಹಾಗಾಗಿ ಕ್ರೀಂಗಳ ಬದಲು ನಿಮ್ಮ ಬಗ್ಗೆ ನೀವು ವಿಶ್ವಾಸವನ್ನು ಹೊಂದಿರಿ.
5. ಕ್ಲೌಡಿ ಡೇ ದಿನ ಸನ್‍ಸ್ಕ್ರೀನ್ ಬಳಸಬಾರದು:
ಸನ್ ಸ್ಕ್ರೀನ್ ಉಪಯೋಗಿಸುವುದರಿಂದ ಅದು ನಮ್ಮನ್ನು ಅಲ್ಟ್ರಾವೈಲೆಟ್ ಕಿರಣಗಳಿಂದ ಕಾಪಾಡುತ್ತದೆ. ಬಿಸಿಲು ಇದ್ದಾಗ ಮಾತ್ರ ಜನರು ಸನ್ ಸ್ಕ್ರೀನ್ ಉಪಯೋಗಿಸುತ್ತಾರೆ. ಮೋಡ ಕವಿದ ದಿನವೂ ಕೂಡ ಸೂರ್ಯನ ಕಿರಣವೂ ನಮ್ಮ ಮೇಲೆ ಸುಲಭವಾಗಿ ಬೀಳುತ್ತದೆ. ಹಾಗಾಗಿ ನೀವು ದಿನವೂ ಸನ್ ಸ್ಕ್ರೀನ್‍ನನ್ನು ಉಪಯೋಗಿಸುವುದನ್ನು ಮರೆಯಬೇಡಿ. ಹೀಗಾಗಿ ಕ್ಲೌಡಿ ಡೇ ದಿನ ಸನ್‍ಸ್ಕ್ರೀನ್ ಬಳಸಬಾರದು ಎಂಬುವುದು ಶುದ್ಧ ಸುಳ್ಳಾಗಿದೆ.
ಈ ಎಲ್ಲಾ ಟಿಪ್ಸ್ ಜನರು ನಿಜವೆಂದು ನಂಬಿದ್ದರು. ಆದರೆ ಇದು ಶುದ್ಧ ಸುಳ್ಳು ಎಂಬುದು ಈಗ ಗೊತ್ತಾಗಿದೆ. ಸದ್ಯ ನೀವು ಕೂಡ ಈ ಟಿಪ್ಸ್ ನನ್ನು ಅನುಸರಿಸಿದರೆ ಸುಂದರವಾಗಿ ಕಾಣಿಸಬಹುದು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv