ನವದೆಹಲಿ: ಇಥಿಯೋಪಿಯನ್ ವಿಮಾನ ಪತನಗೊಂಡ ದುರಂತದಲ್ಲಿ ಭಾರತದ 6 ಜನರು ಸಾವನ್ನಪ್ಪಿದ್ದಾರೆ ಎಂಬುದನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಖಚಿತಪಡಿಸಿದ್ದಾರೆ. ಮೃತರಲ್ಲಿ ವಿಶ್ವಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ(ಯುಎನ್‍ಡಿಪಿ) ಸಲಹೆಗಾರ್ತಿ ಶಿಖಾ ಗರ್ಗ್ ಸಹ ಪತನಗೊಂಡ ವಿಮಾನದಲ್ಲಿದ್ದರು ಎಂದು ಕೇಂದ್ರ ಸಚಿವ ಹರ್ಷವರ್ಧನ್ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.
ಸುಷ್ಮಾ ಸ್ವರಾಜ್ ಟ್ವೀಟ್ ಮೂಲಕ ಸಂತಾಪ ಸೂಚಿಸಿ, ನಾನು ಮೃತ ಪನ್ನಗೇಶ್ ವೈದ್ಯರ ಪುತ್ರನೊಂದಿಗೆ ಮಾತನಾಡಿದ್ದೇನೆ. ಇಥಿಯೋಪಿಯನ್ ವಿಮಾನ ದುರಂತದ ಭಾರತೀಯ ಕುಟುಂಬದ ಆರು ಜನರನ್ನು ಕಳೆದುಕೊಂಡ ವಿಷಯ ಕೇಳಿ ಶಾಕ್ ಆಯ್ತು. ಈಗಾಗಲೇ ಕೀನ್ಯಾ ಮತ್ತು ಇಥಿಯೋಪಿಯಾದಲ್ಲಿರುವ ಭಾರತದ ರಾಯಭಾರಿಯ ಕಚೇರಿಯ ಸಿಬ್ಬಂದಿಗೆ ಘಟನಾ ಸ್ಥಳಕ್ಕೆ ಹೋಗುವಂತೆ ಸೂಚನೆ ನೀಡಿದ್ದೇನೆ. ಅಲ್ಲಿಯ ನಮ್ಮ ಸಿಬ್ಬಂದಿ ಮೃತ ಕುಟುಂಬಸ್ಥರಿಗೆ ಸಹಾಯ ಮಾಡಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
Advertisement
I have spoken to son of Mr Vaidya in Toronto. I am shocked you hv lost 6 members of your family in air crash. My heartfelt condolences. I hv asked @IndiainKenya @IndiaInEthiopia to reach u immediately. They will provide help and assistance in respect of all your family members. https://t.co/4iUGgEC7j5
— Sushma Swaraj (@SushmaSwaraj) March 11, 2019
Advertisement
ಈ ಮೊದಲು ಸುಷ್ಮಾ ಸ್ವರಾಜ್ ವಿಮಾನ ದುರಂತದಲ್ಲಿ ಭಾರತ ಮೂಲದ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ಮತ್ತೊಮ್ಮೆ ಇಂದು ಬೆಳಗ್ಗೆ ಟ್ವೀಟ್ ಮಾಡಿ ಆರು ಜನರು ಎಂದು ತಿಳಿಸಿದ್ದಾರೆ. ಮೃತರನ್ನು ವೈದ್ಯ ಪನ್ನಗೇಶ್ ಭಾಸ್ಕರ್, ವೈದ್ಯ ಹಂಸಿನಿ ಅನ್ನಗೇಶ್, ನುಕುವಾರಾಪೂ ಮನೀಷಾ ಮತ್ತು ಶಿಖಾ ಗಾರ್ಗ್ ಎಂದು ಗುರುತಿಸಲಾಗಿದ್ದು, ಇನ್ನಿಬ್ಬರ ಹೆಸರು ತಿಳಿದು ಬಂದಿಲ್ಲ.
Advertisement
ಶಿಖಾ ಗರ್ಗ್ ಸಾವಿಗೆ ಕೇಂದ್ರ ಸಚಿವರ ಸಂತಾಪ:
ಶಿಖಾ ಗರ್ಗ್ ನೌರೊಬಿಯಲ್ಲಿ ನಡೆಯುತ್ತಿರುವ ಸಂಯುಕ್ತ ರಾಷ್ಟ್ರಗಳ ಪರಿಸರ ಕಾರ್ಯಕ್ರಮದಲ್ಲಿ ಭಾಗಿಯಾಗಲು ತೆರಳುತ್ತಿದ್ದರು. ಶಿಖಾ ಅವರು ಪರಿಸರ ಸಚಿವಾಲಯದ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿಸುತ್ತಿದ್ದರು. ಶಿಖಾರ ಕುಟುಂಬಸ್ಥರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ ಎಂದು ಕೇಂದ್ರ ಸಚಿವರಾದ ಹರ್ಷವರ್ಧನ್ ಸಂತಾಪ ಸೂಚಿಸಿದ್ದಾರೆ.
Advertisement
Following may be contacted in Embassy of India, Addis Ababa for any assistance by families of Indian nationals who have died in ET302 crash on 10.03.2019:
(1) Mr. V Suresh, Second Secretary (Consular) Mobile: +251 911506852
(2) Mr. Mohan Lal, Head of Chancery, Mob.+251 911506851
— India in Ethiopia (@IndiaInEthiopia) March 10, 2019
ಇಥಿಯೋಪಿಯನ್ ಕಾಲಮಾನದ ಪ್ರಕಾರ ಭಾನುವಾರ ಬೆಳಗ್ಗೆ 8:38ಕ್ಕೆ ಟೇಕಾಫ್ ಆಗಿದ್ದ ವಿಮಾನ 8:44ಕ್ಕೆ ಸಂಪರ್ಕ ಕಳೆದುಕೊಂಡು ಅಪಘಾತಕ್ಕಿಡಾಗಿತ್ತು. ಒಟ್ಟು 33 ದೇಶದ ಪ್ರಯಾಣಿಕರು ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಆಡಿಸ್ ಅಬಬಾದಿಂದ 62 ಕಿ.ಮೀ ದೂರದಲ್ಲಿರುವ ಬಿಷೊಫ್ಟು ಬಳಿ ವಿಮಾನ ಪತನಗೊಂಡಿದ್ದು, ಒಟ್ಟು 157 ಪ್ರಯಾಣಿಕರು ಸಾವನ್ನಪ್ಪಿದ್ದಾರೆ.
My condolences to the families of four Indian nationals who have died in an unfortunate crash of Ethiopian Airlines.Sadly,a UNDP consultant attached to my ministry @moefcc Ms Shikha Garg,also died in the crash. My prayers for the departed souls. @IndiaInEthiopia @SushmaSwaraj
— Dr Harsh Vardhan (@drharshvardhan) March 10, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv