ನವದೆಹಲಿ: ಲೋಕಸಭೆಗೆ (Lok Sabha Election) ಇಂದು (ಶನಿವಾರ) ಆರನೇ ಹಂತದ ಚುನಾವಣೆ ನಡೆಯುತ್ತಿದ್ದು, ಒಟ್ಟು 8 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 58 ಕ್ಷೇತ್ರಗಳಿಗೆ ಮತದಾನ (Voting) ನಡೆಯಲಿದೆ.
ಈಗಾಗಲೇ ಮತದಾನ ಆರಂಭವಾಗಿದ್ದು, ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಬಿಹಾರದ 8, ಹರಿಯಾಣದ ಎಲ್ಲಾ 10 ಸ್ಥಾನಗಳು, ಜಮ್ಮು ಮತ್ತು ಕಾಶ್ಮೀರದ 1 ಸ್ಥಾನ, ಜಾರ್ಖಂಡ್‌ನ 4 ಸ್ಥಾನ, ದೆಹಲಿಯ ಎಲ್ಲಾ 7 ಸ್ಥಾನಗಳು, ಒಡಿಶಾದಲ್ಲಿ 6, ಉತ್ತರ ಪ್ರದೇಶದ 14 ಮತ್ತು ಪಶ್ಚಿಮ ಬಂಗಾಳದ 8 ಸ್ಥಾನಗಳಿಗೆ ಮತದಾನ ನಡೆಯಲಿದೆ. ಚುನಾವಣಾ ಅಖಾಡದಲ್ಲಿ ಒಟ್ಟು 889 ಅಭ್ಯರ್ಥಿಗಳಿದ್ದಾರೆ. 5.84 ಕೋಟಿ ಪುರುಷರು, 5.29 ಕೋಟಿ ಮಹಿಳೆಯರು, 5,120 ತೃತೀಯ ಲಿಂಗಿಗಳು ಸೇರಿ ಒಟ್ಟು 11.13 ಕೋಟಿ ಮತದಾರರು ಮತದಾನಕ್ಕೆ ಅರ್ಹರಾಗಿದ್ದಾರೆ. 8.93 ಲಕ್ಷಕ್ಕೂ ಹೆಚ್ಚು ನೋಂದಾಯಿತ 85+ ವರ್ಷದ, 23,659 100 ವರ್ಷಕ್ಕಿಂತ ಮೇಲ್ಪಟ್ಟ ಮತದಾರರು ಮತ ಚಲಾಯಿಸಲಿದ್ದಾರೆ. ಇದನ್ನೂ ಓದಿ: ಫಾರ್ಮ್‍ಹೌಸ್‍ನಲ್ಲಿ ರೇವ್ ಪಾರ್ಟಿ ಪ್ರಕರಣ- ಐವರ ಬ್ಯಾಂಕ್ ಅಕೌಂಟ್ ಸೀಜ್
Advertisement
Advertisement
ಆರನೇ ಹಂತದ ಮತದಾನಕ್ಕೆ 1.14 ಲಕ್ಷ ಮತಗಟ್ಟೆಗಳ ನಿರ್ಮಾಣವಾಗಿದ್ದು, 11.4 ಲಕ್ಷ ಮತಗಟ್ಟೆ ಅಧಿಕಾರಿಗಳ ನೇಮಕ ಮಾಡಲಾಗಿದೆ. ಭದ್ರತಾ ಸಿಬ್ಬಂದಿಯನ್ನು ಕರೆದೊಯ್ಯಲು 20 ವಿಶೇಷ ರೈಲುಗಳನ್ನು ನಿಯೋಜಿಸಿದ್ದು, 184 ವೀಕ್ಷಕರು, 2,222 ಫ್ಲೈಯಿಂಗ್ ಸ್ಕ್ವಾಡ್‌ಗಳ ನೇಮಕ ಮಾಡಲಾಗಿದೆ. 257 ಅಂತರಾಷ್ಟ್ರೀಯ ಗಡಿ ಚೆಕ್‌ಪೋಸ್ಟ್‌ಗಳು, 927 ಅಂತರ-ರಾಜ್ಯ ಗಡಿ ಚೆಕ್‌ಪೋಸ್ಟ್‌ಗಳು ನಿಯೋಜನೆ ಮಾಡಿದ್ದು, ಚುನಾವಣಾ ಗಲಭೆ ತಡೆಯಲು ಪ್ರಮುಖ ಕ್ಷೇತ್ರಗಳಲ್ಲಿ ಕೇಂದ್ರದ ಮೀಸಲು ಪಡೆಗಳನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ಕೋಲ್ಕತ್ತಾದಲ್ಲಿ ಹಿಂಸಾತ್ಮಕ ಪ್ರತಿಭಟನೆ ಸಾಧ್ಯತೆ – ಮೇ 28 ರಿಂದ 60 ದಿನ 144 ಸೆಕ್ಷನ್ ಜಾರಿ
Advertisement
Advertisement
ಆರನೇ ಹಂತದಲ್ಲಿರುವ ಪ್ರಮುಖ ಅಭ್ಯರ್ಥಿಗಳು:
ನವದೆಹಲಿ – ಬನ್ಸೂರಿ ಸ್ವರಾಜ್ (ಬಿಜೆಪಿ)
ಈಶಾನ್ಯ ದೆಹಲಿ – ಮನೋಜ್ ತಿವಾರಿ (ಬಿಜೆಪಿ), ಕನ್ಹಯ್ಯಾ ಕುಮಾರ್ (ಕಾಂಗ್ರೆಸ್)
ರೊಹ್ಟಕ್ – ದೀಪೇಂದ್ರ ಸಿಂಗ್ ಹೂಡಾ (ಕಾಂಗ್ರೆಸ್)
ಸಂಬಲ್‌ಪುರ – ಧರ್ಮೇಂದ್ರ ಪ್ರಧಾನ್ (ಬಿಜೆಪಿ)
ಸುಲ್ತಾನ್‌ಪುರ – ಮೇನಕಾ ಗಾಂಧಿ (ಬಿಜೆಪಿ),
ಅನಂತನಾಗ್ ರಜೌರಿ- ಮೆಹಬೂಬಾ ಮುಫ್ತಿ (ಪಿಡಿಪಿ)
ತಮ್ಲುಕ್ – ಅಭಿಜಿತ್ ಗಂಗೋಪಾಧ್ಯಾಯ (ಬಿಜೆಪಿ)
ಕರ್ನಾಲ್ – ಮನೋಹರ್ ಲಾಲ್ ಖಟ್ಟರ್ (ಬಿಜೆಪಿ)
ಕುರುಕ್ಷೇತ್ರ – ನವೀನ್ ಜಿಂದಾಲ್ (ಬಿಜೆಪಿ)
ಗುರ್‌ಗಾಂವ್ – ಇಂದರ್‌ಜಿತ್ ಸಿಂಗ್ (ಬಿಜೆಪಿ)