Connect with us

Crime

ಡಿವೈಡರ್‌ಗೆ ಹೊಡೆದು ಇನ್ನೊಂದು ಕಾರಿನ ಮೇಲೆ ಎಗರಿತು – 6 ಮಂದಿ ದುರ್ಮರಣ

Published

on

ಗದಗ: ಡಿವೈಡರ್‌ಗೆ ಡಿಕ್ಕಿ ಹೊಡೆದು ಎಗರಿ ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ 6 ಮಂದಿ ಮೃತಪಟ್ಟಿರುವ ಘಟನೆ ಗದಗದ ಮುಂಡರಗಿ ರಸ್ತೆಯ ರಿಂಗ್‍ರೋಡ್ ಬಳಿ ನಡೆದಿದೆ.

ಧಾರವಾರ ಜಿಲ್ಲೆಯ ಆನಂದ ಬೆಟಗೇರಿ, ಸಿದ್ದುಕೋರಿ ಶೆಟ್ಟಿ, ಮನೋಜ್‍ಕುಮಾರ್, ಕರಡಿಗುಡ್ಡ ಮತ್ತು ಅಮೃತ ಮೃತ ದುರ್ದೈವಿಗಳು. ಐ10 ಮತ್ತು ಐ20 ಎರಡು ಕಾರುಗಳ ಮಧ್ಯೆ ಈ ಭೀಕರ ಅಫಘಾತ ಸಂಭವಿಸಿದೆ.

ಒಂದು ಕಾರು ಗದಗ್ ನಿಂದ ಮುಂಡರಗಿಗೆ ಹೋಗುತ್ತಿತ್ತು. ಇನ್ನೊಂದು ಕಾರು ಮುಂಡರಗಿನಿಂದ ಗದಗಕ್ಕೆ ಬರುತ್ತಿತ್ತು. ಎರಡು ಕಾರುಗಳು ವೇಗವಾಗಿ ಬರುತ್ತಿದ್ದವು. ಈ ವೇಳೆ ಮುಂಡರಗಿ ರಸ್ತೆಯ ರಿಂಗ್‍ರೋಡ್ ಬಳಿ ಐ10 ಕಾರ್ ಡಿವೈಡರ್‌ಗೆ ಡಿಕ್ಕಿ ಹೊಡೆದು ಎಗರಿ, ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಐ20 ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಹೊಡೆದ ರಭಸಕ್ಕೆ ಐ20 ಕಾರ್ ಅಪ್ಪಚ್ಚಿಯಾಗಿದ್ದು, ಆ ಕಾರಿನಲ್ಲಿದ್ದ ಆರು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಇತ್ತ ಡಿವೈಡರ್‌ ನಿಂದ ಎಗರಿ ಡಿಕ್ಕಿ ಹೊಡೆದ ಕಾರಲ್ಲಿದ್ದವರು ಬಚಾವ್ ಆಗಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪ್ಪಚ್ಚಿಯಾದ ಕಾರಿನಲ್ಲಿದ್ದ ಮೃತದೇಹಗಳನ್ನು ಹೊರ ತೆಗೆಯಲು ಹರಸಾಹಸ ಪಟ್ಟಿದ್ದಾರೆ.

ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *