ಚಿತ್ರದುರ್ಗ: ಕಾಂಗ್ರೆಸ್ (Congress) ಟಿಕೆಟ್ ಹರಾಜಾಗಿದೆ. ನಾವೇನು ಹರಾಜು ನೋಡಿಲ್ಲ. ಆದರೆ ಚುನಾವಣೆ (Election) ಮಾಡುವಷ್ಟೇ ಹಣ ನೀಡಿದ್ದಾರೆ ಎಂದು ಕೆಪಿಸಿಸಿಯಲ್ಲಿ (KPCC) ಹೇಳುತ್ತಾರೆ. ಎಷ್ಟು ಹಣವೆಂಬುದು ನಮಗೆ ಖಚಿತವಾಗಿ ಗೊತ್ತಿಲ್ಲ. ನಾವು ಆ ಹಣ ಎಣಿಸಿದವರಲ್ಲ ಎಂದು ಮಾಜಿ ಶಾಸಕ ಎಸ್.ಕೆ.ಬಸವರಾಜನ್ (S.K.Basavarajan) ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ.
ಚಿತ್ರದುರ್ಗದಲ್ಲಿ (Chitradurga) ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹಿನ್ನೆಲೆ ಪಕ್ಷೇತರ ಅಭ್ಯರ್ಥಿಯಾಗಿ ಪತ್ನಿ ಸೌಭಾಗ್ಯರನ್ನು ಕಣಕ್ಕಿಳಿಸುವುದಾಗಿ ಘೋಷಣೆ ಮಾಡಿದರು. ರಘು ಆಚಾರ್ ನಮ್ಮ ಮನೆಗೆ ಬಂದು ಜಿಲ್ಲಾ ಜೆಡಿಎಸ್ (JDS) ಉಸ್ತುವಾರಿ ನೀಡಿದ್ದಾರೆಂದು ಹೇಳಿಕೊಂಡರು. ಅಲ್ಲದೇ ಹಿರಿಯೂರು ಹೊಸದುರ್ಗದಿಂದ ಸ್ಪರ್ಧಿಸುವಂತೆ ಸಲಹೆ ನೀಡಿದರು. ನಾವು ಚಿತ್ರದುರ್ಗದಿಂದಲೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗೆ ನಿರ್ಧಾರ ಮಾಡಿದ್ದು, ಪಕ್ಷ ಹಾಗೂ ಎಲ್ಲಾ ವರ್ಗದ ಜನರ ಬೆಂಬಲವಿದೆ ಎಂದರು. ಇದನ್ನು ಓದಿ: ಈ ಬಾರಿ 20ಕ್ಕೂ ಹೆಚ್ಚು ಹಾಲಿ ಬಿಜೆಪಿ ಶಾಸಕರಿಗೆ ಕೊಕ್?
Advertisement
Advertisement
ಈ ಕುರಿತು ಮಾತನಾಡಿದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ (Soubhagya Basavarajan), ನಾನು ಯಾವುದೇ ಚುನಾವಣೆಗಳಲ್ಲಿ ಸೋಲು ಕಂಡಿಲ್ಲ. ಗ್ರಾ.ಪಂ, ತಾ.ಪಂ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಗೆದ್ದಿದ್ದೇನೆ. ಗ್ರಾ.ಪಂ ಉಪಾಧ್ಯಕ್ಷೆ, ತಾ.ಪಂ. ಅಧ್ಯಕ್ಷೆ ಹಾಗೂ 3 ಬಾರಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿದ್ದೇನೆ. ನಾನು ಯಾವತ್ತೂ ಸೋತಿಲ್ಲ ಎಂಬುದು ಬೆಂಬಲಿಗರ ಅಭಿಪ್ರಾಯ. ಕೆಲವು ಸಂದರ್ಭದಲ್ಲಿ ಊರು ಖಾಲಿ ಮಾಡುತ್ತಾರೆ ಎಂದು ಕೆಲವರು ಭಾವಿಸಿದ್ದರು. ಇಂತಹ ಸಂಕಷ್ಟದ ಸಂದರ್ಭದಲ್ಲೂ ಬೆಂಬಲಿಗರು ನನ್ನ ಬೆನ್ನಿಗೆ ನಿಂತಿದ್ದರು. ಬೆಂಬಲಿಗರಿಗಾಗಿ ನಾನು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದರು. ಇದನ್ನು ಓದಿ: ಮೋದಿ ಕಾಡು ಪ್ರಾಣಿಗಳನ್ನು ನೋಡಿದರೆ ಜನ ವೋಟು ಒತ್ತುತ್ತಾರಾ: ಹೆಚ್ಡಿಕೆ ವ್ಯಂಗ್ಯ
Advertisement
Advertisement
ಶೇ.50ರಷ್ಟು ಮಹಿಳಾ ಮತದಾರರು ಇದ್ದಾರೆ. ನಾನು ಮಹಿಳಾ ಪ್ರತಿನಿಧಿಯಾಗಿ ಸ್ಪರ್ಧಿಸುತ್ತಿದ್ದೇನೆ. ಪ್ರೀತಿ ವಿಶ್ವಾಸದ ಮುಂದೆ ಹಣ ಲೆಕ್ಕಕ್ಕೆ ಬರುವುದಿಲ್ಲ. ದುಡ್ಡು ಖರ್ಚು ಮಾಡದೆ ಗೆದ್ದು ಬಿಡುತ್ತೇವೆಂಬ ಭ್ರಮೆಯಿಲ್ಲ. ಎಲ್ಲರಂತೆಯೆ ನಾವು ಸಹ ರಾಜಕಾರಣ (Politics) ಮಾಡುತ್ತೇವೆ. ಎಲ್ಲದಕ್ಕೂ ಸಿದ್ಧವಾಗಿಯೇ ನಾವು ಸ್ಪರ್ಧೆಗೆ ಬಂದಿದ್ದೇವೆ. ಜನರು ನನ್ನನ್ನು ಮನೆಮಗಳಂತೆ ಕಂಡಿದ್ದು, ಆಶೀರ್ವದಿಸುವ ನಂಬಿಕೆಯಿದೆ ಎಂದು ಹೇಳಿದರು. ಇದನ್ನು ಓದಿ: ಗದಗ ಜಿಲ್ಲೆಯಲ್ಲಿ ಮಾಜಿ, ಹಾಲಿ ಶಾಸಕರ ಕೊನೆಯ ಕಸರತ್ತು