– 150 ಪೋಲ್‍ಗಳನ್ನ 1 ನಿಮಿಷ 4 ಸೆಕೆಂಡ್‍ಗಳಲ್ಲಿ ಕಂಪ್ಲಿಟ್
ಬೆಂಗಳೂರು: ಇತ್ತೀಚೆಗೆ ಪುಟಾಣಿ ಮಕ್ಕಳು ದಾಖಲೆ ಬರೆಯುವಂತೆ ಗುರಿ ಹೊಂದಿರುತ್ತಾರೆ. ಇದೇ ರೀತಿ ಬೆಂಗಳೂರಿನ ಸುಬ್ರಮಣ್ಯನಗರ ಪುಟಾಣಿ ಪೋರ ದಾಖಲೆ ಮಾಡುವಂತಹ ದೊಡ್ಡ ಕನಸು ಹೊತ್ತಿದ್ದಾನೆ.
ಮಾರುತಿ ಹಾಗೂ ಸವಿತಾ ದಂಪತಿ ಪುತ್ರ ಆರ್ಯನ್ ಸ್ಕೇಟಿಂಗ್‍ನಲ್ಲಿ ಲಿಂಬೋ ದಾಖಲೆ ಮಾಡಲು ಸಿದ್ಧನಾಗುತ್ತಿದ್ದಾನೆ. ಕಬ್ಬನ್ ಪಾರ್ಕಿನಲ್ಲಿ ಭಾನುವಾರವಾದರೆ ಸಾಕು ಸ್ಕೇಟಿಂಗ್ ಮಾಡುತ್ತಾನೆ. ಈ ಪುಟಾಣಿ ಫೋರ 150 ಮೀ ಉದ್ದವನ್ನ 9 ಅಡಿ ಎತ್ತರ ಪೋಲ್‍ಗಳನ್ನ ಇರಿಸಿ ಬಾಡಿ ಬೆಂಡ್ ಮಾಡಿ ಸ್ಕೇಟಿಂಗ್ ಮಾಡುತ್ತಿದ್ದಾನೆ.
Advertisement
Advertisement
ಈವರೆಗೂ ಯಾರು ಈ ಸಾಧನೆ ಮಾಡಿಲ್ಲ. ಹೀಗಾಗಿ ಆರ್ಯನ್ ಈ ಸಾಧನೆ ಮಾಡುವ ಆಸೆ ಹೊಂದಿದ್ದಾನೆ ಎಂದು ತಂದೆ ಮಾರುತಿ ಹೇಳಿದ್ದಾರೆ. 6 ವರ್ಷದ ಆರ್ಯನ್ 150 ಪೋಲ್‍ಗಳನ್ನ ಕೇವಲ 1 ನಿಮಿಷ 4 ಸೆಕೆಂಡ್‍ಗಳಲ್ಲಿ ಕಂಪ್ಲಿಟ್ ಮಾಡುತ್ತಾನೆ. ಈ ಸಂಬಂಧ ಅಗತ್ಯ ದಾಖಲೆಗಳನ್ನ ಕಲೆಹಾಕಲಾಗಿದೆ. ಲಿಂಬೋ ದಾಖಲೆಗಾಗಿ ವಿಡಿಯೋಗಳನ್ನ ಕಳುಹಿಸಲಾಗಿದೆ. ಈ ದಾಖಲೆಗಾಗಿಯೇ ಆರ್ಯನ್ ಕಾತುರದಿಂದ ಕಾಯುತ್ತಿದ್ದಾನೆ ಎಂದು ತಾಯಿ ಸವಿತಾ ತಿಳಿಸಿದ್ದಾರೆ.
Advertisement
Advertisement
ಆರ್ಯನ್ ಈ ವಿದ್ಯೆಗೆ, ಈ ದಾಖಲೆ ಮಾಡಲು ಯಾರೂ ಗುರುವಿಲ್ಲ. ತಂದೆ-ತಾಯಿ ನಿತ್ಯ ಆರ್ಯನ್ ಸ್ಕೇಟಿಂಗ್ ಮೇಲೆ ಗಮನವಿರಿಸಿ ಈ ಸಾಧನೆ ಮಾಡಿಸಲು ಪ್ರಯತ್ನಿಸುತ್ತಿದ್ದಾರೆ.