ಮಂಗಳೂರು: ಸಿಂಗಾಪುರದಲ್ಲಿ ನಡೆದ ಇಂಟರ್ ನ್ಯಾಷನಲ್ ಐಸ್ ಸ್ಕೇಟಿಂಗ್ ನಲ್ಲಿ ಎರಡು ಚಿನ್ನದ ಪದಕ ಪಡೆದ ಮಂಗಳೂರಿನ ಕುಮಾರಿ ಅನಘಾಗೆ ತಾಯ್ನಾಡಿಗೆ ಮರಳಿದ್ದಾಳೆ.
ಶುಕ್ರವಾರ ಬೆಳಗ್ಗೆ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅನಘಾಳನ್ನು ಸ್ವಾಗತಿಸಿ, ಸನ್ಮಾನಿಸಲಾಯಿತು. ಮಂಗಳೂರಿನ ಉದ್ಯಮಿ, ಮಾಸ್ಟರ್ ಫ್ಲವರ್ಸ್ ನ ಮಾಲಕ ಪಕೀರಬ್ಬ ಹೂವಿನ ಹಾರ, ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು. ಎಂಟು ವಯಸ್ಸಿನ ಒಳಗಿನ ಐಸ್ ಸ್ಕೇಟಿಂಗ್ ನಲ್ಲಿ ಅನಘಾ, ಮೊದಲ ಬಾರಿಗೆ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟಿದ್ದಾಳೆ.
Advertisement
Advertisement
ಸೌತ್ ಈಸ್ಟ್ ಏಷ್ಯನ್ ಓಪನ್ ಶಾರ್ಟ್ ಟ್ರಾಕ್ ಟ್ರೋಫಿ -2020 ಐಸ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಅನಘಾ, 500 ಹಾಗೂ 333 ಮೀಟರ್ ಐಸ್ ಸ್ಕೇಟಿಂಗಲ್ಲಿ ಚಿನ್ನ ಗೆದ್ದಿದ್ದಾಳೆ. ಸಿಂಗಾಪುರದ ಜೆಕ್ಯೂಬ್ ಐಸ್ ರಿಂಕ್‍ನಲ್ಲಿ ಜನವರಿ 4 ಹಾಗೂ 5 ರಂದು ನಡೆದ ಟೂರ್ನಮೆಂಟಿನಲ್ಲಿ 14 ದೇಶದ ಸ್ಕೇಟಿಂಗ್ ಪಟುಗಳು ಭಾಗವಹಿಸಿದ್ದರು.
Advertisement
ಅಮೆರಿಕ, ರಷ್ಯಾ, ಜಪಾನ್, ಇಂಡೋನೇಷ್ಯಾ, ಮಲೇಷ್ಯಾ, ಥಾಯ್ಲೆಂಡ್ ಸೇರಿ ಜಗತ್ತಿನ ಮುಂಚೂಣಿ ಸ್ಕೇಟರ್ ಗಳು ಪಾಲ್ಗೊಂಡಿದ್ದ ಟೂರ್ನಮೆಂಟಿನಲ್ಲಿ ಭಾರತದ ಹುಡುಗಿ ಗೋಲ್ಡ್ ಮೆಡಲ್ ಗಳಿಸಿದ್ದು ಸಿಂಗಾಪುರದ ಆಯೋಜಕರಿಗೇ ಅಚ್ಚರಿಗೆ ಕಾರಣವಾಗಿತ್ತು.
Advertisement
ಮಂಗಳೂರಿನ ಡಾ.ರಾಜೇಶ್ ಹುಕ್ಕೇರಿ ಹಾಗೂ ಡಾ.ಅನಿತಾ ರಾಜೇಶ್ ದಂಪತಿಯ ಪುತ್ರಿಯಾದ ಅನಘಾ ಬಿಜೈ ಲೂಡ್ಸ್ ಸೆಂಟ್ರಲ್ ಸ್ಕೂಲ್ ನ 4ನೇ ತರಗತಿ ವಿದ್ಯಾರ್ಥಿನಿ. ಐಸ್ ಸ್ಕೇಟಿಂಗ್‍ನ ಭಾರತ ತಂಡದ ಕೋಚ್ ಅವಧೂತ್ ಥಾವಡೇ ಅವರಿಂದ ಅನಘಾ ದೆಹಲಿಯಲ್ಲಿ ಐಸ್ ಸ್ಕೇಟಿಂಗ್ ತರಬೇತಿ ಪಡೆಯುತ್ತಿದ್ದಾಳೆ.